ನಿಗದಿಯಾಯಿತು ದಿನಾಂಕ, ಈ ತಾರೀಕಿನಂದು ರೈತರ ಖಾತೆಗೆ ಬೀಳುವುದು ಪಿಎಂ ಕಿಸಾನ್ 12 ನೇ ಕಂತು
PM Kisan 12th Instalment: ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತುಗಾಗಿ ರೈತರು ಕಾಯುತ್ತಿದ್ದಾರೆ. ಈ ಕಂತಿನ ಎರಡು ಸಾವಿರ ರೂಪಾಯಿಯನ್ನು ಆಗಸ್ಟ್ ಮತ್ತು ನವೆಂಬರ್ ನಡುವೆ ರೈತರ ಖಾತೆಗೆ ವರ್ಗಾಯಿಸಬೇಕು. ಸರ್ಕಾರ ನಿಗದಿಪಡಿಸಿದ ಇ-ಕೆವೈಸಿ ಗಡುವು ಕೂಡ ಮುಗಿದಿದೆ.
PM Kisan 12th Instalment : ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತುಗಾಗಿ ರೈತರು ಕಾಯುತ್ತಿದ್ದಾರೆ. ಈ ಕಂತಿನ ಎರಡು ಸಾವಿರ ರೂಪಾಯಿಯನ್ನು ಆಗಸ್ಟ್ ಮತ್ತು ನವೆಂಬರ್ ತಿಂಗಳ ನಡುವೆ ರೈತರ ಖಾತೆಗೆ ವರ್ಗಾಯಿಸಬೇಕು. ಸರ್ಕಾರ ನಿಗದಿಪಡಿಸಿದ ಇ-ಕೆವೈಸಿ ಗಡುವು ಕೂಡ ಮುಗಿದಿದೆ. ಗಡುವು ಮುಕ್ತಾಯವಾದರೂ ಹಲವು ಫಲಾನುಭವಿಗಳು ಇನ್ನು ಕೂಡಾ ಇ-ಕೆವೈಸಿ ಮಾಡಿಸಿಕೊಂಡಿಲ್ಲ.
ಸೆಪ್ಟೆಂಬರ್ 5 ರೊಳಗೆ ರೈತರ ಖಾತೆಗೆ ಹಣ ವರ್ಗಾವಣೆ :
ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣವನ್ನು ಆಧಾರ್ ಲಿಂಕ್ ಮಾಡಿದ ಖಾತೆಗೆ ಮಾತ್ರ ವರ್ಗಾಯಿಸಲಾಗುವುದು. ಸೆಪ್ಟೆಂಬರ್ 5ರೊಳಗೆ ಎಲ್ಲಾ ರೈತರ ಖಾತೆಗಳಿಗೆ ಯೋಜನೆಗೆ ಸಂಬಂಧಿಸಿದ ಮೊತ್ತವನ್ನು ವರ್ಗಾಯಿಸುವ ನಿರೀಕ್ಷೆ ಇದೆ. ಅನರ್ಹ ಫಲಾನುಭವಿಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ತಕ್ಷಣ ನಿಲ್ಲಿಸುವುದು ಮತ್ತು ಮತ್ತು ಅವರಿಂದ ಹಣವನ್ನು ರಿಕವರಿ ಮಾಡುವಲ್ಲಿ ಸರ್ಕಾರದ ತನ್ನ ಗಮನವನ್ನು ಕೇಂದ್ರೀಕರಿಸಿದೆ.
ಇದನ್ನೂ ಓದಿ : Train Ticket Lost: ರೈಲು ಟಿಕೆಟ್ ಕಳೆದು ಹೋದರೆ ಏನು ಮಾಡಬೇಕು?
ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂಪಾಯಿ ವರ್ಗ :
ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಇದರಲ್ಲಿ ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಎರಡು ಸಾವಿರ ರೂಪಾಯಿಯಂತೆ, ಮೂರು ಕಂತುಗಳಲ್ಲಿ ರೈತರ ಖಾತೆಗೆ ಹಣ ವರ್ಗಾಯಿಸಲಾಗುವುದು. ಆದರೆ ಇ-ಕೆವೈಸಿ ಪೂರ್ಣಗೊಳಿಸದೆ ಇರುವ ರೈತರ ಖಾತೆಗೆ ಮುಂದಿನ ಕಂತಿನ ಹಣವನ್ನು ವರ್ಗಾಯಿಸಲಾಗುವುದಿಲ್ಲ ಎನ್ನುವುದನ್ನು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರವು ಯೋಜನೆಗೆ e-KYC ಅನ್ನು ಕಡ್ದಾಯಗೊಳಿಸಿದಾಗಿನಿಂದ ಫಲಾನುಭವಿಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಆಗಸ್ಟ್ ಮತ್ತು ನವೆಂಬರ್ 2021 ರ ನಡುವೆ 9 ನೇ ಕಂತಿನ ಹಣವನ್ನು 11.19 ಕೋಟಿ ರೈತರು ಸ್ವೀಕರಿಸಿದ್ದಾರೆ. 11.15 ಕೋಟಿ ರೈತರು ಡಿಸೆಂಬರ್ 2021 ಮತ್ತು ಮಾರ್ಚ್ 2022 ರ ನಡುವೆ 10 ನೇ ಕಂತು ಪಡೆದಿದ್ದಾರೆ. ಆದರೆ 11ನೇ ಕಂತಿನಲ್ಲಿ ಫಲಾನುಭವಿಗಳ ಸಂಖ್ಯೆ 10.92 ಕೋಟಿಗೆ ಇಳಿದಿದೆ.
ಇದನ್ನೂ ಓದಿ : Gold Price Today : ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಕೂಡಾ ಅಗ್ಗ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.