FD Rules: ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ಈ ನಿಯಮದಲ್ಲಾದ ದೊಡ್ಡ ಬದಲಾವಣೆ ನಿಮಗೆ ತಿಳಿದಿರಲಿ.. ಇಲ್ದಿದ್ರೆ?

RBI New Rule For FD Deposit - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಇಡಲು ಯೋಜನೆ ರೂಪಿಸುತ್ತಿದ್ದರೆ, RBI ಬದಲಾವಣೆ ಮಾಡಿರುವ ಈ ನಿಯಮದ ಕುರಿತು ನಿಮಗೆ ತಿಳಿದಿರಬೇಕು. ಇಲ್ಲದಿದ್ದರೆ ನಿಮಗೆ ಹಾನಿಯಾಗುವ ಎಲ್ಲಾ ಸಾದ್ಯತೆಗಳಿವೆ.

Written by - Nitin Tabib | Last Updated : Aug 31, 2022, 09:41 PM IST
  • FD ಬಡ್ಡಿ ದರಕ್ಕೆ ಸಂಬಂಧಿಸಿದ ಬದಲಾದ ಈ ನಿಯಮ ನಿಮಗೆ ಗೊತ್ತಿರಲಿ.
  • ಪ್ರಸ್ತುತ ಹಕ್ಕು ಪಡೆಯದೇ ಬ್ಯಾಂಕ್ ಬಳಿ ಉಳಿದಿರುವ FDಗೆ ಉಳಿತಾಯ ಖಾತೆಯ ಬಡ್ಡಿದರ ಪಾವತಿಸಲಾಗುತ್ತದೆ.
  • ಇದೀಗ ಈ ಬಡ್ಡಿದರದಲ್ಲಿ RBI ಬದಲಾವಣೆ ಮಾಡಿದೆ.
FD Rules: ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ಈ ನಿಯಮದಲ್ಲಾದ ದೊಡ್ಡ ಬದಲಾವಣೆ ನಿಮಗೆ ತಿಳಿದಿರಲಿ.. ಇಲ್ದಿದ್ರೆ? title=
RBI FD Rule Change

RBI New Rule For FD Deposit - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಇರಿಸಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಿರ ಠೇವಣಿಯ ಬಡ್ಡಿದರಕ್ಕೆ ಸಂಬಂಧಿಸಿದಂತೆ ಇರುವ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಆರ್‌ಬಿಐನ  ಈ ಬದಲಾವಣೆಯು ಬ್ಯಾಂಕುಗಳಲ್ಲಿನ ಇರಿಸಲಾಗಿರುವ ಮತ್ತು ಮ್ಯಾಚ್ಯೂರ್ ಆಗಿರುವ ಸ್ಥಿರ ಠೇವಣಿ / ಅವಧಿಯ ಠೇವಣಿಯ ಅನ್ಕ್ಲೆಮ್ಡ್  ಮೊತ್ತದ ಬಡ್ಡಿಗೆ ಸಂಬಂಧಿಸಿದೆ.

ಇದನ್ನೂ ಓದಿ-Best Selling Scooter: Hero-TVS ಅಲ್ಲ, ಈ ಕಂಪನಿಯ ಸ್ಕೂಟರ್ ಗೆ ಗ್ರಾಹಕರ ಬೇಡಿಕೆ ಹೆಚ್ಚಾಗಿದೆ

ಈ ಕುರಿತು ಆರ್.ಬಿ. ಐ ನೀಡಿರುವ ಮಾಹಿತಿ ಪ್ರಕಾರ, FD ಮ್ಯಾಚ್ಯೂರಿಟಿ ಬಳಿಕ ಕ್ಲೇಮ್ ಮಾಡಲಾಗದೆ ಇರುವ ಮೊತ್ತದ ಮೇಲೆ ಸಿಗುವ ಬಡ್ಡಿಯನ್ನು ಸಮೀಕ್ಷೆ ನಡೆಸಲಾಗಿದೆ. ಸ್ಥಿರ ಠೇವಣಿಯ ನಿಗದಿತ ಅವಧಿ ಮುಕ್ತಾಯದ ನಂತರ ಮೊತ್ತ ಕ್ಲೇಮ್ ಮಾಡದೆ ಹಾಗೆಯೇ ಬ್ಯಾಂಕ್ ಬಳಿ ಉಳಿದಿದ್ದರೆ, ಅದರ ಮೇಲೆ ಬಡ್ಡಿ ದರ ಉಳಿತಾಯ ಖಾತೆಯ ಪ್ರಕಾರ ಅಥವಾ ಮ್ಯಾಚ್ಯುರ್ FD ಮೇಲಿನ ಬಡ್ಡಿ ದರ - ಯಾವುದು ಕನಿಷ್ಠ ಅದನ್ನು ಪರಿಗಣನೆಗೆ ತೆಗೆದುಕೊಂಡು ಲೆಕ್ಕಹಾಕಲಾಗುವುದು ಎಂದು RBI ಜಾರಿಗೊಳಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ-ಎಸ್‌ಬಿಐ ಬಳಕೆದಾರರಿಗೆ ಗುಡ್ ನ್ಯೂಸ್! ಈಗ ವಾಟ್ಸಾಪ್‌ನಲ್ಲಿಯೇ ಪೂರ್ಣಗೊಳ್ಳಲಿದೆ ಈ ಕೆಲಸ

ಈ ಹಿಂದೆ ಇದ್ದ ನಿಯಮದ ಪ್ರಕಾರ, ಒಂದೊಮ್ಮೆ  FD ಅವಧಿ ಪೂರ್ಣಗೊಂಡ ಬಳಿಕ ಮತ್ತು ಆ ಮೊತ್ತವನ್ನು ಕ್ಲೇಮ್ ಮಾಡದೆ ಹೋದರೆ, ಆ ಮೊತ್ತ ಬ್ಯಾಂಕ್ ಗಳ ಬಳಿ ಅನ್ ಕ್ಲೆಮ್ಡ್ ಪಟ್ಟಿಯಲ್ಲಿ ಹಾಗೆಯೇ ಇರುತ್ತಿತ್ತು ಮತ್ತು ಆ ಅನ್ಕ್ಲೆಮ್ಡ್ ಮೊತ್ತಕ್ಕೆ ಬ್ಯಾಂಕುಗಳು ಉಳಿತಾಯ ಖಾತೆಗೆ ಕೊಡುವ ಬಡ್ಡಿಯನ್ನು ಪಾವತಿಸುತ್ತಿದ್ದವು. ಒಂದು ನಿಗದಿತ ಅವಧಿಗೆ, ನಿಗದಿತ ಬಡ್ಡಿದರದ ಮೇಲೆ ಬ್ಯಾಂಕ್ ಗಳಲ್ಲಿ ಮಾಡಲಾಗುವ ಹೂಡಿಕೆಯನ್ನು ಸ್ಥಿರ ಠೇವಣಿ / ಅವಧಿಯ ಠೇವಣಿ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ರಿಕರಿಂಗ್, ಕಮ್ಯುಲೇಟಿವ್, ಎನ್ಯೂಟಿ, ರೀಇನ್ವೆಸ್ಟ್ಮೆಂಟ್ ಡಿಪಾಸಿಟ್ ಹಾಗೂ ಕ್ಯಾಶ್ ಸರ್ಟಿಫಿಕೆಟ್ ಗಳಂತಹ ಡಿಪಾಸಿಟ್ ಗಳು ಶಾಮೀಲಾಗಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News