Milk Price Hike: ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗಿದ್ದು, ಮುಂಜಾನೆ ಅಮುಲ್ ಗುಜರಾತ್ ಜನತೆಗೆ ಬಿಗ್ ಶಾಕ್ ನೀಡಿದೆ. ಅಮುಲ್ ಹಾಲಿನ ದರ ಮತ್ತೊಮ್ಮೆ ಏರಿಕೆಯಾಗಿದೆ. ಅಮುಲ್ ತಾಜಾ, ಶಕ್ತಿ, ಟೀ ಸ್ಪೆಷಲ್, ಹಸುವಿನ ಹಾಲು, ಚಾ ಮಜಾ, ಸ್ಲಿಮ್ ಮತ್ತು ಸ್ಟ್ರೀಮ್, ಎ ಟು ಹಸುವಿನ ಹಾಲು, ಎಮ್ಮೆ ಹಾಲು ಸೇರಿದಂತೆ ಬ್ರಾಂಡ್‌ಗಳ ಬೆಲೆಯಲ್ಲಿ ಇದೀಗ 2 ರೂ. ಹೆಚ್ಚಳ ಮಾಡಲಾಗಿದೆ. ಇದು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Good News: ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ


ವರದಿಗಳ ಪ್ರಕಾರ, ಹೊಸ ಬೆಲೆಗಳು ಇಂದಿನಿಂದ ಅನ್ವಯವಾಗುತ್ತವೆ. ಈಗ ಹೊಸ ಬೆಲೆಗಳ ಪ್ರಕಾರ, ಅಮುಲ್ ಗೋಲ್ಡ್ ಪ್ರತಿ ಲೀಟರ್‌ಗೆ 64 ರೂ., ಅಮುಲ್ ಶಕ್ತಿ 58 ರೂ. ಮತ್ತು ಅಮುಲ್ ಫ್ರೆಶ್ ಲೀಟರ್‌ಗೆ 52 ರೂ.ಗೆ ಮಾರಾಟವಾಗಲಿದೆ. ಇದರೊಂದಿಗೆ ಎಮ್ಮೆಯ ಹಾಲಿನ ದರವನ್ನು ಲೀಟರ್‌ಗೆ 4 ರೂ. ಹೆಚ್ಚಿಸಲಾಗಿದೆ. ಇದೀಗ ಅದು ಪ್ರತಿ 500 ಮಿಲಿಗೆ 34 ರೂ.ಗೆ ಮಾರಾಟವಾಗಲಿದೆ.


ಇದನ್ನೂ ಓದಿ-Post Office ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಹೊಡೀತು ಬಂಪರ್ ಲಾಟರಿ


ಆರು ತಿಂಗಳ ಅವಧಿಯಲ್ಲಿ ಅಮುಲ್ ಹಾಲಿನ ದರವನ್ನು ಇಷ್ಟು ಹೆಚ್ಚಿಸಿರುವುದು ಇದು ಎರಡನೇ ಬಾರಿ. ಇದು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಇದು ಮನೆಯ ಬಜೆಟ್ ಅನ್ನು ಅಸ್ತವ್ಯಸ್ತಗೊಳಿಸುತ್ತದೆ. ಈ ಬಾರಿ ತಾಜಾ, ಶಕ್ತಿ, ಟೀ ಸ್ಪೆಷಲ್, ಹಸುವಿನ ಹಾಲು, ಚಾ ಮಜಾ, ಸ್ಲಿಮ್ ಮತ್ತು ಸ್ಟ್ರೀಮ್, ಎ ಟೂನ್ ಹಸು ಹಾಲು, ಎಮ್ಮೆ ಹಾಲು ಸೇರಿದಂತೆ ಬ್ರಾಂಡ್‌ಗಳ ಬೆಲೆಯನ್ನು ನೇರವಾಗಿ 2 ರೂ.ಗಳಷ್ಟು ಹೆಚ್ಚಿಸಲಾಗಿದೆ.  ಅಷ್ಟೇ ಅಲ್ಲ, ಈಗ ಆಮ್ಲು ಟೀ ಸ್ಪೆಷಲ್ ಕೂಡ 29 ರೂ.ಗೆ ಬದಲಾಗಿ 500 ಎಂಎಲ್‌ಗೆ 30 ರೂ.ಗೆ ಮಾರಾಟವಾಗಲಿದೆ. ಅಮುಲ್ ಡಿಟಿಎಂ ಸ್ಲಿಮ್ ಮತ್ತು ಟ್ರಿಮ್ ಹಾಲಿನ ದರವನ್ನು ಈಗ 500 ಎಂಎಲ್‌ಗೆ 22 ರಿಂದ 23 ರೂ.ಗೆ ಹೆಚ್ಚಿಸಲಾಗಿದೆ.


ಇದನ್ನೂ ಓದಿ-Good News: ಹಿರಿಯ ನಾಗರಿಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ


ಇತ್ತೀಚೆಗೆ ಅಮುಲ್ ಡೈರಿಯು ಹಾಲು ಖರೀದಿಯಲ್ಲಿ ಪಶುಪಾಲಕರಿಗೆ ಪ್ರತಿ ಕೆಜಿ ಫ್ಯಾಟ್ ದರವನ್ನು 20 ರೂ. ಗಳ ವರೆಗೆ ಹೆಚ್ಚಿಸಿದೇ. ಅಂದರೆ ಇದೀಗ ಪಶುಪಾಲಕರಿಗೆ  ಪ್ರತಿ ಕೆಜಿ ಫ್ಯಾಟ್ ಗೆ  800 ರೂ.ನಿಂದ 820 ರೂ. ಸಿಗಲಿದೆ. ಇದಲ್ಲದೆ, ಹಾಲು ತುಂಬುವ ಸದಸ್ಯರಿಗೆ ಅಪಘಾತ ವಿಮೆ ನೀಡುವುದಾಗಿ ಘೋಷಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.