Good News: ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ

Sukanya Samruddhi Yojana 2023: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಉಳಿತಾಯ ಮಾಡಲು ಸರ್ಕಾರ ಉತ್ತಮ ಅವಕಾಶವನ್ನು ನೀಡಿದೆ. ಸುಕನ್ಯಾ ಸಮೃದ್ಧಿ ಯೋಜನೆಯಂತಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಮೇಲಿನ ಬಡ್ಡಿ ದರವನ್ನು ಸರ್ಕಾರ ಶೇ.7.6 ರಿಂದ ಶೇ.8ಕ್ಕೆ ಹೆಚ್ಚಿಸಿದೆ.  

Written by - Nitin Tabib | Last Updated : Mar 31, 2023, 07:55 PM IST
  • ಸುಕನ್ಯಾ ಸಮೃದ್ಧಿ ಯೋಜನೆಯಂತಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ.
  • ಸುಕನ್ಯಾ ಸಮೃದ್ಧಿ ಯೋಜನೆಯ ಮೇಲಿನ ಬಡ್ಡಿ ದರವನ್ನು ಸರ್ಕಾರ ಶೇ.7.6 ರಿಂದ ಶೇ.8ಕ್ಕೆ ಹೆಚ್ಚಿಸಿದೆ.
Good News: ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರಿಗೆ  ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ title=
ಸುಕನ್ಯಾ ಸಮೃದ್ಧಿ ಯೋಜನಾ ಹೊಸ ಅಪ್ಡೇಟ್

Sukanya Samruddhi Yojana Latest Update: ಹಣದುಬ್ಬರ ಏರಿಕೆಯ ನಡುವೆಯೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಉಳಿತಾಯ ಮಾಡಲು ಸರ್ಕಾರ ಉತ್ತಮ ಅವಕಾಶವನ್ನು ಕಲ್ಪಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆಯಂತಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಉಳಿತಾಯ ಯೋಜನೆಯಲ್ಲಿನ ಬಡ್ಡಿದರದಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್), ಸುಕನ್ಯಾ ಸಮೃದ್ಧಿ (ಎಸ್‌ಎಸ್‌ವೈ) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಯಂತಹ ಯೋಜನೆಗಳಿಗೆ ಹೆಚ್ಚಿನ ಬಡ್ಡಿ ಸಿಗಲಿದೆ ಎಂದು ಹೇಳಿದ್ದಾರೆ.

ಈ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೇ.0.70ರಷ್ಟು ಹೆಚ್ಚಿಸಲಾಗಿದೆ. ಈ ಯೋಜನೆಗಳ ಮೇಲಿನ ಈ ಹೆಚ್ಚಿದ ಬಡ್ಡಿ ದರವು ಏಪ್ರಿಲ್‌ನಿಂದ ಜೂನ್ 2023 ತ್ರೈಮಾಸಿಕದವರೆಗೆ ಅನ್ವಯಿಸಲಿವೆ. ಇದರೊಂದಿಗೆ, ಪಿಪಿಎಫ್ ಮೇಲಿನ ಬಡ್ಡಿದರವನ್ನು ಮೊದಲಿನಂತೆಯೇ ಕಾಯ್ದಿರಿಸಲಾಗಿದೆ, ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ಹಣಕಾಸು ಸಚಿವರು ಹೇಳಿದರು.

ಇದನ್ನೂ ಓದಿ-PPF Latest Update: ಪಿಪಿಎಫ್ ಹೂಡಿಕೆದಾರರಿಗೆ ಬಿಗ್ ಶಾಕ್!

ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು, ಮಾಸಿಕ ಆದಾಯ ಉಳಿತಾಯ ಯೋಜನೆಗಳು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ, ಎಲ್ಲಾ ಅಂಚೆ ಕಚೇರಿ ಟರ್ಮ್ ಠೇವಣಿಗಳು ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಬಡ್ಡಿದರವನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ-Big Update: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ, ಯಾವ ಯೋಜನೆಯ ಮೇಲೆ ಎಷ್ಟು ಬಡ್ಡಿ? ಇಲ್ಲಿದೆ ಪಟ್ಟಿ

ಹೊಸ ಬಡ್ಡಿ ದರಗಳು ಇಂತಿವೆ
>> ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೇ.8 ರಿಂದ ಶೇ.8.2ಕ್ಕೆ ಹೆಚ್ಚಿಸಲಾಗಿದೆ.
>> ಕಿಸಾನ್ ವಿಕಾಸ್ ಪತ್ರದ ಬಡ್ಡಿ ದರವನ್ನು ಶೇಕಡಾ 7.2 ರಿಂದ ಶೇಕಡಾ 7.5 ಕ್ಕೆ ಹೆಚ್ಚಿಸಲಾಗಿದೆ.
>> ಒಂದು, ಎರಡು, ಮೂರು ಮತ್ತು ಐದು ವರ್ಷಗಳ ಕಾಲಾವಧಿ ಠೇವಣಿಗಳ ಬಡ್ಡಿದರವನ್ನೂ ಹೆಚ್ಚಿಸಲಾಗಿದೆ.
>> ಮಾಸಿಕ ಆದಾಯ ಖಾತೆ (ಎಂಐಎಸ್) ಯೋಜನೆಗಳ ಬಡ್ಡಿ ದರವನ್ನು ಶೇ.7.1 ರಿಂದ ಶೇ.7.4ಕ್ಕೆ ಹೆಚ್ಚಿಸಲಾಗಿದೆ.
>> ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಬಡ್ಡಿ ದರವನ್ನು ಶೇ.7ರಿಂದ ಶೇ.7.7ಕ್ಕೆ ಹೆಚ್ಚಿಸಲಾಗಿದೆ.
>> ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಡ್ಡಿದರವನ್ನು ಶೇಕಡಾ 7.6 ರಿಂದ ಶೇಕಡಾ 8 ಕ್ಕೆ ಬದಲಾಯಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News