Indian Currency: ಹಳೆಯ ನಾಣ್ಯಗಳು ಮತ್ತು ನೋಟುಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು ಎಂದು ನೀವು ಮೊದಲೇ ಕೇಳಿರಬಹುದು. ಭಾರತ ಸರ್ಕಾರ ಒಂದು ರೂಪಾಯಿ ನೋಟು ಮುದ್ರಿಸುವುದನ್ನು ನಿಲ್ಲಿಸಿದೆ. ಆದರೆ ನಿಮ್ಮ ಬಳಿ ಹಳೆಯ 1 ರೂಪಾಯಿ ನೋಟು ಇದ್ದರೆ ಅದು ನಿಮಗೆ ಸಾವಿರಾರು ರೂಪಾಯಿಗಳನ್ನು ನೀಡುತ್ತದೆ. 


COMMERCIAL BREAK
SCROLL TO CONTINUE READING

ನಿಮ್ಮ ಬಳಿ ಈ ರೀತಿಯ ಒಂದು ರೂಪಾಯಿ ನೋಟು ಇದ್ದರೆ, ನಿಮಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ (Online Platform) ನಲ್ಲಿ  45,000 ರೂಪಾಯಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ 1957 ರಲ್ಲಿ ಆಗಿನ ರಿಸರ್ವ್ ಬ್ಯಾಂಕಿನ ಗವರ್ನರ್ ಎಚ್.ಎಂ.ಪಟೇಲ್ ಅವರ ಸಹಿ ಇರಬೇಕು. ಇದರೊಂದಿಗೆ ಈ ನೋಟಿನ ಸರಣಿ ಸಂಖ್ಯೆ 123456 ಆಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.


ಇದನ್ನೂ ಓದಿ - SBI ಡೆಬಿಟ್ ಕಾರ್ಡ್ EMI ಸೌಲಭ್ಯದ ಬಗ್ಗೆ ತಿಳಿದಿದೆಯಾ? ಗ್ರಾಹಕರಿಗೆ ಸಿಗಲಿದೆ ಭಾರೀ ಲಾಭ


ಇಂದಿಗೆ 26 ವರ್ಷಗಳ ಹಿಂದೆ ಒಂದು ರೂಪಾಯಿ ನೋಟು (Note) ಮುದ್ರಿಸದಿರಲು ಭಾರತ ಸರ್ಕಾರ ನಿರ್ಧರಿಸಿತು. ಆದರೆ 1 ಜನವರಿ 2015 ರಿಂದ, ಈ ನೋಟಿನ ಮುದ್ರಣವನ್ನು ಪುನರಾರಂಭಿಸಲಾಯಿತು. ಅದೇನೇ ಇದ್ದರೂ, ಅನೇಕ ಜನರು ಇನ್ನೂ ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ಅಭ್ಯಾಸ ಹೊಂದಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.


ಇದನ್ನೂ ಓದಿ - LPG Subsidy ಬರುತ್ತಿಲ್ಲವೇ? ಸಬ್ಸಿಡಿ ಪಡೆಯಲು ಇದು ಸುಲಭ ಮಾರ್ಗ


ಒಂದು ರೂಪಾಯಿಗೆ 45,000 ರೂ. ಪಡೆಯುವುದು ಹೇಗೆಂದು ತಿಳಿಯಿರಿ:
ಮಾಧ್ಯಮ ವರದಿಗಳ ಪ್ರಕಾರ, ಈ ಒಂದು ರೂಪಾಯಿ ನೋಟನ್ನು ಕ್ವೊಯಿನ್ ಮಾರುಕಟ್ಟೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಾರಾಟ ಮಾಡಬಹುದು. ಈ ಒಂದು ರೂಪಾಯಿ ಹಳೆಯ ನೋಟಿಗೆ ಸಂಪೂರ್ಣ 49,999 ರೂ. ಆದರೆ ರಿಯಾಯಿತಿಯ ನಂತರ, ವೆಬ್‌ಸೈಟ್ ಇದಕ್ಕಾಗಿ 44,999 ರೂ.ಗಳನ್ನು ನಿಗದಿಪಡಿಸಿದೆ. ಇದಕ್ಕಾಗಿ, ನೀವು ವೆಬ್‌ಸೈಟ್‌ನ ಶಾಪ್ ವಿಭಾಗಕ್ಕೆ ಹೋಗಬೇಕಾಗುತ್ತದೆ. ಇದರ ನಂತರ, ನೀವು ನಾಟ್ ಬಂಡಲ್ ವರ್ಗಕ್ಕೆ ಹೋಗಬೇಕು. ಅಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.