PAN Aadhaar Link:ಮತ್ತೆ ವಿಸ್ತರಣೆಯಾದ ಆಧಾರ್-ಪ್ಯಾನ್ ಜೋಡಣೆಯ Deadline
PAN Aadhaar Link: ಕೇಂದ್ರೀಯ ನೇರ ತೆರಿಗೆ ಮಂಡಳಿ (Central Board of Direct Taxes) ಈ ಕುರಿತು ನೋಟಿಫಿಕೆಶನ್ ಬಿಡುಗಡೆ ಮಾಡಿದೆ.
PAN Aadhaar Link: ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಇದೀಗ ಅದನ್ನು 31 ಮಾರ್ಚ್ 2022 ರವರೆಗೆ ನೀವು ಜೋಡಣೆ ಮಾಡಬಹುದು. ಈ ಗಡುವು 30 ಸೆಪ್ಟೆಂಬರ್ 2021 ರಂದು ಮುಕ್ತಾಯಗೊಳ್ಳಬೇಕಿತ್ತು. CBDT (Central Board of Direct Taxes) ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದ್ದು, ಕರೋನಾ ಸಾಂಕ್ರಾಮಿಕದಿಂದ (Corona Pandemic) ಉದ್ಭವಿಸಿದ ಕಷ್ಟಕರ ಪರಿಸ್ಥಿತಿ ಮತ್ತು ವಿವಿಧ ಸ್ಟೆಕ್ ಹೋಲ್ಡರ್ಸ್ ಮನವಿಗಳ ಮೇರೆಗೆ ಪ್ಯಾನ್ (PAN Card) ಅನ್ನು ಆಧಾರ್‌ನೊಂದಿಗೆ (Aadhaar Card) ಜೊತೆಗೆ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಲಾಗುತ್ತಿದೆ ಎಂದು ಹೇಳಲಾಗಿದೆ.
CBDT ಹೇಳಿದ್ದೇನು?
ಸಿಬಿಡಿಟಿ ಹೇಳಿಕೆಯ ಪ್ರಕಾರ, "ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಗೆ ಆಧಾರ್ ಸಂಖ್ಯೆಯನ್ನು ತಿಳಿಸುವ ಗಡುವನ್ನು ಸೆಪ್ಟೆಂಬರ್ 30, 2021 ರಿಂದ ಮಾರ್ಚ್ 31, 2022 ರವರೆಗೆ ವಿಸ್ತರಿಸಲಾಗಿದೆ." ಎನ್ನಲಾಗಿದೆ. ಇದಲ್ಲದೆ, ಆದಾಯ ತೆರಿಗೆ ಕಾಯಿದೆಯಡಿ ದಂಡದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕವನ್ನು ಕೂಡ ವಿಸ್ತರಿಸಲಾಗಿದೆ, ಇದು ಮೊದಲು ಸೆಪ್ಟೆಂಬರ್ 30, 2021 ವರೆಗೆ ಮಾತ್ರ ಇತ್ತು. ಇದೀಗ ಅದನ್ನು ಮಾರ್ಚ್ 31, 2022 ಕ್ಕೆ ವಿಸ್ತರಿಸಲಾಗಿದೆ. ಈ ದಿನಾಂಕದೊಳಗೆ ಆಧಾರ್-ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯವೆಂದು ಘೋಷಿಸಲಾಗುತ್ತದೆ.
ಎರಡೂ ದಾಖಲೆಗಳನ್ನು ಪರಸ್ಪರ ಜೋಡಿಸದೇ ಹೋದಲ್ಲಿ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ
ಆದಾಯ ತೆರಿಗೆ ವೆಬ್‌ಸೈಟ್ incometaxindia.gov.in ಪ್ರಕಾರ, ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಅದು ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಸಿಬಿಡಿಟಿ ಅಂದರೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ನಿಯಮ 114 ಎಎಎ (Income Tax Act) ಅಡಿಯಲ್ಲಿ ಪ್ಯಾನ್ ಹೇಗೆ ಅನುಪಯುಕ್ತವಾಗಲಿದೆ ಮತ್ತು ಅದರ ಪರಿಣಾಮಗಳೇನು ಎಂಬುದನ್ನು ತಿಳಿಸಿದೆ. ನಿಯಮಗಳ ಪ್ರಕಾರ, ಯಾರೊಬ್ಬರ ಪ್ಯಾನ್ ಕಾರ್ಡ್ ಕೆಲಸ ಮಾಡುವುದನ್ನು ನಿಲ್ಲಿಸಿದರೆ, ಅವನು ಪ್ಯಾನ್ ಅನ್ನು ಪೂರ್ಣಗೊಳಿಸಿಲ್ಲ, ಅಥವಾ ಹೇಳಿಲ್ಲ ಮತ್ತು (urnished, intimated or quoted) ಅಥವಾ ಅದನ್ನು ಪ್ರಸ್ತುತಪಡಿಸಿಲ್ಲ ಎಂದು ಪರಿಗಣಿಸಲಾಗುತ್ತದೆ. ಇದರ ಅಡಿಯಲ್ಲಿ, ಅವರು ಎಲ್ಲಾ ವಿಷಯಗಳಿಗೆ ಜವಾಬ್ದಾರರಾಗಿರುತ್ತಾರೆ, ಅಂದರೆ ಪೂರ್ಣಗೊಳಿಸದಿರುವುದು, ಪ್ಯಾನ್ ಅನ್ನು ಬಹಿರಂಗಪಡಿಸದಿರುವುದು ಮತ್ತು ಅದನ್ನು ಪ್ರಸ್ತುತಪಡಿಸದಿರುವುದು. ಆದರೆ ಜೋಡಣೆಯ ಕುರಿತು ಇಲಾಖೆಗೆ ತಿಳಿಸುವ ಮೂಲಕ ವ್ಯಕ್ತಿ ತನ್ನ ಪ್ಯಾನ್ ಕಾರ್ಡ್ ಅನ್ನು ಸಕ್ರೀಯಗೊಳಿಸಬಹುದು.
ಇದನ್ನೂ ಓದಿ- Lal Kitab : ಮನೆ ಖರೀದಿಸುವ ಮುನ್ನ ಅಥವಾ ಕಟ್ಟುವ ಮೊದಲು, ಈ ಪ್ರಮುಖ ವಿಷಯಗಳನ್ನು ಮರೆಯದೆ ಪರಿಶೀಲಿಸಿ
ರೂ.1000 ಪೆನಾಲ್ಟಿ
ಈ ದಿನಾಂಕದೊಳಗೆ ಯಾರಾದರೂ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಅವರು ದಂಡವನ್ನು ಪಾವತಿಸಬೇಕಾಗಲಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಸೆಕ್ಷನ್ 234H ಅಡಿಯಲ್ಲಿ, ಇದು ಗರಿಷ್ಠ 1000 ರೂ. ಆಗಿರಲಿದೆ. ವಿಶೇಷವೆಂದರೆ ಈ ಎರಡನ್ನು ಜೋಡಿಸದಿದ್ದರೆ, ಅದು ಇತರ ಪರಿಣಾಮಗಳ ಹೊರತು ಇರಲಿದೆ.
ಇದನ್ನೂ ಓದಿ-Viral Video : Taliban ಬೆಂಬಲಿಸಿ ಟಿವಿ ಸುದ್ದಿ ನಿರೂಪಕಿ ಲೈವ್ ಷೋನಲ್ಲಿ ಮಾಡಿದ್ದೇನು?
ಕೇವಲ SMS ಮೂಲಕ ಈ ಕೆಲಸ ಮಾಡಿ
ಯಾವುದೇ ರೀತಿಯ ತೊಂದರೆಗಳನ್ನು ತಪ್ಪಿಸಲು, ಪ್ರತಿಯೊಬ್ಬರೂ ಈ ಗಡುವಿನೊಳಗೆ ಪ್ಯಾನ್ ಜೊತೆಗೆ ಆಧಾರ್ ಅನ್ನು ಲಿಂಕ್ ಮಾಡಬೇಕು. ಇಂದಿನ ಕಾಲದಲ್ಲಿ, ಆಧಾರ್ ಕಾರ್ಡ್ ದೇಶದ ಪ್ರಮುಖ ದಾಖಲೆಯಾಗಿದೆ. ನಿಮಗೆ ಬಹುತೇಕ ಎಲ್ಲ ಕೆಲಸಕ್ಕೂ ಈ ದಾಖಲೆ ಬೇಕೇ ಬೇಕು. ಈ ಎರಡನ್ನು ಲಿಂಕ್ ಮಾಡುವುದು ಕಷ್ಟದ ಕೆಲಸವಲ್ಲ. SMS ಕಳುಹಿಸುವ ಮೂಲಕ ನೀವು ಈ ಕೆಲಸವನ್ನು ಮಾಡಬಹುದು.
ಇದನ್ನೂ ಓದಿ-LPG ಸಿಲಿಂಡರ್ ಬುಕಿಂಗ್ ಮೇಲೆ ಬಂಪರ್ ಆಫರ್ : ಸಿಗಲಿದೆ 2500 ರೂ.ಗಳಿಗಿಂತ ಹೆಚ್ಚು ಕ್ಯಾಶ್ ಬ್ಯಾಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.