New PF Tax Rules: ನಿಮ್ಮ ಪ್ರಾವಿಡೆಂಟ್ ಫಂಡ್ ನಲ್ಲಿ ಎರಡು ಖಾತೆಗಳು, 9D ನಿಯಮದಿಂದ ನಿಮಗಾಗುವ ಬದಲಾವಣೆ ಏನು?

New PF Tax Rules: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಭವಿಷ್ಯ ನಿಧಿಗೆ (PF) ನೀಡಿದ ಕೊಡುಗೆ ಮತ್ತು ಅದರಿಂದ ಗಳಿಸಿದ ಬಡ್ಡಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಹೊರಡಿಸಿದೆ. ಈ ಹೊಸ ನಿಯಮಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Sep 13, 2021, 07:40 PM IST
  • CBDT, PFಗೆ ನೀವು ನೀಡುವ ಕೊಡುಗೆ ಮತ್ತು ಅದರಿಂದ ಗಳಿಸಿದ ಬಡ್ಡಿಗೆ ಸಂಬಂಧಿಸಿದಂತೆ ಹೊಸ ನಿಯಮ ಹೊರಡಿಸಿದೆ.
  • ಹೊಸ ನಿಯಮಗಳ ಪ್ರಕಾರ, ಇದೀಗ ಒಟ್ಟು ಎರಡು ಖಾತೆಗಳನ್ನು ಭವಿಷ್ಯ ನಿಧಿಯಲ್ಲಿ ರಚಿಸಲಾಗುತ್ತಿದೆ.
  • ಈ ಹೊಸ ನಿಯಮಗಳು ಯಾವುವು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
New PF Tax Rules: ನಿಮ್ಮ ಪ್ರಾವಿಡೆಂಟ್ ಫಂಡ್ ನಲ್ಲಿ ಎರಡು ಖಾತೆಗಳು, 9D ನಿಯಮದಿಂದ ನಿಮಗಾಗುವ ಬದಲಾವಣೆ ಏನು? title=
New PF Tax Rules: (File Photo)

New PF Tax Rules: ಭವಿಷ್ಯ ನಿಧಿ- ನಿಮ್ಮ ಉಳಿತಾಯ, ನಿವೃತ್ತಿ ಯೋಜನೆಗಳು ಸಹ ತೆರಿಗೆಗೆ ಒಳಪಟ್ಟಿವೆ. ಆದರೆ ಇದೀಗ ಅವುಗಳಿಗೆ ಕೆಲವು ನಿಯಮಗಳನ್ನು ಸೇರಿಸಲಾಗಿದೆ. ಇಲ್ಲಿಯವರೆಗೆ, ಭವಿಷ್ಯ ನಿಧಿಯ ಕೊಡುಗೆ ಅಥವಾ ಅದರಿಂದ ಪಡೆದ ಬಡ್ಡಿಗೆ ಯಾವುದೇ ತೆರಿಗೆ ಇರಲಿಲ್ಲ. ಆದರೆ, 2021 ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) 2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆಯ ಮೇಲೆ ಗಳಿಸಿದ ಬಡ್ಡಿಯನ್ನು ತೆರಿಗೆಗೆ ಒಳಪಡಿಸುವುದಾಗಿ ಘೋಷಿಸಿದ್ದರು. ಆದರೆ ಈ ನಿಯಮಕ್ಕೆ ಸಾಕಷ್ಟು ವಿರೋಧ ಎದುರಾದ ಕಾರಣ ಸರ್ಕಾರ ಕೂಡ ಅದನ್ನು ಪರಿಶೀಲಿಸಿದೆ. ಇದೀಗ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) EPF ಮೇಲಿನ ತೆರಿಗೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೊಸ ನಿಯಮಗಳನ್ನು ಆಗಸ್ಟ್ 31 ರಂದು ಸುತ್ತೋಲೆಯ ಬಿಡುಗಡೆ ಮಾಡುವ ಮೂಲಕ ತಿಳಿಸಲಾಗಿದೆ.  ಹಾಗಾದರೆ ಬನ್ನಿ ಹೊಸ ನಿಯಮಗಳು ಯಾವುವು ಮತ್ತು ಅವುಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲಿವೆ ತಿಳಿದುಕೊಳ್ಳೋಣ.

EPFಗೆ ಸಂಬಂಧಿಸಿದ ಹೊಸ ನಿಯಮ
ಹಣಕಾಸು ಕಾಯ್ದೆ 2021 (Finance Act 2021) ರಲ್ಲಿ ಇದೀಗ ಹೊಸ ನಿಬಂಧನೆಯನ್ನು ಸೇರಿಸಲಾಗಿದೆ. ಆರ್ಥಿಕ ವರ್ಷದಲ್ಲಿ ಉದ್ಯೋಗಿ ತನ್ನ ಭವಿಷ್ಯ ನಿಧಿಯಲ್ಲಿ ರೂ 2.5 ಲಕ್ಷಕ್ಕಿಂತ ಹೆಚ್ಚು ಕೊಡುಗೆ ನೀಡಿದರೆ, ರೂ 2.5 ಲಕ್ಷಕ್ಕಿಂತ ಹೆಚ್ಚಿನ ಹೂಡಿಕೆಯ ಮೇಲೆ ಗಳಿಸಿದ ಬಡ್ಡಿಯು ತೆರಿಗೆ ವ್ಯಾಪ್ತಿಗೆ ಬರಲಿದೆ ಎಂದು ಅದು ಹೇಳಿದೆ. ಸರಳವಾಗಿ ಹೇಳುವುದಾದರೆ, ಯಾರಾದರೂ 3 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಹೆಚ್ಚುವರಿ ಹೂಡಿಕೆಯಾದ ರೂ. 50000 ಮೇಲೆ ಅವರು ಗಳಿಸುವ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಆದರೆ, ಭವಿಷ್ಯ ನಿಧಿಗೆ ಯಾವುದೇ ಕಂಪನಿಯ ಕೊಡುಗೆಯನ್ನು ಹೊಂದಿರದ ಉದ್ಯೋಗಿಗಳ ಸಂದರ್ಭದಲ್ಲಿ, ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎನ್ನಲಾಗಿದೆ. ಇದೇ ವೇಳೆ  ಕೇಂದ್ರ ಸರ್ಕಾರದ (Central Government)  ಉದ್ಯೋಗಿಗಳಿಗೆ ಈ ಮಿತಿ 5 ಲಕ್ಷ ರೂಪಾಯಿಗಳಾಗಿದೆ.

ಹೊಸ ನಿಯಮಗಳ ಪ್ರಕಾರ, ಇದೀಗ ಒಟ್ಟು ಎರಡು ಖಾತೆಗಳನ್ನು ಭವಿಷ್ಯ ನಿಧಿಯಲ್ಲಿ ರಚಿಸಲಾಗುತ್ತಿದೆ.  ಮೊದಲ ಖಾತೆ ತೆರಿಗೆ (Income Tax) ಹೊಂದಿದ ಖಾತೆ ಮತ್ತು ಎರಡನೇ ಖಾತೆ ತೆರಿಗೆಯಿಲ್ಲದ ಖಾತೆಯಾಗಿರಲಿದೆ. ಇದಕ್ಕಾಗಿ CBDT ನಿಯಮ 9D ನೋಟಿಫೈ ಮಾಡಲಾಗಿದೆ.  ಇದರಲ್ಲಿ ಭವಿಷ್ಯ ನಿಧಿ ಕೊಡುಗೆಯ ಮೇಲೆ ಪಡೆದ ಬಡ್ಡಿಯ ಮೇಲೆ ತೆರಿಗೆಯನ್ನು ಲೆಕ್ಕ ಹಾಕಲಾಗುತ್ತದೆ (Tax On EPF Contribution). ತೆರಿಗೆ ವಿಧಿಸುವ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಹೊಸ ನಿಯಮ 9 ಡಿ ವಿವರಿಸುತ್ತದೆ. ಇದರ ಜೊತೆಗೆ ಎರಡು ಖಾತೆಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಯಾವ ಕಂಪನಿಗಳು ಏನು ಮಾಡಬೇಕು ಎಂಬುದನ್ನು ಹೇಳಲಾಗಿದೆ.

ತೆರಿಗೆ ರಹಿತ ಖಾತೆ
ಯಾರಾದರೂ ತನ್ನ ಇಪಿಎಫ್ ಖಾತೆಯಲ್ಲಿ 5 ಲಕ್ಷ ಠೇವಣಿ ಇಟ್ಟಿದ್ದರೆ, ಹೊಸ ನಿಯಮದ ಪ್ರಕಾರ, ಮಾರ್ಚ್ 31, 2021 ರವರೆಗೆ ಠೇವಣಿ ಇರಿಸಿದ ಮೊತ್ತವನ್ನು ತೆರಿಗೆ ಇಲ್ಲದೆ ಖಾತೆಗೆ ಜಮಾ ಮಾಡಲಾಗುತ್ತದೆ. ಇದಕ್ಕೆ ಯಾವುದೇ  ರೀತಿಯ ತೆರಿಗೆ ಇರುವುದಿಲ್ಲ.

ತೆರಿಗೆ ಹೊಂದಿದ ಖಾತೆ
ಪ್ರಸಕ್ತ ಹಣಕಾಸು ವರ್ಷದಲ್ಲಿ, ಒಬ್ಬರ ಇಪಿಎಫ್ ಖಾತೆಯಲ್ಲಿ 2.50 ಲಕ್ಷ ರೂ.ಗಿಂತ ಹೆಚ್ಚು ಹಣವನ್ನು ಠೇವಣಿ ಮಾಡಿದರೆ, ಹೆಚ್ಚುವರಿ ಮೊತ್ತದ ಮೇಲೆ ಪಡೆದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಇದರ ಮೇಲೆ ಲೆಕ್ಕಾಚಾರ ಮಾಡಲು ಉಳಿದ ಹಣವನ್ನು ತೆರಿಗೆಯ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ. ಅದರಲ್ಲಿ ಗಳಿಸಿದ ಬಡ್ಡಿಯ ಮೇಲೆ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.

ನಿಮ್ಮ EPF ಕುರಿತಾದ ತರಿಗೆ ಲೆಕ್ಕಾಚಾರ ಹೇಗಿರಲಿದೆ?
31 ಮಾರ್ಚ್ 2021 ರೊಳಗೆ ಪ್ರಾವಿಡೆಂಟ್ ಫಂಡ್ ಖಾತೆಯಲ್ಲಿ 5 ಲಕ್ಷ ರೂಪಾಯಿಗಳಿದ್ದರೆ. ಆರ್ಥಿಕ ವರ್ಷದಲ್ಲಿ 3 ಲಕ್ಷ ರೂ. ಕೊಡುಗೆ ನೀಡಲಾಗಿದ್ದರೆ ಮತ್ತು ಕಂಪನಿಯ ಪರವಾಗಿ ಅದೇ ಮೊತ್ತವನ್ನು ಖಾತೆಗೆ ಹಾಕಲಾಗಿದ್ದರೆ.  ತೆರಿಗೆಯ ಮತ್ತು ತೆರಿಗೆ ರಹಿತ ಖಾತೆಗಳ ತೆರಿಗೆಯ ಲೆಕ್ಕಾಚಾರವು ಈ ರೀತಿ ಆಗಿರಲಿದೆ.

ಇದನ್ನೂ ಓದಿ-ಸರ್ಕಾರಿ ನೌಕರರಿಗಾಗಿ ಬ್ಯಾಂಕ್ ಪರಿಚಯಿಸಿದೆ ಹೊಸ Salary Plus Account Scheme, ಉಚಿತವಾಗಿ ಸಿಗಲಿದೆ ಒಂದು ಕೋಟಿವರೆಗಿನ ಪ್ರಯೋಜನಗಳು

ತೆರಿಗೆ ಸಹಿತ ಕೊಡುಗೆ
300000-250000= 50000 ಮೇಲೆ ಸಿಗುವ ಬಡ್ಡಿ ತೆರಿಗೆ ಅಡಿಯಲ್ಲಿ ಬರಲಿದೆ.

ತೆರಿಗೆ ರಹಿತ ಕೊಡುಗೆ
500000+250000 ರೂ. = 750000 ರೂ.ಮೇಲೆ ಬಡ್ಡಿ ಸಿಗಲಿದೆ.

ಇದನ್ನೂ ಓದಿ- Atal Pension Yojana: ವಿವಾಹಿತರಿಗೆ ಭಾರೀ ಲಾಭವಾಗಲಿದೆ ಈ ಸರ್ಕಾರಿ ಯೋಜನೆ , ಪ್ರತಿ ತಿಂಗಳು ಸಿಗಲಿದೆ 10,000 ಪಿಂಚಣಿ

PF ಹೊಸ ನಿಯಮಗಳೇನು?
20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಇಪಿಎಫ್‌ಒ ವ್ಯಾಪ್ತಿಗೆ ಬರುತ್ತವೆ. ಇದೇ ವೇಳೆ ಈ ಕಂಪನಿಗಳಲ್ಲಿ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ನೌಕರರಿಗೆ ಹೊಸ ನಿಯಮದಿಂದ EPF ಅನಿವಾರ್ಯವಾಗಲಿದೆ.  ಮೂಲ ವೇತನದ 12% ಮತ್ತು ಉದ್ಯೋಗಿಗಳ ಭತ್ಯೆಯ ಕೊಡುಗೆಯನ್ನು PF ಖಾತೆಯಲ್ಲಿ ಜಮಾ ಮಾಡಲಾಗುತ್ತದೆ. ಇದಕ್ಕೆ ಕಂಪನಿ ಕೂಡ  12% ಕೊಡುಗೆ ನೀಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಖಾಸಗಿ ವಲಯದ ಇಪಿಎಫ್ ಖಾತೆಗಳನ್ನು ನಿರ್ವಹಿಸುತ್ತದೆ. ಅದೇ ಸಮಯದಲ್ಲಿ, ಸರ್ಕಾರಿ ನೌಕರರ ಖಾತೆಗಳನ್ನು ಸಾಮಾನ್ಯ ಭವಿಷ್ಯ ನಿಧಿ (GPF) ನಿರ್ವಹಿಸುತ್ತದೆ. ಈ ಎಲ್ಲಾ ಖಾತೆಗಳಿಗೆ ಹೊಸ ನಿಯಮ ಅನ್ವಯವಾಗುತ್ತದೆ.

ಇದನ್ನೂ ಓದಿ-ಇನ್ನು ಆಧಾರ್ ಕಾರ್ಡ್ ನಂತೆಯೇ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್ ಕಾರ್ಡ್, ಯಾಕೆಬೇಕು ಈ ಕಾರ್ಡ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News