ನವದೆಹಲಿ:  Punjab National Bank Free Training - ಮಹಿಳೆಯರ ಸಬಲೀಕರಣಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (Panjab National Bank) ಹಲವು ಸೌಕರ್ಯಗಳನ್ನು ಒದಗಿಸುತ್ತದೆ. ಇದೀಗ ಮತ್ತೊಮ್ಮೆ ಸಾರ್ವಜನಿಕ ವಲಯದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷವಾಗಿ ಮಹಿಳೆಯರಿಗೆಂದೇ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಸರ್ಕಾರ ಕೂಡ ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲ ಮಹಿಳೆಯರು ಈ ಕಾರ್ಯಕ್ರಮಕ್ಕಾಗಿ ಉಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ. ನೀವೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯುಸುತ್ತಿದ್ದರೆ, ಕೆಲ ಮಹತ್ವದ ಸಂಗತಿಗಳನ್ನು ಗಮನದಲ್ಲಿಡಬೇಕು.


Punjab National Bank) ಈ ಕಾರ್ಯಕ್ರಮಕ್ಕೆ 'ಎಂಪೌರಿಂಗ್ ವಿಮೆನ್ ಥ್ರೂ ಅಂತ್ರಾಪ್ರಿನ್ಯೂರ್ ಶಿಪ್ (Empowering Women Through Entrepreneurship)' ಹೆಸರನ್ನಿಟ್ಟಿದೆ. ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನೀವು   https://innovateindia.mygov.in/ncw-challenge/ ಜಾಲತಾಣಕ್ಕೆ ಭೇಟಿ ನೀಡಬಹುದು.


COMMERCIAL BREAK
SCROLL TO CONTINUE READING

ಎಷ್ಟು ವಾರಗಳವರೆಗೆ ಈ ಕೋರ್ಸ್ ನಡೆಯಲಿದೆ
ಈ ಕಾರ್ಯಕ್ರಮದ ಅಡಿ ಮಹಿಳೆಯರಿಗೆ ಒಟ್ಟು ವಾರಗಳ ವಾರಗಳವರೆಗೆ ತರಬೇತಿ ನೀಡಲಾಗುತ್ತಿದೆ. ಇದೊಂದು ಆಕ್ಷನ್ ಓರಿಎಂಟೆಡ್ ಬಿಸಿನೆಸ್ ಹಾಗೂ ಮ್ಯಾನೇಜ್ಮೆಂಟ್ ಕೋರ್ಸ್ ಆಗಿದೆ. ಈ ಕಾರ್ಯಕ್ರಮದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಜೊತೆಗೆ ವೈಜ್ಞಾನಿಕ ಸಂಗತಿಗಳು ಹಾಗೂ ಅವಕಾಶಗಳ ಪರೀಕ್ಷೆಯ ಕುರಿತು ಮಾಹಿತಿ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಯಾವುದೇ ಪ್ರದೇಶಲ್ಲಿರುವ ಮಹಿಳೆಯರು ಭಾಗವಹಿಸಬಹುದು. ಈ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪ್ರತಿಭಾನ್ವಿತ ಮಹಿಳೆಯರಿಗೆ 'ಡೂ ಯುವರ್ ವೆಂಚರ್' ವಿಚಾರಧಾರೆಯ ಅಡಿ ಉದ್ಯೋಗ ಆರಂಭಿಸುವ ಮಾರ್ಗ ತೋರಿಸಲಾಗುವುದು. 


ಇದನ್ನೂ ಓದಿ-ಹೈಟೆಕ್ ಆದ PNB, ಹೊಸ ವ್ಯವಸ್ಥೆಯಲ್ಲಿ ತಕ್ಷಣವೇ ಸಿಗುತ್ತೆ ಸಾಲ


ಈ ಷರತ್ತುಗಳು ಅನ್ವಯ
>>ಈ ಕೋರ್ಸ್ ಗಾಗಿ ನೀವು ನಿತ್ಯ 3 ರಿಂದ 4 ಗಂಟೆ ಸಮಯಾವಕಾಶ ನೀಡಬೇಕು.
>>ಕಾರ್ಯಕ್ರಮದಲ್ಲಿ ಭಾಗವಹಿಸುವವರ ವಯಸ್ಸು 18 ಕ್ಕಿಂತ ಹೆಚ್ಚಾಗಿರಬೇಕು.
>>ಭಾಗವಹಿಸಲು ಇಚ್ಚಿಸುವ ಮಹಿಳೆಯರು ಭಾರತೀಯ ಮೂಲದವರಾಗಿರಬೇಕು.
>>ಕಾರ್ಯಕ್ರಮದಲ್ಲಿ ಭಾಗವಹಿಸಲು ನೀವು ಕನಿಷ್ಠ ಅಂದರೆ ಸುಮಾರು 5 ನಿಮಿಷಗಳ ವಿಡಿಯೋವೊಂದನ್ನು ಕಳುಹಿಸಬೇಕು.
>>ಈ ವಿಡಿಯೋ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿರಬೇಕು.
>>ಬಳಿಕ ನೀವು ಆ ವಿಡಿಯೋ ಅನ್ನು ಯುಟ್ಯೂಬ್ ಅಥವಾ ವಾಯಿಮೋ ಮೂಲಕ ಕಳುಹಿಸಬೇಕು.


ಇದನ್ನೂ ಓದಿ- ಮಹಿಳೆಯರಿಗಾಗಿ PNB ವತಿಯಿಂದ ವಿಶೇಷ ಸ್ಕೀಮ್, ದ್ವಿಚಕ್ರ ವಾಹನ ಖರೀದಿಗೆ ಜಬರ್ದಸ್ತ್ ಆಫರ್


ಒಟ್ಟು 5 ಸಾವಿರ ಮಹಿಳೆಯರ ಆಯ್ಕೆ 
ಈ ಕಾರ್ಯಕ್ರಮದ ಉದ್ಯಮಿಯಾಗಲು ಕನಸು ಕಾಣುವ ಸುಮಾರು 5000 ಮಹಿಳೆಯರನ್ನು ಆಯ್ಕೆ ಮಾಡಲಾಗುವುದು. ಆಯ್ದ ಮಹಿಳೆಯರಿಗೆ IIM ಪ್ರೊಫೆಸರ್ ಗಳು ತರಬೇತಿ ನೀಡಲಿದ್ದಾರೆ.


ಇದನ್ನೂ ಓದಿ-.Old Cheque Book Valid News : ಜೂನ್ ೩೦ರವರೆಗೆ ಮಾತ್ರ ಮಾನ್ಯವಾಗಿರಲಿದೆ ಹಳೆಯ ಚೆಕ್ ಬುಕ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.