ಪ್ರತಿ ವ್ಯಾಪಾರ ಮತ್ತು ಪ್ರತಿಯೊಂದು ವಹಿವಾಟಿಗೆ ಪೇಟಿಎಂ ಆಲ್-ಇನ್-ಒನ್ POS!
ಪೇಟಿಎಂ ಆಲ್-ಇನ್-ಒನ್ POSನೊಂದಿಗೆ ನೀವು ಪಾವತಿ ಮೂಲದ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಗ್ರಾಹಕರು 7 ಪಾವತಿ ವಿಧಾನಗಳಿಂದ ಆಯ್ಕೆ ಮಾಡಬಹುದು.
ಬೆಂಗಳೂರು: ಎಲೆಕ್ಟ್ರಾನಿಕ್ ಡೇಟಾ ಕ್ಯಾಪ್ಚರ್ (EDC) ಎನ್ನುವುದು ಹಣಕಾಸಿನ ವಹಿವಾಟಿನ ತೆರವು ಪ್ರಕ್ರಿಯೆಗೊಳಿಸಲು POS (ಪಾಯಿಂಟ್ ಆಫ್ ಸೇಲ್) ಸಿಸ್ಟಮ್ ಬಳಸುವ ವಿಧಾನವಾಗಿದೆ. ಆಲ್-ಇನ್-ಒನ್ POS ಯಂತ್ರಗಳು ಚಿಲ್ಲರೆ ಅಂಗಡಿಗಳಲ್ಲಿ ಪಾವತಿ ಸ್ವೀಕರಿಸಲು ಒನ್-ಸ್ಟಾಪ್ ಕಾರ್ಯವಿಧಾನವಾಗಿದೆ. ಗ್ರಾಹಕರು ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು, QR ಕೋಡ್‌ಗಳು, UPI, Paytm ಪಾವತಿಗಳ ಬ್ಯಾಂಕ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿಕೊಂಡು POSನಲ್ಲಿ ಪಾವತಿ ಮಾಡಬಹುದು. POS ವೀಸಾ, ಮಾಸ್ಟರ್ ಮತ್ತು Rupay ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ ಅಂತಾರಾಷ್ಟ್ರೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಸಹ ಬೆಂಬಲಿಸುತ್ತದೆ.
ವ್ಯಾಪಾರಕ್ಕಾಗಿ ಪೇಟಿಎಂ ಎಲ್ಲಾ ವ್ಯಾಪಾರಿಗಳು ಅಥವಾ ಮಾಲೀಕರಿಗೆ ವಿವಿಧ ರೀತಿಯ ಪಾವತಿ ಸ್ವೀಕರಿಸುವ ಮೂಲಕ ವ್ಯಾಪಾರ-ವಹಿವಾಟುಗಳನ್ನು ಸುಗಮವಾಗಿ ನಿರ್ವಹಿಸಲು ಆಲ್-ಇನ್-ಒನ್ POS ನೀಡುತ್ತದೆ. ನೀವು ಚಿಲ್ಲರೆ ಅಂಗಡಿ, ರೆಸ್ಟೋರೆಂಟ್ ಅಥವಾ ಮನರಂಜನಾ ವ್ಯವಹಾರ ಮತ್ತು ಪೇಟಿಎಂ ಆಲ್-ಇನ್-ಒನ್ POS ಪ್ರತಿ ವ್ಯವಹಾರಕ್ಕೂ ಅತ್ಯಂತ ಅದ್ಭುತ ವೈಶಿಷ್ಟ್ಯಗಳನ್ನು ನೀಡುತ್ತದೆ. ಇವು ಏನೆಂದು ತಿಳಿಯುವ ಕುತೂಹಲವೇ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬಹು ಪಾವತಿ ಮೂಲಗಳು
ಪೇಟಿಎಂ (Paytm) ಆಲ್-ಇನ್-ಒನ್ POSನೊಂದಿಗೆ ನೀವು ಪಾವತಿ ಮೂಲದ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಗ್ರಾಹಕರು 7 ಪಾವತಿ ವಿಧಾನಗಳಿಂದ ಆಯ್ಕೆ ಮಾಡಬಹುದು. ತಮ್ಮ ಪೇಟಿಎಂ ವಾಲೆಟ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್, ಪೇಟಿಎಂ ಪೋಸ್ಟ್‌ಪೇಯ್ಡ್, UPI ಮತ್ತು EMI ಮೂಲಕ ಪಾವತಿಯನ್ನು ಪ್ರಕ್ರಿಯೆಗೊಳಿಸಬಹುದು.
ಹಣದ ತ್ವರಿತ ಪ್ರಕ್ರಿಯೆ ಖಚಿತಪಡಿಸುವಿಕೆ
ನೀವು ವ್ಯಾಪಾರ ಮಾಲೀಕರಾಗಿದ್ದರೆ, ಬ್ಯಾಚ್ ಸೆಟ್ಲಮೆಂಟ್‍ಗಳಿಗೆ ವಿದಾಯ ಹೇಳುವ ಸಮಯ ಬಂದಿದೆ. ಪೇಟಿಎಂ ಆಲ್-ಇನ್-ಒನ್ POS ನಿಮ್ಮ ಹಣದ ತ್ವರಿತ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ. ಆದಾಗ್ಯೂ ಈ ತ್ವರಿತ ಪ್ರಕ್ರಿಯೆಯು ವ್ಯಾಪಾರಿಯಿಂದ ಕಾನ್ಫಿಗರ್ ಮಾಡಿದ್ದರೆ ಮಾತ್ರ ಸಂಭವಿಸುತ್ತದೆ. ಸಂಗ್ರಹಣೆಗಳನ್ನು ತಕ್ಷಣವೇ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ. ಹಿಂದೆಲ್ಲ ಬಂಡವಾಳ ಹೂಡಿಕೆಗೆ ಹಣದ ಇತ್ಯರ್ಥದಲ್ಲಿ ವಿಳಬಂವಾಗುತ್ತಿತ್ತು.
EMI ಆಯ್ಕೆ
ಪ್ರತಿಯೊಂದು ವ್ಯಾಪಾರವು ತನ್ನ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಮಾರಾಟ ಮಾಡುವ ಮತ್ತು ಗ್ರಾಹಕರನ್ನು ಹೆಚ್ಚಿಸಿಕೊಳ್ಳುವದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ ಸಾಮಾನ್ಯ ಅಡೆತಡೆಗಳೆಂದರೆ ಗ್ರಾಹಕರ ಅನುಕೂಲತೆ ಅಥವಾ ಹಣಕಾಸಿನ ಪರಿಸ್ಥಿತಿ. ಆದರೂ ಇದನ್ನು ಮಾಸಿಕ ಕಂತುಗಳೊಂದಿಗೆ (ಇಎಂಐ) ಪರಿಹರಿಸಿಕೊಳ್ಳಬಹುದು. ಪೇಟಿಎಂ ಆಲ್-ಇನ್-ಒನ್ POS ನಿಮಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ‘ಬ್ರ್ಯಾಂಡ್ EMI’ ಮತ್ತು ‘ಬ್ಯಾಂಕ್ EMI’ನೊಂದಿಗೆ ಹೊಂದಿಕೊಳ್ಳುವ ಪಾವತಿ ಆಯ್ಕೆಗಳನ್ನು ನೀಡಲು ಅನುಮತಿಸುತ್ತದೆ. ಇವುಗಳು ಬ್ರ್ಯಾಂಡ್ ಮತ್ತು ಬ್ಯಾಂಕ್ ಪಾಲುದಾರರ ಬೃಹತ್ ನೆಟ್‌ವರ್ಕ್‌ಗೆ ಪ್ರವೇಶವನ್ನು ಒದಗಿಸುತ್ತವೆ ಮತ್ತು ದೊಡ್ಡ ಆಫ್‌ಲೈನ್ ಸ್ಟೋರ್‌ಗಳು ಅಥವಾ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳಿಗೆ ಸಮಾನವಾದ ಕೊಡುಗೆಗಳನ್ನು ಚಲಾಯಿಸುವ ಸಾಮರ್ಥ್ಯವನ್ನು ವ್ಯಾಪಾರಿಗಳಿಗೆ ನೀಡುತ್ತವೆ. ಇದಲ್ಲದೆ ಗ್ರಾಹಕರು ಪೇಟಿಎಂ ನಿಂದ ಉತ್ತೇಜಕ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಸಹ ಪಡೆಯುತ್ತಾರೆ.
ಸುಲಭ ಬಿಲ್ಲಿಂಗ್/ ಸ್ಕ್ಯಾನ್, ಪಾವತಿ ಮತ್ತು ಚೆಕ್‍ಔಟ್
ಪೇಟಿಎಂನ ಆಲ್-ಇನ್-ಒನ್ POS ಒಳಗೊಂಡ ಪ್ರಿಂಟರ್ ಮತ್ತು ಸ್ಕ್ಯಾನರ್‌ನೊಂದಿಗೆ ವೇಗವಾಗಿ ಮತ್ತು ಸುಲಭವಾಗಿ ಬಿಲ್ಲಿಂಗ್ ಮಾಡಲು ನೀವು ಹಲೋ ಹೇಳುವ ಸಮಯ ಬಂದಿದೆ. ಯಾವುದೇ ರೀತಿಯ ಬರವಣಿಗೆ, ಟೈಪಿಂಗ್ ಇಲ್ಲ ಮತ್ತು ಕಾಯುವ ಅಗತ್ಯವಿಲ್ಲ. ಸ್ಕ್ಯಾನ್ ಮಾಡಿ, ಪಾವತಿಸಿ ಮತ್ತು ಚೆಕ್ ಔಟ್ ಮಾಡಿ! ನೀವು ಮತ್ತು ನಿಮ್ಮ ಗ್ರಾಹಕರಿಗೆ ಭೌತಿಕ ಮತ್ತು ಡಿಜಿಟಲ್ ರಸೀದಿಗಳನ್ನು ಸಹ ಪಡೆಯಬಹುದು. ಇದು ಥರ್ಡ್ ಪಾರ್ಟಿ ಬಿಲ್ಲಿಂಗ್ ಪರಿಹಾರಗಳೊಂದಿಗೆ ಮತ್ತಷ್ಟು ಸಂಯೋಜಿಸಲ್ಪಟ್ಟಿದೆ. ಇಲ್ಲಿ ಮಧ್ಯವರ್ತಿಯು ಇನ್‍ವೈಸ್‍ಗಳು ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಪಾವತಿಗಳನ್ನು ನಿರ್ವಹಿಸುತ್ತದೆ.
ವ್ಯಾಪಾರ ಪ್ರಯೋಜನಗಳು
ಪೇಟಿಎಂ ಆಲ್-ಇನ್-ಒನ್ POS ಬಳಕೆದಾರರಾಗಿರುವುದರಿಂದ ನಿಮ್ಮ ವ್ಯಾಪಾರಕ್ಕಾಗಿ ಏಕ ಸಮನ್ವಯ, ನಗದು ಹರಿವು ನಿರ್ವಹಣೆ, ಸಾಲಗಳು ಮತ್ತು ವಿಮೆಯಂತಹ ಹೆಚ್ಚುವರಿ ಸವಲತ್ತುಗಳನ್ನು ಒಳಗೊಂಡಿವೆ.
ಗ್ರಾಹಕ ಸಂಬಂಧ ನಿರ್ವಹಣೆ
ಪೇಟಿಎಂ ತನ್ನ ಬಳಕೆದಾರರೊಂದಿಗೆ ಪಾರದರ್ಶಕ ಮತ್ತು ಆರೋಗ್ಯಕರ ಸಂಬಂಧಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತದೆ. ಪೇಟಿಎಂ ಆಲ್-ಇನ್-ಒನ್ POS ಬಳಕೆದಾರರು ಲಾಯಲ್ಟಿ ಕಾರ್ಯಕ್ರಮಗಳು, ಗ್ರಾಹಕ ಮಾರ್ಕೆಟಿಂಗ್ ಕಾರ್ಯಕ್ರಮಗಳು, ಉಡುಗೊರೆ ಕಾರ್ಡ್‌ಗಳು ಮತ್ತು ಇನ್ನೂ ಹೆಚ್ಚಿನವುಗಳಿಗೆ ಅವಕಾಶ ಹೊಂದಿರುತ್ತಾರೆ. ಇದು ಯಾವುದೇ ತೊಂದರೆಗಳ ಸಂದರ್ಭದಲ್ಲಿ ಬೆಂಬಲ ಒದಗಿಸಲು ಉತ್ತಮ ತರಬೇತಿ ಪಡೆದ ವ್ಯಾಪಾರಿ ಸಹಾಯ ಡೆಸ್ಕ್ ಅನ್ನು ಸಹ ನೀಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ನಿಮ್ಮ ಎಲ್ಲಾ ಪಾವತಿ ಅಗತ್ಯಗಳನ್ನು ಪೂರೈಸುವ POS. ಇದನ್ನು ಆಲ್ ಇನ್ ಒನ್ ಪಿಒಎಸ್ ಎಂದು ಏಕೆ ಹೆಸರಿಸಲಾಗಿದೆ ಎಂದು ಈಗ ನಿಮಗೆ ತಿಳಿದಂತಾಯಿತು ಅಲ್ಲವೇ!
ವ್ಯಾಪಾರಿಗಳು SMS ಅಥವಾ ಇ-ಮೇಲ್ ಮೂಲಕ ಆಲ್-ಇನ್-ಒನ್ POS ಸಾಧನದ ಮೂಲಕ ಗ್ರಾಹಕರೊಂದಿಗೆ ಪಾವತಿ ಲಿಂಕ್ ಅನ್ನು ಹಂಚಿಕೊಳ್ಳಬಹುದು. ಪಾವತಿ ಲಿಂಕ್ ಗ್ರಾಹಕರಿಗೆ UPI, ನೆಟ್ ಬ್ಯಾಂಕಿಂಗ್, ವ್ಯಾಲೆಟ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಹೆಚ್ಚಿನವುಗಳಂತಹ ಎಲ್ಲಾ ಪಾವತಿ ಆಯ್ಕೆಗಳನ್ನು ಒದಗಿಸುತ್ತವೆ. ಗ್ರಾಹಕರು ತಮ್ಮ ಸ್ವಂತ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಮತ್ತು ಪಾವತಿಯನ್ನು ಪೂರ್ಣಗೊಳಿಸಲು ಅವರ ಆದ್ಯತೆಯ ಆಯ್ಕೆಯನ್ನು ಆರಿಸುವ ಮೂಲಕ ಯಾವುದೇ ಸ್ಥಳದಿಂದ ಅನುಕೂಲಕರವಾಗಿ ಪಾವತಿಸಬಹುದು.
ಆದರೆ ಪೇಟಿಎಂ ಆಲ್-ಇನ್-ಒನ್ POSನೊಂದಿಗೆ ಪಾವತಿಗಳನ್ನು ಹೇಗೆ ಸ್ವೀಕರಿಸುವುದು? ಚಿಂತಿಸಬೇಡಿ.. ಇದರ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ! QR ಮತ್ತು ಕಾರ್ಡ್ ಪಾವತಿಗಳನ್ನು ಸ್ವೀಕರಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
ಸ್ಟೆಪ್ 1: ನಿಮ್ಮ ಪೇಟಿಎಂ ಆಲ್-ಇನ್-ಒನ್ ಪಿಒಎಸ್‌ನಲ್ಲಿ ಬಿಲ್ಲಿಂಗ್ ಆಯ್ಕೆಯ ಮುಂದೆ ಕಂಡುಬರುವ '’ಪಾವತಿ’ ಆಯ್ಕೆಯನ್ನು ಟ್ಯಾಪ್ ಮಾಡಿ.
ಸ್ಟೆಪ್ 2: ಪಡೆಯಬೇಕಾದ ಮೊತ್ತವನ್ನು ನಮೂದಿಸಿ ಮತ್ತು ಬಲ ಮೂಲೆಯಲ್ಲಿ ‘ಸಂಗ್ರಹಿಸಿ’ ಆಯ್ಕೆ ಮಾಡಿ.
ಸ್ಟೆಪ್ 3: ಒಮ್ಮೆ ನೀವು ‘ಸಂಗ್ರಹಿಸಿ’ಯನ್ನು ಆಯ್ಕೆ ಮಾಡಿದರೆ, POS 2 ಆಯ್ಕೆಗಳನ್ನು ಪ್ರದರ್ಶಿಸುತ್ತದೆ. ಇವು ‘ಇನ್ಸರ್ಟ್ ಕಾರ್ಡ್’ ಮತ್ತು ‘ಸ್ಕ್ಯಾನ್ ಕ್ಯೂಆರ್’ ಆಗಿರುತ್ತದೆ. ಗ್ರಾಹಕರು ಈ ಆಯ್ಕೆಗಳಿಂದ ಆಯ್ಕೆ ಮಾಡಬಹುದು. ಪೇಟಿಎಂ ಸಹ ಟ್ಯಾಪ್ ಟು ಪೇ ಕಾರ್ಡ್ ಪ್ರಾರಂಭಿಸಿದೆ, ಇದು NFC-ಆಧಾರಿತ ಸಂಪರ್ಕರಹಿತ ಕಾರ್ಡ್ ಆಗಿದ್ದು, ಇಲ್ಲಿ ಬಳಕೆದಾರರು ಪಾವತಿಗಳಿಗಾಗಿ ವ್ಯಾಪಾರಿ ಟರ್ಮಿನಲ್‌ಗಳನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಗ್ರಾಹಕರು QR ಕೋಡ್ ಮೂಲಕ ಪಾವತಿಸಲು ಆಯ್ಕೆ ಮಾಡಿದರೆ, ‘ಸ್ಕ್ಯಾನ್ QR’ಅನ್ನು ಆಯ್ಕೆ ಮಾಡಿ ಮತ್ತು QR ಕೋಡ್ ಕಾಣಿಸಿಕೊಳ್ಳುತ್ತದೆ. Paytm ಅಪ್ಲಿಕೇಶನ್ ಅಥವಾ ಯಾವುದೇ ಇತರ UPI ಅಪ್ಲಿಕೇಶನ್‌ನಿಂದ ಪಾವತಿಸಲು ಗ್ರಾಹಕರು ಈ QR ಕೋಡ್ ಬಳಸಬಹುದು.
ಗ್ರಾಹಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಲು ಆಯ್ಕೆ ಮಾಡಿದರೆ ಅವರು ತಮ್ಮ ಕಾರ್ಡ್ ಅನ್ನು ಸೇರಿಸಲು ಆಯ್ಕೆ ಮಾಡಬಹುದು. ನಂತರ ಗ್ರಾಹಕರು ಪಿಒಎಸ್ ಯಂತ್ರದಲ್ಲಿ 4 ಅಂಕಿಗಳ ಪಿನ್ ಅನ್ನು ನಮೂದಿಸಬೇಕಾಗುತ್ತದೆ. ನಂತರ ‘ದೃಢೀಕರಿಸಿ’ ಆಯ್ಕೆಮಾಡಿ. ತಮ್ಮ ಕಾರ್ಡ್ ಟ್ಯಾಪ್ ಮತ್ತು ಪಾವತಿ ಮಾಡಲು ಪರ್ಯಾಯ ಆಯ್ಕೆಯನ್ನು ಸಹ ಸೆಲೆಕ್ಟ್ ಮಾಡಬಹುದು. ವಹಿವಾಟನ್ನು ಪ್ರಕ್ರಿಯೆಗೊಳಿಸದಿದ್ದಲ್ಲಿ, ನೀವು ‘ಪಾವತಿ ಸ್ಥಿತಿಯನ್ನು ಪರಿಶೀಲಿಸಿ'’ ಕ್ಲಿಕ್ ಮಾಡಬಹುದು.
ಪಾವತಿಯನ್ನು ಪ್ರಕ್ರಿಯೆಗೊಳಿಸಿದ ನಂತರ ಅದು ‘ಪಾವತಿ ಯಶಸ್ವಿಯಾಗಿದೆ’ ಎಂದು ಪ್ರದರ್ಶಿಸುತ್ತದೆ. ಕೆಳಗೆ ನೀವು ‘ಪ್ರಿಂಟ್ ಇನ್‌ವಾಯ್ಸ್’ ಮತ್ತು ‘ಎಸ್‌ಎಂಎಸ್ ಇನ್ವೈಸ್’ ಎಂಬ 2 ಆಯ್ಕೆಗಳನ್ನು ಕಾಣಬಹುದು. ಭೌತಿಕ ಅಥವಾ ಡಿಜಿಟಲ್ ರಸೀದಿಯನ್ನು ಸ್ವೀಕರಿಸಲು ನೀವು ಈ ಆಯ್ಕೆಗಳಿಂದ ಆಯ್ಕೆ ಮಾಡಬಹುದು.
Paytm ಆಲ್-ಇನ್-ಒನ್ POS ಜೊತೆ ಏನು ಲಾಭ?
● ಗ್ರಾಹಕರು ಪಾವತಿ ಮಾಡಿದಾಗಲೆಲ್ಲಾ ವ್ಯಾಪಾರಿಗಳಿಗೆ ಧ್ವನಿ ದೃಢೀಕರಣದ ಮೂಲಕ ಸೂಚಿಸಬಹುದು (ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ )
● ವ್ಯಾಪಾರಿಗಳು ತಮ್ಮ ಸಾಧನದಲ್ಲಿ ಪಾವತಿಗಳ ಹಿಸ್ಟರಿ ನೋಡಬಹುದು
● ಒಂದೇ ಪಾವತಿ ಲಿಂಕ್ ಬದಲಾಗಿ ಬಹು ಪಾವತಿಗಳನ್ನು ಸಂಗ್ರಹಿಸಬಹುದು
ದಿನಸಿ, ಎಲೆಕ್ಟ್ರಾನಿಕ್ಸ್‌ಗಾಗಿ ಪಾವತಿಯ ಸಂದರ್ಭದಲ್ಲಿ ಅಥವಾ ವ್ಯಾಪಾರಿ ಸ್ಥಳದಲ್ಲಿ ಗ್ರಾಹಕರ ಬಳಿ ಕಾರ್ಡ್ ಇಲ್ಲದಿರುವ ಸಂದರ್ಭಗಳಲ್ಲಿ ಪಾವತಿಯನ್ನು ರಿಮೋಟ್‌ನಲ್ಲಿ ಮಾಡಿದ ಸಂದರ್ಭಗಳಲ್ಲಿ ಈ ಕಾರ್ಯವು ವಿಶೇಷವಾಗಿ ಉಪಯುಕ್ತವಾಗಿದೆ.
ಆದರೆ ನಿಮ್ಮ ವಹಿವಾಟನ್ನು ರದ್ದುಗೊಳಿಸಲು ನೀವು ಬಯಸಿದರೆ ಅದನ್ನು ರದ್ದುಗೊಳಿಸುವುದು ಮೇಲಿನಂತೆಯೇ ಸುಲಭವಾಗಿದೆ.
ಹಂತ 1: ಮೇಲಿನ ಎಡ ಮೂಲೆಯಲ್ಲಿರುವ 3 ಸಮಾನಾಂತರ ರೇಖೆಗಳ ಮೇಲೆ ಕ್ಲಿಕ್ ಮಾಡಿ.
ಹಂತ 2: POS ನಿಮ್ಮ ಇತ್ತೀಚಿನ ವಹಿವಾಟುಗಳನ್ನು ಪ್ರದರ್ಶಿಸುತ್ತದೆ. ನೀವು ರದ್ದುಗೊಳಿಸಲು ಬಯಸುವ ವಹಿವಾಟನ್ನು ಆಯ್ಕೆಮಾಡಿ. ನಂತರ ‘ಪಾವತಿ ರದ್ದತಿ’ ಆಯ್ಕೆ ಮಾಡಿ.
ಹಂತ 3: ನೀವು ‘ಪಾವತಿ ರದ್ದತಿ’ ಆಯ್ಕೆ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಮುಂದುವರಿಸಿ’ ಆಯ್ಕೆ ಮಾಡಿ.
ಹಂತ 4: ನಿಮ್ಮ ಪೇಮೆಂಟ್ ಅಪ್ಲಿಕೇಶನ್‌ನಲ್ಲಿ ನೀವು ಪಾವತಿ ಕೋಡ್ ಅನ್ನು ಸ್ವೀಕರಿಸುತ್ತೀರಿ. ಅಪ್ಲಿಕೇಶನ್ ತೆರೆಯಿರಿ ‘ಸ್ಕ್ಯಾನ್ ಕ್ಯೂಆರ್’ ಮತ್ತು ‘ಶೋ ಪೇಮೆಂಟ್ ಕೋಡ್’ಗೆ ಹೋಗಿ. POSನಲ್ಲಿ ಪೇಮೆಂಟ್ ಕೋಡ್ ಅನ್ನು ನಮೂದಿಸಿ ಆಯ್ಕೆ ಮಾಡಿ.
ಹಂತ 5: ಪಾವತಿಯನ್ನು ರದ್ದುಗೊಳಿಸಿದ ನಂತರ ಇದು ಕೆಲವು ಇತರ ವಿವರಗಳೊಂದಿಗೆ ‘ಪಾವತಿ ರದ್ದುಗೊಳಿಸಲಾಗಿದೆ’ಯನ್ನು ಪ್ರದರ್ಶಿಸುತ್ತದೆ. ಅದನ್ನು ರದ್ದುಗೊಳಿಸಲಾಗಿದೆಯೇ ಎಂದು ಪರಿಶೀಲಿಸಲು ನೀವು ಇತ್ತೀಚಿನ ವಹಿವಾಟುಗಳಿಗೆ ಮತ್ತೊಮ್ಮೆ ಹೋಗಬಹುದು.
ಇದು ಎಷ್ಟು ಸುಲಭ ಎಂದು ನೋಡಿ! ಪೇಟಿಎಂ ಆಲ್-ಇನ್-ಒನ್ POS ಮೂಲಕ ನೀವು ಸುಲಭವಾಗಿ ಪಾವತಿಗಳನ್ನು ಸ್ವೀಕರಿಸಬಹುದು ಮತ್ತು ಯಾವುದೇ ಸಮಯದಲ್ಲಿ ವಹಿವಾಟುಗಳನ್ನು ರದ್ದುಗೊಳಿಸಬಹುದು. ಇದಲ್ಲದೆ ಯಾವುದೇ ತೊಂದರೆಗಳು ಅಥವಾ ಪ್ರಶ್ನೆಗಳ ಸಂದರ್ಭದಲ್ಲಿ Paytm ತನ್ನ ಗ್ರಾಹಕರಿಗೆ ಬೆಂಬಲವನ್ನು ನೀಡುತ್ತದೆ. ನೀವು ಪೇಟಿಎಂ ವ್ಯಾಪಾರಿ ಸಹಾಯ ಕೇಂದ್ರಕ್ಕೆ 0120-4440440ಗೆ ಕರೆ ಮಾಡಬಹುದು ಅಥವಾ pos.support@paytm.comನಲ್ಲಿ ಮೇಲ್ ಮಾಡಬಹುದು. Paytmನ ಆಲ್-ಇನ್-ಒನ್ POS ಭಾರತದ ಆದ್ಯತೆಯ ಒಂದು ಭಾಗ ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.