Paytm Fastag Deadline: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ( ಆರ್‌ಬಿಐ ) ನೀಡಿದ್ದ ವಿಸ್ತೃತ ಗಡುವು ಇಂದಿಗೆ ಎಂದರೆ ಮಾರ್ಚ್ 15 ರಂದು ಮುಕ್ತಾಯಗೊಳ್ಳಲಿದೆ. ಈಗಾಗಲೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ( ಎನ್‌ಎಚ್‌ಎಐ ) ತನ್ನ ಅಧಿಕೃತ ಪಟ್ಟಿಯಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಅನ್ನು ತೆಗೆದುಹಾಕಿದೆ. ನಾಳೆಯಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗೆ ಪೇಟಿಎಂ ಫಾಸ್ಟ್ಯಾಗ್ ಸೇವೆಯೂ ಸ್ಥಗಿತಗೊಳ್ಳಲಿದೆ. ಹಾಗಾಗಿ, ನೀವಿನ್ನೂ ನಿಮ್ಮ ಪೇಟಿಎಂ ಫಾಸ್ಟ್ಯಾಗ್ ಅನ್ನು ಬದಲಾಯಿಸದಿದ್ದರೆ ಇಂದೇ ಈ ಕೆಲಸಬನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ, ನಾಳೆಯಿಂದ ಟೋಲ್ ಪ್ಲಾಜಾದಲ್ಲಿ ದುಪ್ಪಟ್ಟು ಟೋಲ್ ಪಾವತಿಸಬೇಕಾಗಬಹುದು. 


COMMERCIAL BREAK
SCROLL TO CONTINUE READING

ಹೌದು, ನೀವು Paytm ವ್ಯಾಲೆಟ್‌ಗೆ ಲಿಂಕ್ ಮಾಡಲಾದ Fastag ಅನ್ನು ಬಳಸುತ್ತಿದ್ದರೆ, ಮಾರ್ಚ್ 15 ರ ನಂತರ ನಿಮ್ಮ Fastag ಅನ್ನು ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ,  ಟೋಲ್ ಪ್ಲಾಜಾದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಲು, ಬೇರೆ ಯಾವುದಾದರೂ ಬ್ಯಾಂಕ್‌ನಿಂದ ಫಾಸ್ಟ್ಯಾಗ್ ಅನ್ನು ಪಡೆದುಕೊಳ್ಳುವಂತೆ ಸಲಹೆ ನೀಡಲಾಗಿದೆ. 


ಪೇಟಿಎಂ ಫಾಸ್ಟ್ಯಾಗ್ ನಲ್ಲಿ ರೀಚಾರ್ಜ್ ಮಾಡಿರುವ ಹಣ ಆಗಲ್ಲ ವ್ಯರ್ಥ: 
ಮಾರ್ಚ್ 16 ರಿಂದ ಪೇಟಿಎಂ ಫಾಸ್ಟ್ಯಾಗ್ ಸೇವೆ ಸ್ಥಗಿತಗೊಳ್ಳಲಿದೆ. ಹಾಗಾಗಿ, ಮಾರ್ಚ್ 15, 2024 ರ ನಂತರ  ನಿಮ್ಮ ಪೇಟಿಎಂ ಫಾಸ್ಟ್ಯಾಗ್ ಅನ್ನು ರಿಚಾರ್ಜ್ ಮಾಡುವುದಾಗಲಿ, ಅಥವಾ  ಟಾಪ್-ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ,  ನಿಮ್ಮ ಹಳೆಯ ಪೇಟಿಎಂ ಫಾಸ್ಟ್ಯಾಗ್‌ನಲ್ಲಿ ನೀವು ಈಗಾಗಲೇ ಬ್ಯಾಲೆನ್ಸ್ ಹೊಂದಿದ್ದರೆ ಆ ಹಣ ವ್ಯರ್ಥವಾಗುವುದಿಲ್ಲ. ಇದನ್ನು ನೀವು  ಟೋಲ್‌ಗಳಲ್ಲಿ ಬಳಸಬಹುದು. 


ಇದನ್ನೂ ಓದಿ- Financial Mistakes: ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕೆ..!ಹಾಗಾದ್ರೆ ಈ ತಪ್ಪುಗಳನ್ನು ಮಾಡಬೇಡಿ


ಗಮನಾರ್ಹವಾಗಿ,  "ಒಂದು ವಾಹನ, ಒಂದು ಫಾಸ್ಟ್ಯಾಗ್ " ನಿಯಮದ ಪ್ರಕಾರ, ಒಂದು ವಾಹನಕ್ಕೆ ಒಂದು ಫಾಸ್ಟ್ಯಾಗ್ ಅನ್ನು ಮಾತ್ರ ಲಿಂಕ್ ಮಾಡಬಹುದು.  ಹಾಗಾಗಿ, ನೀವಿನ್ನೂ ನಿಮ್ಮ ಪೇಟಿಎಂ ಫಾಸ್ಟ್ಯಾಗ್ ಅನ್ನು  ನಿಷ್ಕ್ರಿಯಗೊಳಿಸದಿದ್ದಲ್ಲಿ ಇಂದೇ ಈ ಕೆಲಸ ಮಾಡಿ. ಇದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ... 


ಪೇಟಿಎಂ ಅಪ್ಲಿಕೇಶನ್ ಬಳಸಿ Paytm ಫಾಸ್ಟ್ಯಾಗ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಕ್ರಮಗಳು: 
* ಮೊದಲನೆಯದಾಗಿ ಪೇಟಿಎಂ ಅಪ್ಲಿಕೇಷನ್ ತೆರೆಯಿರಿ. 
* ಮೇಲಿನ ಎಡ ಮೂಲೆಯಲ್ಲಿ ಕಾಣುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ. 
* ಇಲ್ಲಿ ಸಹಾಯ ಮತ್ತು ಬೆಂಬಲ ಆಯ್ಕೆಯನ್ನು ಆರಿಸಿ. 
* ಇದರಲ್ಲಿ ಬ್ಯಾಂಕಿಂಗ್ ಸೇವೆಗಳು ಮತ್ತು ಪಾವತಿಗಳು ಎಂಬ ವಿಭಾಗದಲ್ಲಿ ಫಾಸ್ಟ್ಯಾಗ್ ಅನ್ನು ಆಯ್ಕೆ ಮಾಡಿ. 
* ಇದರ ಕೆಳಭಾಗದಲ್ಲಿರುವ ನಮ್ಮೊಂದಿಗೆ ಚಾಟ್ ಮಾಡಿ ಆಯ್ಕೆಯನ್ನು ಆರಿಸಿ Paytm ಫಾಸ್ಟ್ಯಾಗ್ ಖಾತೆಯನ್ನು  ನಿಷ್ಕ್ರಿಯಗೊಳಿಸುವಂತೆ ವಿನಂತಿಸಿ. 
  
ಇದನ್ನೂ ಓದಿ- Business News: ಬಾಡಿಗೆಗೆ ಹೆಲಿಕಾಪ್ಟರ್, ಚಾರ್ಟರ್ಡ್ ಫ್ಲೈಟ್..! ಗಂಟೆ ಬಾಡಿಗೆ ಎಷ್ಟು ಗೊತ್ತಾ..?


ಪೇಟಿಎಂ ಪೋರ್ಟಲ್ ಬಳಸಿ ಪೇಟಿಎಂ ಫಾಸ್ಟ್ಯಾಗ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: 
>> ಫಾಸ್ಟ್ಯಾಗ್ ಪೇಟಿಎಂ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ನಿಮ್ಮ ರುಜುವಾತುಗಳನ್ನು ಬಳಸಿಕೊಂಡು ಲಾಗ್ ಇನ್ ಆಗಿ. 
>> ನಂತರ ಪರಿಶೀಲನೆಗಾಗಿ ನಿಮ್ಮ ಫಾಸ್ಟ್ಯಾಗ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ, ಇನ್ನಿತರ ಅಗತ್ಯ ಮಾಹಿತಿಗಳನ್ನು ನಮೂಡಿದಿ. 
>> ಸ್ಕ್ರಾಲ್ ಡೌನ್ ಮಾಡಿ, ಸಹಾಯ ಮತ್ತು ಬೆಂಬಲ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
>> ಇದರಲ್ಲಿ ನಾನು ನನ್ನ ಫಾಸ್ಟ್ಯಾಗ್ ಪ್ರೊಫೈಲ್ ಅನ್ನು ಮುಚ್ಚಲು ಬಯಸುತ್ತೇನೆ ಎಂಬ ಆಯ್ಕೆಯನ್ನು ಆರಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.