Paytm New Cash Back Offer: ಪ್ರಿ-ಪೇಯ್ಡ್ ಪ್ಲಾನ್ ರೀಚಾರ್ಜ್ನಲ್ಲಿ 1000 ರೂ.ವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ
ಮೊಬೈಲ್ ಕಂಪನಿಗಳು ಪ್ರಿ-ಪೇಯ್ಡ್ ಪ್ಲಾನ್ಗಳ ಬೆಲೆ ಹೆಚ್ಚಿಸಿರುವ ಬಗ್ಗೆ ನೀವು ಚಿಂತಿಸುತ್ತಿದ್ದರೆ ಈ ಆಫರ್ ನಿಮಗೆ ಖುಷಿ ನೀಡುತ್ತದೆ. ನೀವು Paytm ನ ಹೊಸ ಕೊಡುಗೆಯ ಲಾಭವನ್ನು ಪಡೆಯಬಹುದು. ಈ ಕೊಡುಗೆ ಬಳಸಿಕೊಂಡು ನೀವು ಮೊಬೈಲ್ ರೀಚಾರ್ಜ್ನಲ್ಲಿ 1,000 ರೂ.ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು.
ನವದೆಹಲಿ: ನಷ್ಟದ ಹೆಸರಿನಲ್ಲಿ ಕೆಲವೇ ದಿನಗಳ ಹಿಂದೆ Jio, Vi ಮತ್ತು Airtel ತಮ್ಮ ಟ್ಯಾಕ್ಸ್ ಅಂದರೆ ಮೊಬೈಲ್ ರಿಚಾರ್ಜ್ ಟ್ಯಾರಿಫ್ ಅನ್ನು ಶೇ.20 ರಷ್ಟು ಹೆಚ್ಚಿಸಿವೆ. ಈ ಬೆಲೆ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಜನರಿಗೆ ಪೇಟಿಎಂನಿಂದ ನೆಮ್ಮದಿಯ ಸುದ್ದಿಯೊಂದು ಬಂದಿದೆ.
ಪ್ರೀ-ಪೇಯ್ಡ್ ಬಳಕೆದಾರರಿಗೆ Paytmನ ಕೊಡುಗೆ
ಮಾಹಿತಿಯ ಪ್ರಕಾರ ಪೇಟಿಎಂ ಪ್ರಿ-ಪೇಯ್ಡ್ ಯೋಜನೆಗಳನ್ನು ಬಳಸುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಮತ್ತು ಇತರ ಬಹುಮಾನಗಳನ್ನು ಘೋಷಿಸಿದೆ. ಸಣ್ಣ ಟ್ರಿಕ್ ಬಳಸಿ ನೀವು 1 ಸಾವಿರದವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಯೋಜನೆಗಳ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: Motercycle ಖರೀದಿಸಬೇಕೆ? ಹಾಗಾದರೆ ಈ ಸುದ್ದಿ ಓದಿ, ಲಾಭ ನಿಮ್ಮದಾಗಿಸಿಕೊಳ್ಳಿ
ಮೊದಲ ಬಾರಿಗೆ ಬಳಕೆದಾರರಿಗೂ ಲಾಭ
Paytm ಪ್ರಕಾರ ನೀವು ಸಹ ಕ್ಯಾಶ್ ಬ್ಯಾಕ್‌ನ ಲಾಭವನ್ನು ಪಡೆಯಲು ಬಯಸಿದರೆ 'WIN1000' ಪ್ರೋಮೋಕೋಡ್ ಅನ್ನು ಬಳಸಿಕೊಂಡು 1 ಸಾವಿರ ರೂ.ವರೆಗೆ ಗೆಲ್ಲಬಹುದು. ಇದೇ ಸಮಯದಲ್ಲಿ Paytm ಬಳಕೆದಾರರು ಮೊದಲ ಬಾರಿಗೆ 15 ರೂ.ಗಳ ನೇರ ರಿಯಾಯಿತಿಯನ್ನು ಪಡೆಯಲು FLAT15 ಪ್ರೊಮೊಕೋಡ್ ಅನ್ನು ಬಳಸಬಹುದು. ಬಳಕೆದಾರರು ಬಯಸಿದರೆ ಅವರು ಕಂಪನಿಯ ಹೆಚ್ಚಿನ ಕೊಡುಗೆಗಳನ್ನು ಸಹ ಆಯ್ಕೆ ಮಾಡಬಹುದು.
ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ
Paytm ತನ್ನ ಈ ಆಫರ್ ಅನ್ನು ಎಲ್ಲಾ Airtel, Jio, Wi, BSNL ಮತ್ತು MTNL ನಲ್ಲಿ ಅನ್ವಯವಾಗಲಿದೆ ಎಂದು ಹೇಳಿದೆ. Paytm ನಿಂದ ವಹಿವಾಟಿನ ಮೇಲೆ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಕಂಪನಿ ಹೇಳಿದೆ. ಅಂದರೆ, ಬಳಕೆದಾರರು ಎಷ್ಟು ಮೊತ್ತವನ್ನು ರೀಚಾರ್ಜ್ ಮಾಡುತ್ತಾರೆ, ಅದೇ ಮೊತ್ತದಲ್ಲಿ ಅವರು ಕ್ಯಾಶ್ ಬ್ಯಾಕ್ ಪಡೆಯುತ್ತಾರೆ.
ಇದನ್ನೂ ಓದಿ: Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ರಾಶಿಅಡಿಕೆಗೆ ಬಂಪರ್ ದರ
ರೇಫರ್ ಮಾಡಿದರೆ ಕ್ಯಾಶ್ ಬ್ಯಾಕ್‌ನ ಪ್ರಯೋಜನ
ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಕ್ಯಾಶ್ ಬ್ಯಾಕ್ ಆಫರ್ (Paytm New Cash Back Offer)ಅನ್ನು ಸಹ ಬಿಡುಗಡೆ ಮಾಡಿದೆ. ಕಂಪನಿಯ ರೆಫರಲ್ ಪ್ರೋಗ್ರಾಂನಲ್ಲಿ ಭಾಗವಹಿಸುವ ಮೂಲಕ ತನ್ನ ಅಸ್ತಿತ್ವದಲ್ಲಿರುವ ಬಳಕೆದಾರರಲ್ಲಿ ಯಾರಾದರೂ Paytm ಅನ್ನು ಬಳಸಲು ಇನ್ನೊಬ್ಬ ವ್ಯಕ್ತಿಯನ್ನು ಆಹ್ವಾನಿಸಿದರೆ ಉಲ್ಲೇಖಿತ ಬಳಕೆದಾರರು ಮತ್ತು ಆಹ್ವಾನಿಸಲ್ಪಟ್ಟ ವ್ಯಕ್ತಿ ಇಬ್ಬರೂ ತಲಾ 100 ರೂ.ಗಳ ಕ್ಯಾಶ್ ಬ್ಯಾಕ್ ಪಡೆಯುತ್ತಾರೆ ಎಂದು ಕಂಪನಿ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.