Price Hike - ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಲ್ಲಿ Hero Motocorp ಕೂಡ ಒಂದು. ಇದು ತನ್ನ ಮೋಟಾರ್ ಸೈಕಲ್ ಮತ್ತು ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಿಸಲಿದೆ. ಹೊಸ ವರ್ಷದಿಂದ ಮಾಡೆಲ್ ಮತ್ತು ರೂಪಾಂತರದ ಆಧಾರದ ಮೇಲೆ ತನ್ನ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳ ಬೆಲೆಗಳು 2000 ರೂ.ವರೆಗೆ ಹೆಚ್ಚಾಗಬಹುದು (Price Hike) ಎಂದು ಕಂಪನಿ ಹೇಳಿದೆ. ಹೊಸ ಬೆಲೆಗಳು ಜನವರಿ 4, 2022 ರಿಂದ ಜಾರಿಗೆ ಬರಲಿವೆ. 2022ರಲ್ಲಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿದ ದೇಶದ ಮೂರನೇ ವಾಹನ ತಯಾರಿಕಾ ಕಂಪನಿ Hero MotoCorp ಆಗಿದೆ ಇಲ್ಲಿ ಗಮನಾರ್ಹ.
ಇದನ್ನೂ ಓದಿ-BofA Alert: ಮುಂದಿನ ಆರ್ಥಿಕ ವರ್ಷದ ಕುರಿತು BofA ಭವಿಷ್ಯವಾಣಿ, ಹೇಳಿದ್ದೇನು?
ದುಕಾತಿ (Dukati) ಹಾಗೂ ಕಾವಾಸಾಕಿ (Kawasaki) ಬೆಲೆಯಲ್ಲಿಯೂ ಕೂಡ ಏರಿಕೆ
ಹೀರೋ ಮೊಟೊಕಾರ್ಪ್ ಗಿಂತ ಮೊದಲು ದುಕಾತಿ ಹಾಗೂ ಕಾವಾಸಾಕಿ ಕಂಪನಿಗಳು ಕೂಡ ತಮ್ಮ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಕವಾಸಕಿ ತನ್ನ ಎಲ್ಲಾ ಮೋಟಾರ್‌ಸೈಕಲ್‌ಗಳ ಹೊಸ ಎಕ್ಸ್ ಶೋ ರೂಂ ಬೆಲೆಗಳನ್ನು ಪ್ರಕಟಿಸಿದೆ.ಕಮೋಡಿಟಿ ಬೆಲೆಯಲ್ಲಿನ ಹೆಚ್ಚಳದ ದೃಷ್ಟಿಯಿಂದ ವಾಹನಗಳ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಹೀರೋ ಮೋಟೋ ಕಾರ್ಪ್ ಹೇಳಿದೆ. ಕಂಪನಿಯ ಮೋಟಾರ್ ಸೈಕಲ್ ಮತ್ತು ಸ್ಕೂಟರ್‌ಗಳ ಬೆಲೆಯನ್ನು ರೂ.2000 ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ. ಆದರೂ ಯಾವ ಮಾಡೆಲ್ ಮತ್ತು ಯಾವ ವೆರಿಯಂಟ್ ಬೆಲೆ ಎಷ್ಟು ಹೆಚ್ಚಾಗಲಿದೆ ಎಂಬುದನ್ನು ನಂತರ ಪ್ರಕಟಿಸಲಾಗುವುದು ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ-New Composite Cylinder: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಹಗುರ ಸಿಲಿಂಡರ್, ಇಲ್ಲಿದೆ ವಿಶೇಷತೆ
ಕಾರು ಕಂಪನಿಗಳ ನಂತರ ಇದೀಗ ದ್ವಿಚಕ್ರ ವಾಹನ ಕಂಪನಿಗಳು ಬೆಲೆ ಹೆಚ್ಚಿಸುತ್ತಿವೆ
ಕಳೆದ ಹಲವು ದಿನಗಳಿಂದ ಎಲ್ಲಾ ಆಟೋಮೊಬೈಲ್ ಕಂಪನಿಗಳು (Automobile Companies) ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಶಿಸುತ್ತಿವೆ. ಇವುಗಳಲ್ಲಿ ಮಾರುತಿ ಸುಜುಕಿ, ಹೋಂಡಾ, ಟೊಯೋಟಾ, ಸ್ಕೋಡಾ, ಆಡಿ, ಮರ್ಸಿಡಿಸ್-ಬೆಂಚ್ ಮುಂತಾದ ಕಂಪನಿಗಳು ಶಾಮೀಲಾಗಿವೆ. ಈ ಎಲ್ಲಾ ಕಂಪನಿಗಳು 2022 ರಿಂದ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ ಮತ್ತು ಇದೀಗ ದ್ವಿಚಕ್ರ ವಾಹನ (Two Wheeler Companies) ಕಂಪನಿಗಳು ಸಹ ಇದೇ ದಾರಿಯನ್ನು ತುಳಿದಿವೆ. .ಈ ನಡುವೆ ಹೀರೋ ಮೋಟೋಕಾರ್ಪ್ Vida ಗಾಗಿ ಹಲವಾರು ಟ್ರೇಡ್‌ಮಾರ್ಕ್‌ಗಳನ್ನು ಸಲ್ಲಿಸಿದೆ. Vida Electric, Vida Mobility, Vida Electric Vehicle, Vida Moto Corp, Vida Scooters ಮತ್ತು Vida Motorcycles ಮುಂತಾದ ಹೆಸರುಗಳು ಇದು ಒಳಗೊಂಡಿದೆ. Vida Hero MotoCorp ನ ಉಪ-ಬ್ರಾಂಡ್ ಆಗಿದ್ದು ಅದರ ಅಡಿಯಲ್ಲಿ ವಿದ್ಯುತ್ ದ್ವಿಚಕ್ರ ವಾಹನಗಳನ್ನು ಮಾರಾಟ ನಡೆಸಲಾಗುವುದು ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ-Debit Card, Credit Card ಹೊಂದಿದ ಗ್ರಾಹಕರಿಗೆ RBI ನಿಂದ ಮಹತ್ವದ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.