LPG cylinder Cashback Offer: ನೀವೂ ಕೂಡ ಆನ್‌ಲೈನ್‌ನಲ್ಲಿ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುತ್ತೀರಾ.... ಹೌದು, ಎಂದಾದರೆ ನಿಮಗಿದೆ ಭರ್ಜರಿ ಕೊಡುಗೆ. ಒಂದೊಮ್ಮೆ ನೀವು ಆನ್‌ಲೈನ್‌ನಲ್ಲಿ ಸಿಲಿಂಡರ್ ಬುಕ್ ಮಾಡುವುದಿಲ್ಲ ಎಂದಾದರೆ ಈ ಸುದ್ದಿಯನ್ನು ಓದಿ ನೀವು ಖಂಡಿತ ಆನ್‌ಲೈನ್‌ನಲ್ಲಿಯೇ ಸಿಲಿಂಡರ್ ಬುಕ್ ಮಾಡುತ್ತೀರಿ! ವಾಸ್ತವವಾಗಿ, ಈ ಡಿಜಿಟಲ್ ಯುಗದಲ್ಲಿ ಬಹುತೇಕ ಹಣಕಾಸಿನ ವ್ಯವಹಾರಗಳು ಆನ್‌ಲೈನ್‌ ಮೂಲಕವೇ ನಡೆಯುತ್ತದೆ. ಚಾಲ್ತಿಯಲ್ಲಿರುವ ಪ್ರಸಿದ್ದ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಗಳಲ್ಲಿ Paytm ಕೂಡ ಒಂದು. ಪೇಟಿಎಂ ಆಗಾಗ್ಗೆ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಕೊಡುಗೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಪೇಟಿಎಂ ತನ್ನ ಗ್ರಾಹಕರಿಗಾಗಿ ಗ್ಯಾಸ್ ಸಿಲಿಂಡರ್ ಬುಕಿಂಗ್‌ನಲ್ಲಿ ಬಂಪರ್ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪರಿಚಯಿಸಿದೆ. ಏನೀ ಕೊಡುಗೆ, ಇದರ ಪ್ರಯೋಜನವನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಜನಪ್ರಿಯ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಪೇಟಿಎಂ ಮಂಗಳವಾರ, ನವೆಂಬರ್ 29 ರಂದು ಹೊಸ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಘೋಷಿಸಿದೆ.  ಭಾರತ್‌ಗ್ಯಾಸ್, ಇಂಡೇನ್ ಮತ್ತು ಎಚ್ಪಿ ಗ್ಯಾಸ್‌ನ ಎಲ್ಪಿಜಿ ಸಿಲಿಂಡರ್ ಬುಕಿಂಗ್‌ನಲ್ಲಿ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ ಆಫರ್ ಪರಿಚಯಿಸಿದೆ. ಈ ಕೊಡುಗೆ ಅಡಿಯಲ್ಲಿ ಪೇಟಿಎಂ ತನ್ನ ಗ್ರಾಹಕರಿಗೆ ಮೊದಲ ಗ್ಯಾಸ್ ಸಿಲಿಂಡರ್ ಬುಕಿಂಗ್‌ನಲ್ಲಿ 15 ರೂ. ಕ್ಯಾಶ್‌ಬ್ಯಾಕ್ ಮತ್ತು ಪೇಟಿಎಂ ವ್ಯಾಲೆಟ್ ಮೂಲಕ ಬುಕಿಂಗ್ ಮಾಡಿದರೆ 50 ರೂ.ಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಅಷ್ಟೇ ಅಲ್ಲ, ಬಳಕೆದಾರರು ಪೇಟಿಎಂ ಮೂಲಕ ಬುಕಿಂಗ್ ಅನ್ನು ಟ್ರ್ಯಾಕ್ ಕೂಡ ಮಾಡಬಹುದಾಗಿದೆ. 


ಇದನ್ನೂ ಓದಿ- Vehicle Scrapping Policy: ಶೀಘ್ರವೇ ಗುಜರಿ ಸೇರಲಿರುವ 15 ವರ್ಷ ಹಳೆಯ ವಾಹನಗಳು..!


ಎಲ್ಪಿಜಿ ಸಿಲಿಂಡರ್ ಬುಕಿಂಗ್‌ನಲ್ಲಿ ಕ್ಯಾಶ್‌ಬ್ಯಾಕ್ ಕೊಡುಗೆ:
ಪೇಟಿಎಂ ಪರಿಚಯಿಸಿರುವ ಹೊಸ ಕ್ಯಾಶ್‌ಬ್ಯಾಕ್ ಕೊಡುಗೆಯಲ್ಲಿ ಬಳಕೆದಾರರು, 15ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಲು, 'FIRSTGAS' ಎಂಬ ಕೋಡ್ ಬಳಸಬೇಕಾಗುತ್ತದೆ. ಒಂದೊಮ್ಮೆ ನೀವು ಪೇಟಿಎಂ ವ್ಯಾಲೆಟ್ ಬಳಸಿ ಗ್ಯಾಸ್ ಬುಕ್ಕಿಂಗ್ ಮಾಡುತ್ತಿದ್ದಾರೆ  'WALLET50GAS' ಎಂಬ ಕೋಡ್ ನಮೂದಿಸಿ ಗ್ಯಾಸ್ ಬುಕ್ ಮಾಡಿ. ಆಗ ಮಾತ್ರವೇ ನಿಮಗೆ ಬುಕಿಂಗ್‌ನಲ್ಲಿ 50 ರೂ. ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. 


ಪೇಟಿಎಂನಿಂದ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವ ಹಂತ-ಹಂತದ ಪ್ರಕ್ರಿಯೆ ಇಲ್ಲಿದೆ...
ಹಂತ 1:  ಮೊದಲಿಗೆ ನಿಮ್ಮ ಪೇಟಿಎಂ ಆಪ್ ತೆರೆಯಿರಿ. ಬಳಿಕ ರೀಚಾರ್ಜ್ ಮತ್ತು ಬಿಲ್ ಪಾವತಿಗಳ ವರ್ಗದ ಅಡಿಯಲ್ಲಿ 'ಬುಕ್ ಗ್ಯಾಸ್ ಸಿಲಿಂಡರ್' ಟ್ಯಾಬ್‌ಗೆ ಹೋಗಿ.
ಹಂತ 2: ಹೊಸ ಟ್ಯಾಬ್‌ನಲ್ಲಿ ನಿಮ್ಮ ಎಲ್ಪಿಜಿ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ/17 ಅಂಕಿಯ ಎಲ್ಪಿಜಿ ಐಡಿ/ಗ್ರಾಹಕ ಸಂಖ್ಯೆಯನ್ನು ನಮೂದಿಸಿ.
ಹಂತ 3: ಪಾವತಿ ಮಾಡುವ ಮೂಲಕ ನಿಮ್ಮ ಬುಕಿಂಗ್ ಅನ್ನು ಮುಂದುವರಿಸಿ. ಇದರಲ್ಲಿ Paytm Wallet, Paytm UPI, ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್‌ನಂತಹ ನಿಮ್ಮ ಆದ್ಯತೆಯ ಪಾವತಿ ವಿಧಾನದ ಮೂಲಕ ನೀವು ಪಾವತಿಸಬಹುದು.
ಹಂತ 4: ಪಾವತಿ ಮಾಡಿದ ನಂತರ, ನಿಮ್ಮ ಬುಕಿಂಗ್ ಅನ್ನು ದೃಢೀಕರಿಸಲಾಗುತ್ತದೆ. ಆ ನಂತರ 2ರಿಂದ 3 ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ನೀವು ಇದನ್ನು ಪೇಟಿಎಂ ಮೂಲಕ ಟ್ರ್ಯಾಕ್ ಕೂಡ ಮಾಡಬಹುದು. 


ಇದನ್ನೂ ಓದಿ- 7th Pay Commission : ಹೊಸ ವರ್ಷಕ್ಕೂ ಮುನ್ನ ಕೇಂದ್ರ ನೌಕರರಿಗೆ ಸಿಹಿ ಸುದ್ದಿ, ನಿಮ್ಮ ಖಾತೆಗೆ ಬರಲಿದೆ ₹2 ಲಕ್ಷ!


ಪೇಟಿಎಂ ಮೂಲಕ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದರ ಪ್ರಯೋಜನಗಳು:
* Paytm ಬಳಕೆದಾರರಿಗೆ ನೋಂದಾಯಿತ ಫೋನ್ ಸಂಖ್ಯೆಗಳಲ್ಲಿ ಮತ್ತು ಹೆಚ್ಚುವರಿ ಶುಲ್ಕಗಳಲ್ಲಿ ಗ್ಯಾಸ್ ರೀಫಿಲ್‌ಗಳನ್ನು ಬುಕ್ ಮಾಡಲು ಅನುಮತಿಸುತ್ತದೆ. 
* ಟ್ರ್ಯಾಕಿಂಗ್ ಮೂಲಕ, ನೀವು ಯಾವಾಗ ಬುಕ್ ಮಾಡಿದ್ದೀರಿ ಮತ್ತು ಸಿಲಿಂಡರ್ ಅನ್ನು ಯಾವಾಗ ತಲುಪಿಸಲಾಗುತ್ತದೆ ಎಂಬುದನ್ನು ನೀವು ನೋಡಬಹುದು.
* ಮೊದಲ ಬುಕಿಂಗ್ ಮುಗಿದ ತಕ್ಷಣ, ಅದು ನಿಮ್ಮ LPG ಸಂಪರ್ಕದ ಸಂಪೂರ್ಣ ವಿವರಗಳನ್ನು ಉಳಿಸುತ್ತದೆ. 
* ನೀವು ಎರಡನೇ ಬಾರಿ ಬುಕ್ಕಿಂಗ್ ಮಾಡಲು ಹೋದರೆ, ಮತ್ತೆ ಮತ್ತೆ LPG ಐಡಿ ನಮೂದಿಸುವ ಅಗತ್ಯವಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.