Pension Scheme Latest Update:   ಸರ್ಕಾರದಿಂದ ಪಡೆಯುವ ಪಿಂಚಣಿ ಶೇಕಡಾ 50ರಷ್ಟು ಹೆಚ್ಚಾಗಲಿದೆ. ಪಿಂಚಣಿ ಹೆಚ್ಚಳದಿಂದಾಗಿ, ನಿಮ್ಮ ಖಾತೆಗೆ ಹೆಚ್ಚಿನ ಹಣ ಬರುತ್ತದೆ. ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ  ತರಬೇಕು ಎನ್ನುವ ಕೂಗು ದೇಶಾದ್ಯಂತ ಕೇಳುತ್ತಿದೆ. ಈ ನಡುವೆ , ಪಿಂಚಣಿಯನ್ನು ಶೇಕಡಾ 50 ರಷ್ಟು ಹೆಚ್ಚಿಸಿರುವುದು ಉದ್ಯೋಗಿಗಳಿಗೆ ಸಿಹಿ ಸುದ್ದಿಯಾಗಿದೆ. 


COMMERCIAL BREAK
SCROLL TO CONTINUE READING

ಸರ್ಕಾರ ಹೊರಡಿಸಿರುವ ಸೂಚನೆಗಳಿಂದ ಈ ಮೇಲಿನ ಮಾಹಿತಿ ಸ್ಪಷ್ಟವಾಗುತ್ತದೆ. ಪಿಂಚಣಿಯನ್ನು ಪರಿಷ್ಕರಿಸಲಾಗಿದ್ದು, ಇದರಲ್ಲಿ ಹೆಚ್ಚುವರಿ ಪಿಂಚಣಿಗಾಗಿ ಸೂಚನೆಗಳನ್ನು ನೀಡಲಾಗಿದೆ. 2006 ರಲ್ಲಿ ನಿವೃತ್ತಿಯಾದ ಸರ್ಕಾರಿ ನೌಕರರು  ಮತ್ತು ಅವರ  ಕುಟುಂಬಗಳು ರಾಜ್ಯ ಸರ್ಕಾರದಿಂದ ಈ ಪ್ರಯೋಜನವನ್ನು ಪಡೆಯಲಿದ್ದಾರೆ.


ಇದನ್ನೂ ಓದಿ : Adani Group: ಒಂದೇ ಏಟಿಗೆ ಅರ್ಧದಷ್ಟು ಸಂಪತ್ತನ್ನು ಕಳೆದುಕೊಂಡ ಅದಾನಿ! ಏನಿದು ಸಂಪೂರ್ಣ ಕತೆ !


ಇವರಿಗೆ ಸಿಗಲಿದೆ ಶೇಕಡಾ 30 ರಷ್ಟು ಹೆಚ್ಚುವರಿ ಪಿಂಚಣಿ : 
ಈ ನಿಟ್ಟಿನಲ್ಲಿ 80 ರಿಂದ 85 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು  ಶೇಕಡಾ 20 ರಷ್ಟು ಹೆಚ್ಚುವರಿ ಪಿಂಚಣಿಯ ಲಾಭವನ್ನು ಪಡೆಯುತ್ತಾರೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇದರೊಂದಿಗೆ, 85 ರಿಂದ 90 ವರ್ಷ ವಯಸ್ಸಿನ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಶೇಕಡಾ 30 ರಷ್ಟು ಹೆಚ್ಚು ಪಿಂಚಣಿ ಪಡೆಯುತ್ತಾರೆ. 


ಸಿಗುವುದು 50 ರಷ್ಟು ಹೆಚ್ಚು ಪಿಂಚಣಿ :
ಇದರೊಂದಿಗೆ 90 ವರ್ಷದಿಂದ 95 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಪರಿಷ್ಕೃತ ಮೂಲ ಪಿಂಚಣಿ ಅಥವಾ ಕುಟುಂಬ ಪಿಂಚಣಿಯಲ್ಲಿ 40 ಪ್ರತಿಶತ ಹೆಚ್ಚು ಪಡೆಯುತ್ತಾರೆ. 95 ರಿಂದ 100 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ಶೇಕಡಾ 50 ರಷ್ಟು ಹೆಚ್ಚಿನ ಪಿಂಚಣಿ ಮೊತ್ತವನ್ನು ಪಡೆಯುತ್ತಾರೆ. ಇದಲ್ಲದೆ, 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ 100 ಪ್ರತಿಶತ ಹೆಚ್ಚುವರಿ ಪಿಂಚಣಿ ಮೊತ್ತವು ಲಭ್ಯವಿರುತ್ತದೆ. 


[[{"fid":"283134","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ, ಶೀಘ್ರವೇ ವೇತನ ಹೆಚ್ಚಳ.!


ಕ್ರಮ ಕೈಗೊಳ್ಳಲಿದ್ದಾರೆ ಅಧಿಕಾರಿ : 
ಹೆಚ್ಚುವರಿ ಪಿಂಚಣಿ ಅಥವಾ ಕುಟುಂಬ ಪಿಂಚಣಿ ಮೊತ್ತವನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಪಿಂಚಣಿ ಅಧಿಕಾರಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪ್ರಾದೇಶಿಕ ಕಚೇರಿ ಖಚಿತಪಡಿಸುತ್ತದೆ. ಇದಲ್ಲದೆ, ಪಿಂಚಣಿ ಅಥವಾ ಕುಟುಂಬ ಪಿಂಚಣಿ ಮೊತ್ತದ ಪಾವತಿ ಆದೇಶವನ್ನು ಅಧಿಕಾರಿ ಮೂಲಕವೇ ನೀಡಲಾಗುತ್ತದೆ.  



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.