ನವದೆಹಲಿ: ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel Price)ಗಳು ಎಲ್ಲೆಡೆ ಹಣದುಬ್ಬರವನ್ನು ಹೆಚ್ಚಿಸಿವೆ. ಸಾರಿಗೆ ವೆಚ್ಚದ ಪರಿಣಾಮವು ಎಲ್ಲೆಡೆ ಗೋಚರಿಸುತ್ತದೆ. ಅಬಕಾರಿ ಸುಂಕ ಕಡಿತದ ನಂತರವೂ ಪೆಟ್ರೋಲ್-ಡೀಸೆಲ್ ಬೆಲೆ ಗಗನ ಮುಟ್ಟಿವೆ. ಆದರೆ ಈ ನಡುವೆ ಜನ ಸಾಮಾನ್ಯರಿಗೆ ಒಂದು ರಿಲೀಫ್ ಸುದ್ದಿ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ನಿಮಗೂ ತೊಂದರೆ ಆಗಿದ್ದರೆ ಈಗ ನಿಮ್ಮ ಸಮಸ್ಯೆ ಕಡಿಮೆಯಾಗಲಿದೆ. ಏಕೆಂದರೆ ಈಗ ನಿಮಗೆ 50 ಲೀಟರ್ ಉಚಿತ ಪೆಟ್ರೋಲ್ ಡೀಸೆಲ್ ಪಡೆಯುವ ಅವಕಾಶವಿದೆ.


COMMERCIAL BREAK
SCROLL TO CONTINUE READING

ವರ್ಷಕ್ಕೆ 50 ಲೀಟರ್ ವರೆಗೆ ಉಚಿತ ಇಂಧನ


ವಾಸ್ತವವಾಗಿ ನೀವು IndianOil HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್(Indian Oil HDFC Credit Card) ಮೂಲಕ ದೊಡ್ಡ ಉಳಿತಾಯವನ್ನು ಮಾಡಬಹುದು. ಈ ಕ್ರೆಡಿಟ್ ಕಾರ್ಡ್ ಮೂಲಕ ನೀವು IOCL ಔಟ್‌ಲೆಟ್‌ಗಳಲ್ಲಿ ‘ಫ್ಯುಯೆಲ್ ಪಾಯಿಂಟ್‌ಗಳ’ ರೂಪದಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತೀರಿ. ನೀವು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ನಲ್ಲಿ ಈ ಕಾರ್ಡ್ ಮೂಲಕ ಪಾವತಿಸಿದರೆ ಶೇ.5ರಷ್ಟು ಫ್ಯುಯೆಲ್ ಪಾಯಿಂಟ್‌ ಪಡೆಯುತ್ತೀರಿ. ವಿಶೇಷವೆಂದರೆ ಈ ಫ್ಯುಯೆಲ್ ಪಾಯಿಂಟ್‌ ಪಡೆದುಕೊಳ್ಳುವ ಮೂಲಕ ನೀವು ವಾರ್ಷಿಕ 50 ಲೀಟರ್ ಗಳಷ್ಟು ಉಚಿತ ಇಂಧನವನ್ನು ಪಡೆಯಬಹುದು.


ಇದನ್ನೂ ಓದಿ: ಬ್ಯಾಂಕ್ ಗ್ರಾಹಕರೇ ಗಮನಿಸಿ! ಸೇವಾ ಶುಲ್ಕ ದುಪ್ಪಟ್ಟು.. ಜ.15 ರಿಂದ ಬದಲಾಗಲಿವೆ ಈ ನಿಯಮಗಳು


ಕಾರ್ಡ್‌ನ ವಿಶೇಷತೆಗಳನ್ನು ತಿಳಿಯಿರಿ


  • ಈ ಕಾರ್ಡ್ ಮೂಲಕ ಇಂಧನವನ್ನು ಖರೀದಿಸುವಾಗ ನೀವು ಖರ್ಚು ಮಾಡುವ ಹಣದ ಶೇ.5 ರಷ್ಟು ಫ್ಯುಯೆಲ್ ಪಾಯಿಂಟ್‌(Fuel Points)ಗಳ ರೂಪದಲ್ಲಿ ಪಡೆಯುತ್ತೀರಿ.

  • ಮೊದಲ 6 ತಿಂಗಳವರೆಗೆ ನೀವು ಪ್ರತಿ ತಿಂಗಳು ಗರಿಷ್ಠ 50 ಫ್ಯುಯೆಲ್ ಪಾಯಿಂಟ್‌ಗಳನ್ನು ಪಡೆಯುತ್ತೀರಿ.

  • 6 ತಿಂಗಳ ನಂತರ ನೀವು ಗರಿಷ್ಠ 150 ಫ್ಯುಯೆಲ್ ಪಾಯಿಂಟ್‌ಗಳನ್ನು ಪಡೆಯಬಹುದು.

  • ಈ ಕಾರ್ಡ್ ಮೂಲಕ ದಿನಸಿ ಮತ್ತು ಬಿಲ್ ಪಾವತಿಗಳನ್ನು ಮಾಡುವಾಗಲೂ ನೀವು ಶೇ.5ರಷ್ಟು ಫ್ಯುಯೆಲ್ ಪಾಯಿಂಟ್‌ಗಳನ್ನು ಪಡೆಯುತ್ತೀರಿ.

  • ಅಂದರೆ ಈ ಎರಡೂ ವಿಭಾಗಗಳಲ್ಲಿ ನೀವು ಪ್ರತಿ ತಿಂಗಳು ಗರಿಷ್ಠ 100 ಇಂಧನ ಫ್ಯುಯೆಲ್ ಪಾಯಿಂಟ್‌ಗಳನ್ನು ಪಡೆಯಬಹುದು.

  • ಇತರ ವರ್ಗಗಳಲ್ಲಿ 150 ರೂ. ಖರ್ಚು ಮಾಡಿದರೆ ನೀವು 1 ಫ್ಯುಯೆಲ್ ಪಾಯಿಂಟ್‌ ಪಡೆಯುತ್ತೀರಿ.

  • ಪೆಟ್ರೋಲ್ ಪಂಪ್‌ಗಳಲ್ಲಿ ಈ ಕಾರ್ಡ್‌ನೊಂದಿಗೆ ಕನಿಷ್ಠ 400 ರೂ.ಗಳ ಇಂಧನ ಖರೀದಿಗೆ ಹಣ ಪಾವತಿಸಿದರೆ ನೀವು ಶೇ.1ರಷ್ಟು Fuel Surcharge ಪಾವತಿಸಬೇಕಾಗಿಲ್ಲ.

  • ಒಂದು ಬಿಲ್ಲಿಂಗ್ ಸೈಕಲ್‌ನಲ್ಲಿ ಗರಿಷ್ಠ 250 ರೂ.ವರೆಗೆ ಹೆಚ್ಚುವರಿ Fuel Surcharge ಮನ್ನಾ ಆಗಲಿದೆ


ಇದನ್ನೂ ಓದಿ: ITR Filing Date Extended: ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿ, ITR ದಾಖಲಿಸುವ ಗಡುವು ವಿಸ್ತರಣೆ


ಕಾರ್ಡ್‌ನ ವಾರ್ಷಿಕ ಶುಲ್ಕ 500 ರೂ.


ಈ ಕಾರ್ಡ್‌ನ ಖರೀದಿ ಮತ್ತು ನವೀಕರಣ ಸದಸ್ಯತ್ವ ಶುಲ್ಕ(Joining and Renewal Membership Fee) ಕೇವಲ 500 ರೂ. ಆಗಲಿದೆ. ನೀವು ಈ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು ಬಯಸಿದರೆ HDFC ಬ್ಯಾಂಕ್‌ನ ವೆಬ್‌ಸೈಟ್ hdfcbank.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನೀವು ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕವೂ ಅರ್ಜಿ ಸಲ್ಲಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.