ನವದೆಹಲಿ: ಸರ್ಕಾರಿ ತೈಲ ಕಂಪನಿಗಳು ಭಾನುವಾರದ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ದರಗಳನ್ನು ಬಿಡುಗಡೆ ಮಾಡಿದೆ. ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಬಾರಿ ಮೇ 21ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದಾಗಿ ಘೋಷಿಸಿತ್ತು. ಮೇ 21ರಂದು ಕೇಂದ್ರದ ಮೋದಿ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತು. ಇದಾದ ನಂತರ ದೇಶಾದ್ಯಂತ ಪೆಟ್ರೋಲ್ 9.50 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 7 ರೂ. ಕಡಿಮೆಯಾಗಿತ್ತು.


COMMERCIAL BREAK
SCROLL TO CONTINUE READING

ಪೆಟ್ರೋಲ್-ಡೀಸೆಲ್ ಮತ್ತಷ್ಟು ಅಗ್ಗ..?


ಕಳೆದ ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಳಷ್ಟು ವಹಿವಾಟು ನಡೆಸುತ್ತಿದೆ. ಈ ಮಧ್ಯೆ ಪಾಕಿಸ್ತಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕಚ್ಚಾ ತೈಲ ದರದಲ್ಲಿ ನಿರಂತರ ಇಳಿಕೆಯಾದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಕಡಿಮೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಕಳೆದ 2 ತಿಂಗಳಿನಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ.


ಇದನ್ನೂ ಓದಿ: ವಿವಾಹಿತರು Ration Cardನಲ್ಲಿ ತಕ್ಷಣ ಈ ಅಪ್‌ಡೇಟ್‌ ಮಾಡಿ, ಇಲ್ಲದಿದ್ದರೆ ನಿಂತು ಹೋಗುತ್ತೆ ರೇಷನ್


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ


  • ದೆಹಲಿಯಲ್ಲಿ ಪೆಟ್ರೋಲ್ 96.72 ರೂ. ಇದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 89.62 ರೂ. ಇದೆ

  • ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಇದ್ದರೆ, ಡೀಸೆಲ್ 94.27 ರೂ. ಇದೆ

  • ಚೆನ್ನೈನಲ್ಲಿ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ 94.24 ರೂ. ಇದೆ

  • ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ 92.76 ರ. ಇದೆ.

  • ನೋಯ್ಡಾದಲ್ಲಿ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ 89.96 ರೂ. ಇದೆ

  • ಲಕ್ನೋದಲ್ಲಿ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ 89.76 ರೂ. ಇದೆ.

  • ಜಯಪುರದಲ್ಲಿ ಪೆಟ್ರೋಲ್ 108.48 ರೂ. ಮತ್ತು ಡೀಸೆಲ್ 93.72 ರೂ. ಇದೆ.

  • ತಿರುವನಂತಪುರಂನಲ್ಲಿ ಪೆಟ್ರೋಲ್ 107.71 ರೂ. ಮತ್ತು ಡೀಸೆಲ್ 96.52 ರೂ. ಇದೆ.

  • ಪೋರ್ಟ್ ಬ್ಲೇರ್ ನಲ್ಲಿ ಪೆಟ್ರೋಲ್ 84.10 ರೂ. ಮತ್ತು ಡೀಸೆಲ್ 79.74 ರೂ. ಇದೆ

  • ಪಟ್ನಾದಲ್ಲಿ ಪೆಟ್ರೋಲ್ 107.24 ರೂ. ಮತ್ತು ಡೀಸೆಲ್ 94.04 ರೂ. ಇದೆ.

  • ಗುರುಗ್ರಾಮದಲ್ಲಿ 97.18 ರೂ. ಮತ್ತು ಡೀಸೆಲ್ 90.05 ರೂ. ಇದೆ.

  • ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ 87.89 ರೂ. ಇದೆ

  • ಭುವನೇಶ್ವರ್ ನಲ್ಲಿ ಪೆಟ್ರೋಲ್ 103.19 ರೂ. ಮತ್ತು ಡೀಸೆಲ್ 94.76 ರೂ. ಇದೆ

  • ಚಂಡೀಗಢದಲ್ಲಿ ಪೆಟ್ರೋಲ್ 96.20 ರೂ. ಮತ್ತು ಡೀಸೆಲ್ 84.26 ರೂ. ಇದೆ

  • ಹೈದರಾಬಾದ್ ನಲ್ಲಿ ಪೆಟ್ರೋಲ್ 109.66 ರೂ. ಮತ್ತು ಡೀಸೆಲ್ 97.82 ರೂ.ನಂತೆ ಮರಾಟವಾಗುತ್ತಿದೆ


ಇದನ್ನೂ ಓದಿ: Traffic Rules Updates: ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟಿ ಚಲಾಯಿಸುವವರೇ ಹುಷಾರ್...! ಕಾರಣ ಇಲ್ಲಿದೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.