Petrol-Diesel Price Hike:  ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ  ಏರಿಕೆಯಾಗಿದೆ. ಇನ್ನು ಕಳೆದ 7 ದಿನಗಳಲ್ಲಿ 6 ಬಾರಿ  ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿದ್ದು ಒಟ್ಟು 4 ರೂಪಾಯಿ 10 ಪೈಸೆ ಏರಿಕೆಯಾಗಿದೆ.  ಇದರೊಂದಿಗೆ ಪೆಟ್ರೋಲ್ ಡೀಸೆಲ್ ದರ ನೂರರ ಗಡಿ ಮುಟ್ಟುತ್ತಿದೆ.


COMMERCIAL BREAK
SCROLL TO CONTINUE READING

ಸೋಮವಾರ ಬೆಳಗ್ಗೆಯಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 30 ಪೈಸೆ ಹಾಗೂ ಡೀಸೆಲ್ ಬೆಲೆ 35 ಪೈಸೆ ಏರಿಕೆಯಾಗಿದೆ. ಈ ಏರಿಕೆ ಇಂದು ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬಂದಿದೆ. ಇದಾದ ಬಳಿಕ ಇಂದು ಪೆಟ್ರೋಲ್ ಬೆಲೆ (Petrol Price) ಲೀಟರ್‌ಗೆ 99.41 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 90.77 ರೂ.ಗೆ ಏರಿಕೆಯಾಗಿದೆ.


ಇದನ್ನೂ ಓದಿ- Bike: ಇದು ಬೈಕ್ ಅಲ್ಲ ದ್ವಿಚಕ್ರ ಕಾರ್!


ದೇಶದಲ್ಲಿ ಮಾರ್ಚ್ 22 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು (Diesel Price) ಹೆಚ್ಚಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಒಂದು ವಾರದಲ್ಲಿ ತೈಲ ಬೆಲೆ 4.10 ರೂ. ಹೆಚ್ಚಳಗೊಂಡಿದೆ. ಆರ್ಥಿಕ ತಜ್ಞರ ಪ್ರಕಾರ ರಷ್ಯಾ-ಉಕ್ರೇನ್ ಯುದ್ಧವು ಕೊನೆಗೊಳ್ಳುವವರೆಗೆ, ಈ ಬೆಳವಣಿಗೆಯು ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ನಂಬಲಾಗಿದೆ.


ಇದನ್ನೂ ಓದಿ- ಮಾರುಕಟ್ಟೆಗೆ ಬರುತ್ತಿದೆ ಅಗ್ಗದ ಬೆಲೆಯ ಎರಡು ಮಾರುತಿ ಕಾರುಗಳು..!


ಸಾರ್ವಜನಿಕ ಜೇಬಿನ ಮೇಲೆ ಪರಿಣಾಮ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಈ ಏರಿಕೆಯು ಸಾರ್ವಜನಿಕರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ.   ಒಂದೆಡೆ ಈಗಾಗಲೇ ಅಡುಗೆ ಅನಿಲ ದರ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಪೆಟ್ರೋಲ್-ಡೀಸೆಲ್ ದರ ಗಗನಮುಖಿ ಆಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.