Petrol Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ಇಂದು ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ ಏರಿಕೆ!
ತೈಲ ಕಂಪನಿಗಳು ಬುಧವಾರ ಬೆಳಗ್ಗೆಯಿಂದ ತೈಲ ಬೆಲೆಯನ್ನು ಮತ್ತೆ ಹೆಚ್ಚಿಸುವುದಾಗಿ ಘೋಷಿಸಿವೆ.
ನವದೆಹಲಿ : ದೇಶದ 5 ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮುಂದುವರಿದಿದೆ. ತೈಲ ಕಂಪನಿಗಳು ಬುಧವಾರ ಬೆಳಗ್ಗೆಯಿಂದ ತೈಲ ಬೆಲೆಯನ್ನು ಮತ್ತೆ ಹೆಚ್ಚಿಸುವುದಾಗಿ ಘೋಷಿಸಿವೆ.
ಮತ್ತೆ ತೈಲ ಬೆಲೆ ಏರಿಕೆ
ಮಂಗಳವಾರ ರಾತ್ರಿ ತೈಲ ಕಂಪನಿಗಳು ಹೊರಡಿಸಿದ ಪ್ರಕಟಣೆಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol Diesel Price)ಯಲ್ಲಿ 80-80 ಪೈಸೆ ಏರಿಕೆಯಾಗಿದೆ. ಬೆಲೆಯಲ್ಲಿನ ಈ ಹೆಚ್ಚಳವು ಬುಧವಾರ ಬೆಳಿಗ್ಗೆ 6 ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ : Hero Splendor Electric: Hero Splendor ಬೈಕ್ ನ ಎಲೆಕ್ಟ್ರಿಕ್ ಅವತಾರ ನೋಡಿದ್ದೀರಾ? ಇಲ್ಲ ಎಂದಾದರೆ ಈಗಲೇ ನೋಡಿ
9 ದಿನಗಳಲ್ಲಿ 8 ಬಾರಿ ಬೆಲೆ ಏರಿಕೆ!
9 ದಿನಗಳಲ್ಲಿ 8 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಮಾರ್ಚ್ 22 ರಿಂದ ಇಲ್ಲಿಯವರೆಗೆ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 5.60 ರೂ. ದುಬಾರಿಯಾಗಿದೆ. ಹೊಸ ಏರಿಕೆಯ ನಂತರ ದೆಹಲಿಯಲ್ಲಿ ಮಾರ್ಚ್ 30 ರಂದು 101.01 ಕ್ಕೆ ಪೆಟ್ರೋಲ್ ಲಭ್ಯವಿರುತ್ತದೆ ಮತ್ತು ಡೀಸೆಲ್ ಲೀಟರ್‌ಗೆ 97.27 ರೂ. ಇದೆ.
ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನಿರಂತರ ವಾಗ್ದಾಳಿ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ(Petrol Diesel Price Hike) ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಹಣದುಬ್ಬರವು ದೇಶದ ಪ್ರತಿ ಮನೆಯ ಬಜೆಟ್ ಅನ್ನು ಹಾಳು ಮಾಡಿದೆ ಎಂದು ಪ್ರತಿಪಕ್ಷಗಳು ಹೇಳುತ್ತವೆ. ಅಲ್ಲದೆ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಇದರಿಂದಾಗಿ ಭಾರತದಲ್ಲಿ ತೈಲ ಬೆಲೆಯೂ ಹೆಚ್ಚುತ್ತಿದೆ.
ಇದನ್ನೂ ಓದಿ : ನೌಕರರಿಗೆ ಬಿಗ್ ಶಾಕ್ : 15 ದಿನಗಳ ಬದಲಿಗೆ 30 ದಿನಗಳ ಗ್ರಾಚ್ಯುಟಿ ಪ್ರಸ್ತಾವನೆ ನಿರಾಕರಿಸಿದ ಕೇಂದ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.