Hero Splendor Electric: Hero Splendor ಬೈಕ್ ನ ಎಲೆಕ್ಟ್ರಿಕ್ ಅವತಾರ ನೋಡಿದ್ದೀರಾ? ಇಲ್ಲ ಎಂದಾದರೆ ಈಗಲೇ ನೋಡಿ

Hero MotoCorp ನ Splendor ಬೈಕ್ ನ ಖ್ಯಾತಿ ಹೇಗಿದೆ ಎಂಬುದು ನಿಮ್ಮೆಲ್ಲರಿಗೂ ತಿಳಿದ ವಿಷಯವೇ.ಆದರೆ, ಹಿರೋ ಕಂಪನಿಯ ಈ ಅತ್ಯಂತ ಜನಪ್ರೀಯ ಬೈಕ್ ನ ಇಲೆಕ್ಟ್ರಿಕ್ ಅವತಾರ ಇದೀಗ ಆನ್ಲೈನ್ ನಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.  

Written by - Nitin Tabib | Last Updated : Mar 29, 2022, 07:37 PM IST
  • Hero Splendor ಭಾರತೀಯ ದ್ವಿಚಕ್ರ ವಾಹನ ಸವಾರರ ಕಣ್ಣಿನ ಕಣ್ಮಣಿ.
  • ಈ ಬೈಕ್ ನ ಎಲೆಕ್ಟ್ರಿಕ್ ಅವತಾರ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ
  • ಬೈಕ್ ನ ರೆಂಡರ್ ವಿನ್ಯಾಸ ಹಂಚಿಕೊಂಡ ವಿನಯ್ ರಾಜ್ ಸೋಮಶೇಖರ್
Hero Splendor Electric: Hero Splendor ಬೈಕ್ ನ ಎಲೆಕ್ಟ್ರಿಕ್ ಅವತಾರ ನೋಡಿದ್ದೀರಾ? ಇಲ್ಲ ಎಂದಾದರೆ ಈಗಲೇ ನೋಡಿ   title=
Electric Hero Splendor

ನವದೆಹಲಿ: Electric Hero Splendor - ನಮ್ಮ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಆರಂಭವಾಗಿದೆ ಮತ್ತು ಗ್ರಾಹಕರು ಅವುಗಳತ್ತ ಸಾಗಲು ಶುರು ಮಾಡಿದ್ದಾರೆ. ಖರೀದಿಗಳ ವೇಗವು ನಿಧಾನವಾಗಿರಬಹುದು, ಆದರೆ ಇನ್ನೂ ಅವುಗಳನ್ನು ನಿಧಾನವಾಗಿ ಅಳವಡಿಸಿಕೊಳ್ಳಲಾಗುತ್ತಿದೆ, ವಿಶೇಷವಾಗಿ ದ್ವಿಚಕ್ರದ ಎಲೆಕ್ಟ್ರಿಕ್ ವಾಹನಗಳಿಗೆ ಕಾರುಗಳಿಗಿಂತ ವೇಗವಾಗಿ ಆದ್ಯತೆ ಸಿಗುತ್ತಿದೆ. ವಿನಯ್ ರಾಜ್ ಸೇಮಶೇಖರ್ ಅವರು ಇತ್ತೀಚೆಗೆ ಭಾರತೀಯ ಗ್ರಾಹಕರ ಕಣ್ಣಿನ ಕಣ್ಮಣಿ ಎಂದೇ ಕರೆಯಲಾಗುವ Hero Splendor ದ್ವಿಚಕ್ರ ವಾಹನದ Electric ಅವತಾರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕಾಣುವ ಬೈಕ್ ಹೀರೋ ಮೊಟೊಕಾರ್ಪ್ ನಿಂದಲೇ ವಿನ್ಯಾಸಗೊಂಡಿರುವಂತಿದೆ. ಇಂತಹ ಪರಿಸ್ಥಿತಿಯಲ್ಲಿ, ಮುಂಬರುವ ದಿನಗಳಲ್ಲಿ ಹೀರೋ ನಿಜವಾಗಿಯೂ ಸ್ಪ್ಲೆಂಡರ್ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಿದರೆ, ಭಾರತದಲ್ಲಿ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯ ವಾತಾವರಣವೇ ಬದಲಾಗಲಿದೆ.

ತಮ್ಮ LinkdIn ಪೋಸ್ಟ್ ನಲ್ಲಿ ವಿನಯ್ ಹೇಳಿದ್ದೇನು?
LinkdIn ನಲ್ಲಿ Hero Splendor Electric ಫೋಟೋವನ್ನು ಹಂಚಿಕೊಂಡ ವಿನಯ್, "Hero Splendor ಭಾರತೀಯ ಗ್ರಾಹಕರ ಅಗತ್ಯತೆಯಾಗಿ ಮಾರ್ಪಟ್ಟಿದೆ. ಇದರ ಕಾರ್ಯಕ್ಷಮತೆ ಅದ್ಭುತವಾಗಿದೆ ಮತ್ತು ಇದಕ್ಕೆ ಎಂದಿಗೂ ವಯಸ್ಸಾಗುವುದಿಲ್ಲ. ಇದರ ವಿನ್ಯಾಸದಲ್ಲಿಯೂ ನೀವು ಯಾವುದೇ ನ್ಯೂನತೆಯನ್ನು ಕಾಣುವುದಿಲ್ಲ. ಇದರ ಪ್ರತಿಯೊಂದು ಭಾಗವು ಅತ್ಯಗತ್ಯ ಸಾಬೀತಾಗಲಿದೆ ಮತ್ತು ಪರಿಣಾಮಕಾರಿಯಾಗಿದೆ. ಈ ಬೈಕ್‌ನಲ್ಲಿ ನೀವು ಸಾಕಷ್ಟು ಸ್ಥಳಾವಕಾಶವನ್ನು ಪಡೆಯುವಿರಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ-Gravton Quanta: ಕೇವಲ ರೂ.10ಕ್ಕೆ 100 ಕಿ.ಮೀ ಓಡುತ್ತೆ ಈ ಬೈಕ್, ಭಾರತೀಯ ಕಂಪನಿಯಿಂದ ಪವರ್ಫುಲ್ ಇ-ಬೈಕ್ ಬಿಡುಗಡೆ

ಹಳೆ ವಿನ್ಯಾಸದಿಂದಲೇ ಸಾಕಷ್ಟು ಸಂಗತಿಗಳನ್ನು ತೆಗೆದುಕೊಳ್ಳಲಾಗಿದೆ
ಪ್ರಸ್ತುತ ವಿನಯ್ ಹಂಚಿಕೊಂಡ ಬೈಕ್ ನ ಚಿತ್ರ ಒಂದು ಡಿಜಿಟಲ್ ರೆಂಡರ್ ಆಗಿದೆ, ಇದರಲ್ಲಿ ವಿನಯ್ ಬೈಕ್ ನ ಬಹುತೇಕ ಭಾಗಗಳನ್ನು ಹಳೆ ಪೆಟ್ರೋಲ್ ನಿಂದ ಚಾಲಿತ ಸ್ಪ್ಲೆಂಡರ್ ಬೈಕ್ ರೀತಿಯೇ ತೋರಿಸಿದ್ದಾರೆ. ಬೈಕ್ ನ ಇಂಜಿನ್ ಭಾಗದಲ್ಲಿ ಕಪ್ಪು ಬಣ್ಣದ ಬ್ಯಾಟರಿ ಇರುವುದನ್ನು ತೋರಿಸಲಾಗಿದೆ. ಇದರಲ್ಲಿ ಇಂಜಿನ್ ಜೊತೆಗೆ ಗಿಯರ್ ಬಾಕ್ಸ್ ಅನ್ನು ಕೂಡ ತೆಗೆದುಹಾಕಲಾಗಿದೆ. ಈ ಬೈಕ್ ಒಂದು ಇಲೆಕ್ಟ್ರಿಕ್ ಬೈಕ್ ಆಗಿದೆ ಎಂಬುದನ್ನು ತೋರಿಸಲು. ಬೈಕ್ ನ ಬಹುತೇಕ ಭಾಗಗಳ ಮೇಲೆ ನೀಲಿ ಬಣ್ಣದ ಪಟ್ಟಿಗಳನ್ನು ತೋರಿಸಲಾಗಿದೆ ಮತ್ತು ಇದು ಬೈಕ್ ಅನ್ನು ನೋಡಲು ಇದು ತುಂಬಾ ಆಕರ್ಷಕವನ್ನಾಗಿಸಿದೆ.

ಇದನ್ನೂ ಓದಿ-ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಚಿಂತೆ ಪಡಬೇಕಿಲ್ಲ, 10 ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ electric bike

ತುಂಬಾ ಪವರ್ಫುಲ್ ಆಗಿದೆ ಇಲೆಕ್ಟ್ರಿಕ್ ಸ್ಪ್ಲೆಂಡರ್
ಹೀರೋ ಸ್ಪ್ಲೆಂಡರ್ ಮೋಟರ್ ಸೈಕಲ್ ನ ರೆಂಡರ್ ಬೈಕ್ ನಲ್ಲಿ 9 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅಳವಡಿಸಿರುವುದನ್ನು ತೋರಿಸಲಾಗಿದೆ. ಇದು ಬೈಕ್ ನ ಹಿಂಭಾಗದ ವ್ಹೀಲ್ ಗೆ ಸಾಕಷ್ಟು ಶಕ್ತಿ ಒದಗಿಸಲಿದೆ. ಈ ಬೈಕ್ ಜೊತೆಗೆ ಬೇರ್ಪಡಿಸುವ 2 ಕಿಲೋವ್ಯಾಟ್ ನ ಎರಡು ಬ್ಯಾಟರಿಗಳನ್ನು ನೀಡಲಾಗಿದೆ ಮತ್ತು ಅವು ಗಾತ್ರದಲ್ಲಿ ತುಂಬಾ ಚಿಕ್ಕದಾಗಿರಲಿವೆ ಎನ್ನಲಾಗಿದೆ. ಪೆಟ್ರೋಲ್ ಬೈಕ್ ನಲ್ಲಿ ಪೆಟ್ರೋಲ್ ತುಂಬಿಸುವ ಜಾಗದಲ್ಲಿಯೇ ಇದರ ಚಾರ್ಜಿಂಗ್ ಪಾಯಿಂಟ್ ತೋರಿಸಲಾಗಿದೆ. 6 ಕಿಲೋವ್ಯಾಟ್-ಅವರ್ ಬ್ಯಾಟರಿಯ ಜೊತೆಗೆ ಈ ಬೈಕ್ ಒಂದೇ ಚಾರ್ಜ್ ನಲ್ಲಿ 180 ಕಿ.ಮೀ ರೇಂಜ್ ನೀಡುತ್ತದೆ. ಇದು 4 ಕಿಲೋವ್ಯಾಟ್-ಅವರ್ ಬ್ಯಾಟರಿಯಲ್ಲಿ 120 ಕಿ.ಮೀ ರೇಂಜ್ ನೀಡಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News