Petrol Diesel Price: ಮಾರ್ಚ್ 22ರಿಂದ ಗಗನಮುಖಿಯಾಗಿರುವ ಪೆಟ್ರೋಲ್ ದರ ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ 10 ದಿನಗಳಿಂದ ನಿರಂತರವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ. ತೈಲ ಕಂಪನಿಗಳು ಗುರುವಾರ ಬೆಳಗ್ಗೆಯಿಂದ ಮತ್ತೆ ತೈಲ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿವೆ. 


COMMERCIAL BREAK
SCROLL TO CONTINUE READING

ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು ಗೊತ್ತಾ?
ತೈಲ ಕಂಪನಿಗಳು ಬುಧವಾರ ರಾತ್ರಿ ಮಾಡಿದ ಪ್ರಕಟಣೆಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol Diesel Price) ಲೀಟರ್‌ಗೆ 80-80 ಪೈಸೆಗಳಷ್ಟು ಹೆಚ್ಚಾಗಿದೆ. ಗುರುವಾರ ಬೆಳಗ್ಗೆ 6 ಗಂಟೆಯಿಂದ ಈ ಹೊಸ ದರ ಅನ್ವಯವಾಗಲಿದೆ.


ಇದನ್ನೂ ಓದಿ- ವಾಹನ ಸವಾರರೆ ಗಮನಿಸಿ : ನಿಮ್ಮ ಜೊತೆಗೆ DL ಕೊಂಡೊಯ್ಯುವ ಅಗತ್ಯವಿಲ್ಲ! ಏಕೆ? ಇಲ್ಲಿ ನೋಡಿ


10 ದಿನಗಳಲ್ಲಿ 9 ಬಾರಿ ಬೆಲೆ ಏರಿಕೆಯಾಗಿದೆ:
10 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Diesel Price) 9 ಬಾರಿ ಏರಿಕೆಯಾಗಿದೆ. ಮಾರ್ಚ್ 22 ರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 6.20 ರೂ. ಏರಿಕೆ ಕಂಡಿದೆ. ಹೊಸ ಏರಿಕೆಯ ನಂತರ, ಮಾರ್ಚ್ 31 ರಂದು ದೆಹಲಿಯಲ್ಲಿ ಪೆಟ್ರೋಲ್ 101.81 ರೂ ಮ.ತ್ತು ಡೀಸೆಲ್ ಪ್ರತಿ ಲೀಟರ್‌ಗೆ 93.07 ರೂ. ತಲುಪಿದೆ. 


ಇದನ್ನೂ ಓದಿ- ಪ್ಯಾರಸಿಟಮಾಲ್ ಸೇರಿದಂತೆ 800 ಔಷಧಗಳ ಬೆಲೆ ಹೆಚ್ಚಳ ; ಇನ್ನು ತೆರಬೇಕಾಗುತ್ತದೆ 10% ಹೆಚ್ಚಿನ ದರ


"ಎಲ್ಲಾ ದೇಶಗಳ ಮೇಲೆ ಉಕ್ರೇನ್-ರಷ್ಯಾ ಯುದ್ಧದ ಪ್ರಭಾವ":
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ರಾಜ್ಯಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಪೂರೈಕೆ ಸಮಸ್ಯೆಗಳೇ ಕಾರಣ ಎಂದು ಹೇಳಿದ್ದಾರೆ. ರಷ್ಯಾ-ಉಕ್ರೇನ್‌ನಲ್ಲಿ ನಡೆದ ಯುದ್ಧದಿಂದಾಗಿ ವಿಶ್ವದ ಎಲ್ಲಾ ದೇಶಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.