ಈ ಬ್ಯಾಂಕ್ ನೀಡುತ್ತಿದೆ ಅಗ್ಗದ ದರದಲ್ಲಿ ಚಿನ್ನದ ಮೇಲಿನ ಸಾಲ

ಕಡಿಮೆ ಅಪಾಯದ ಕಾರಣ, ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಚಿನ್ನವನ್ನು ಒತ್ತೆಯಿಟ್ಟು ಸುಲಭವಾಗಿ ಸಾಲವನ್ನು ತೆಗೆದುಕೊಳ್ಳಬಹುದು. 

Written by - Ranjitha R K | Last Updated : Mar 24, 2022, 04:09 PM IST
  • ಚಿನ್ನದ ಸಾಲ ಪಡೆಯುವುದು ಲಾಭದಾಯಕ
  • ಸಾಲ ಪಡೆಯುವ ವೇಳೆ ಈ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
  • ಈ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಅನುಕೂಲವಾಗುತ್ತದೆ
ಈ ಬ್ಯಾಂಕ್ ನೀಡುತ್ತಿದೆ ಅಗ್ಗದ ದರದಲ್ಲಿ ಚಿನ್ನದ ಮೇಲಿನ ಸಾಲ  title=
ಚಿನ್ನದ ಸಾಲ ಪಡೆಯುವುದು ಲಾಭದಾಯಕ (file photo)

ನವದೆಹಲಿ : Cheapest Gold Loan: ಜೀವನದಲ್ಲಿ ಹಣದ ಅವಶ್ಯಕತೆ ಯಾವಾಗ ಬೇಕಾದರೂ ಎದುರಾಗಬಹುದು. ಹೀಗೆ ತುರ್ತು ಪರಿಸ್ಥಿತಿಯಲ್ಲಿ ಹಣದ ಅಗತ್ಯ ಬಿದ್ದರೆ,  ಬ್ಯಾಂಕ್‌ನಿಂದ ಚಿನ್ನದ ಸಾಲವನ್ನು ಪಡೆದುಕೊಳ್ಳಬಹುದು (Gold loan). ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಸುಲಭವಾಗಿ ಚಿನ್ನದ ಸಾಲವನ್ನು ಪಡೆಯಬಹುದು (Gold loan interest rate).  ಇದು ವೈಯಕ್ತಿಕ ಸಾಲಕ್ಕಿಂತ ಇದರ ಬಡ್ಡಿದರ ಅಗ್ಗವಾಗಿದೆ. ಕಡಿಮೆ ಅಪಾಯದ ಕಾರಣ, ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಚಿನ್ನವನ್ನು ಒತ್ತೆಯಿಟ್ಟು ಸುಲಭವಾಗಿ ಸಾಲವನ್ನು ತೆಗೆದುಕೊಳ್ಳಬಹುದು. 

ಈ ಬ್ಯಾಂಕುಗಳಲ್ಲಿ ಅಗ್ಗದ ದರಕ್ಕೆ ಚಿನ್ನದ ಸಾಲ ಲಭ್ಯವಿದೆ:
- ಫೆಡರಲ್ ಬ್ಯಾಂಕ್ - 8.50 ಶೇ
- ಎಸ್‌ಬಿಐ (SBI) - 7.30 ಶೇಕಡಾ
- ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ - 7 ಶೇ
- ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) - 8.75 ಶೇಕಡಾ
- ಕೆನರಾ ಬ್ಯಾಂಕ್ - 7.35 ಶೇ
- ಇಂಡಿಯನ್ ಬ್ಯಾಂಕ್ - 7 ಶೇ
- ಬ್ಯಾಂಕ್ ಆಫ್ ಬರೋಡಾ (BOB) - 9.00 ಶೇ
- ಕರ್ಣಾಟಕ ಬ್ಯಾಂಕ್ (Karnataka Bank)- 8.49 ಶೇ
- IDBI ಬ್ಯಾಂಕ್ (IDBI) - 7 ಶೇ 
- HDFC ಬ್ಯಾಂಕ್ - 11 ಶೇ

(ಈ ಅಂಕಿಅಂಶಗಳನ್ನು ಆನ್‌ಲೈನ್ ಮಾರುಕಟ್ಟೆ  BankBazaar.com ನಿಂದ ಸಂಗ್ರಹಿಸಲಾಗಿದೆ. ಈ ಪಟ್ಟಿಯು ಸಾರ್ವಜನಿಕ-ಖಾಸಗಿ ಬ್ಯಾಂಕ್‌ಗಳು ಮತ್ತು BSE ನಲ್ಲಿ ಪಟ್ಟಿ ಮಾಡಲಾದ NBFC ಗಳನ್ನು ಒಳಗೊಂಡಿದೆ.) 

ಇದನ್ನೂ ಓದಿ: ಮಾರ್ಚ್ 31 ರೊಳಗೆ ಪೂರ್ಣಗೊಳಿಸಿ ಈ ಕೆಲಸ - ಇಲ್ಲದಿದ್ದರೆ ತಪ್ಪಿದ್ದಲ್ಲ ಸಮಸ್ಯೆ

ಸಾಲ ಪಡೆಯುವ ಮುನ್ನ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ
1- ಸಾಲವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಚಿನ್ನವು 18 ಕ್ಯಾರೆಟ್‌ಗಿಂತ ಕಡಿಮೆಯಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಅನೇಕ ಬ್ಯಾಂಕುಗಳು  (Bank) 18 ಕ್ಯಾರೆಟ್‌ಗಿಂತ ಕಡಿಮೆ ಚಿನ್ನದ ಮೇಲೆ ಸಾಲವನ್ನು ನೀಡುವುದಿಲ್ಲ.
2- ಚಿನ್ನದ ಸಾಲ ಪಡೆಯಲು ಆಧಾರ್ (Aadhaar) ಅಥವಾ ಪ್ಯಾನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಇದು ನಿಮ್ಮ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ.
3- ಸಾಮಾನ್ಯ ಸಾಲದಂತೆ, ಚಿನ್ನವನ್ನು ವಿವಿಧ ಅವಧಿಗಳಿಗೆ ನೀಡಲಾಗುತ್ತದೆ. ಬ್ಯಾಂಕ್‌ಗಳು ಸಾಮಾನ್ಯ ಚಿನ್ನದ ಸಾಲವನ್ನು 3 ತಿಂಗಳಿಂದ 36 ತಿಂಗಳವರೆಗೆ ನೀಡುತ್ತಿವೆ.
4- ಯಾವಾಗಲೂ ಸರ್ಕಾರಿ ಬ್ಯಾಂಕ್‌ಗಳಿಂದ ಮಾತ್ರ ಚಿನ್ನದ ಸಾಲ ಪಡೆಯಲು ಪ್ರಯತ್ನಿಸಿ.  ಇಲ್ಲಿ ಚಿನ್ನದ ಮೇಲಿನ ಸಾಲಕ್ಕೆ ಕಡಿಮೆ ಬಡ್ಡಿ ವಿಧಿಸಲಾಗುತ್ತದೆ.

ಇದನ್ನೂ ಓದಿ: 24-03-2022 Gold Price Today: ಆಭರಣ ಪ್ರಿಯರಿಗೆ ಶಾಕ್.! ಗಗನಕ್ಕೇರಿದ ಚಿನ್ನದ ಬೆಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News