Petrol Diesel Price: ವಾಹನಗಳ ಇಂಧನ ಬೆಲೆ ಏರಿಕೆ ಮತ್ತು ಇಳಿಕೆ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಆದರೆ ಈ ಪರಿಹಾರವು ಹೆಚ್ಚು ಕಾಲ ಇರುವುದಿಲ್ಲ ಎನ್ನಲಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್‌ಗಳು ಸಹ ಜನಸಾಮಾನ್ಯರ ಕೈಗೆ ಸಿಗದಂತಾಗಬಹುದು. ರಷ್ಯಾವು ವಿಶ್ವಾದ್ಯಂತದ ತೈಲದ ಲೆಕ್ಕಾಚಾರ ಹಾಳುಮಾಡಬಹುದು ಎನ್ನಲಾಗುತ್ತಿದೆ. ರಷ್ಯಾ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದರೆ, ಇಡೀ ಜಗತ್ತು ಅದರ ಕೆಟ್ಟ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.. ರಷ್ಯಾದ ಈ ಸಂಭವನೀಯ ನಡೆಯಿಂದಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿಶ್ವಾದ್ಯಂತ ಗಗನ ಮುಖಿಯಾಗಲು ಕಾರಣವಾಗಲಿದೆ ಮತ್ತು ಹಣದುಬ್ಬರ ಮೀಟರ್ ಕೂಡ ವಿಪರೀತ ಏರಿಕೆಯಾಗಲಿದೆ. ಭಾರತ ಮತ್ತು ಇಡೀ ವಿಶ್ವದಲ್ಲಿ ತೈಲದ ಲೆಕ್ಕಾಚಾರವನ್ನು ರಷ್ಯಾ ಹೇಗೆ ಹಾಳುಮಾದಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ರಷ್ಯಾದೊಂದಿಗೆ ಅಸಮಾಧಾನ ದುಬಾರಿ ಪರಿಣಮಿಸಲಿದೆ
ಉಕ್ರೇನ್‌ನೊಂದಿಗಿನ ಯುದ್ಧದಿಂದಾಗಿ, ವಿಶ್ವದ ಎಲ್ಲಾ ದೇಶಗಳು ರಷ್ಯಾದ ಮೇಲೆ ಮುನಿಸಿಕೊಂಡಿವೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳೂ ಕೂಡ ರಷ್ಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ರಷ್ಯಾದ ಮೇಲೆ ಎಲ್ಲಾ ಜಾಗತಿಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಇತ್ತೀಚೆಗಷ್ಟೇ ಜರ್ಮನಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಉಕ್ರೇನ್ ಜತೆಗಿನ ಯುದ್ಧದಿಂದಾಗಿ ರಷ್ಯಾ ಮೇಲೆ ಜಾಗತಿಕ ನಿರ್ಬಂಧ ಹೇರುವ ಕುರಿತು ಚರ್ಚೆ ನಡೆದು ಹಲವು ಮಹತ್ವದ ನಿರ್ಧಾರಗಳನ್ನೂ ಕೈಗೊಳ್ಳಲಾಗಿದೆ.


ಇದನ್ನೂ ಓದಿ-Jobs: ಅನುಭವ ಅಥವಾ ಸಿವಿ ಯಾವುದು ಬೇಕಿಲ್ಲ, 24 ಗಂಟೆಯೊಳಗೆ ನೌಕರಿಯ ಆಫರ್, ಭರ್ಜರಿ ವೇತನ ಕೂಡ ಸಿಗುತ್ತಿದೆ


ತಜ್ಞರು ನೀಡಿದ ಎಚ್ಚರಿಕೆ ಏನು?
ಇದಾದ ನಂತರ ರಷ್ಯಾ ಇಡೀ ಜಗತ್ತನ್ನು ತೊಂದರೆಗೆ ಸಿಲುಕಿಸಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. JP ಮೋರ್ಗಾನ್ ಚೇಸ್ & ಕಂ ವಿಶ್ಲೇಷಕರ ಪ್ರಕಾರ, ಯುಎಸ್ ಮತ್ತು ಯುರೋಪಿಯನ್ ದೇಶಗಳ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರಷ್ಯಾ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಬಹುದು. ಇದರ ಪರಿಣಾಮ ವಿಶ್ವಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿಪರೀತವಾಗಿ ಏರಿಕೆಯಾಗಲಿದೆ. ಭಾರತದ ಕುರಿತು ಹೇಳುವುದಾದರೆ, ಪ್ರಸ್ತುತ ಭಾರತದಲ್ಲಿ ಪೆಟ್ರೋಲ್ ಲೀಟರ್‌ಗೆ 100 ರಿಂದ 110 ರೂ. ಮತ್ತು ಡಿಸೇಲ್ ಪ್ರತಿ ಲೀಟರ್ 100 ರೂ.ಗೆ ಮಾರಾಟವಾಗುತ್ತಿದೆ. ರಷ್ಯಾ ಕಚ್ಚಾ ತೈಲ ಉತ್ಪಾದನೆ ಕಡಿಮೆ ಮಾಡಿದರೆ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 385 ರೂ. ಮತ್ತು ಡೀಸೆಲ್ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಬಹುದು. ಏಕೆಂದರೆ ಭಾರತದಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಳೆಗಳು ಕಚ್ಚಾ ತೈಲದ ಬೆಲೆ ಆಧಾರಿತವಾಗಿವೆ. 


ಇದನ್ನೂ ಓದಿ-Free Ration: ದೇಶದ ಬಡ ನಾಗರಿಕರಿಗೆ ಮೋದಿ ಸರ್ಕಾರ ನೀಡಿದ ಭರ್ಜರಿ ಉಡುಗೊರೆ ಇದು, ಈ ತಿಂಗಳವರೆಗೆ ಉಚಿತ ಪಡಿತರ ಪಡೆಯಿರಿ


ಪೆಟ್ರೋಲ್ ಬೆಲೆ ಲೀಟರ್‌ಗೆ 385 ರೂ?
ರಷ್ಯಾ ಕಚ್ಚಾ ತೈಲ ಉತ್ಪಾದನೆಯನ್ನು ದಿನಕ್ಕೆ ಮೂರು ಮಿಲಿಯನ್ ಬ್ಯಾರೆಲ್‌ಗಳಷ್ಟು ಕಡಿತಗೊಳಿಸಿದರೆ, ಲಂಡನ್ ಮಾನದಂಡದಲ್ಲಿ ಕಚ್ಚಾ ತೈಲ ಬೆಲೆ $ 190 ತಲುಪಲಿದೆ. ರಷ್ಯಾ ಕಚ್ಚಾ ತೈಲ ಉತ್ಪಾದನೆಯನ್ನು ಐದು ಮಿಲಿಯನ್ ಬ್ಯಾರೆಲ್‌ಗಳಷ್ಟು ಕಡಿತಗೊಳಿಸಿದರೆ, ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ $ 380 ತಲುಪುತ್ತದೆ. ಪ್ರತಿ ಬ್ಯಾರೆಲ್‌ಗೆ $ 380 ದರದಲ್ಲಿ, ಭಾರತದಲ್ಲಿ ಕಚ್ಚಾ ತೈಲವನ್ನು ಖರೀದಿಸುವುದರಿಂದ ಪೆಟ್ರೋಲ್ ಬೆಲೆಯನ್ನು ಮೂರು ಪಟ್ಟು ಹೆಚ್ಚಾಗಲಿದೆ. ಜಾಗತಿಕ ಮಟ್ಟದಲ್ಲಿ ಇದು ನಡೆದುಹೋದರೆ,  ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 385 ರೂ. ತಲುಪಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.