Jobs: ಅನುಭವ ಅಥವಾ ಸಿವಿ ಯಾವುದು ಬೇಕಿಲ್ಲ, 24 ಗಂಟೆಯೊಳಗೆ ನೌಕರಿಯ ಆಫರ್, ಭರ್ಜರಿ ವೇತನ ಕೂಡ ಸಿಗುತ್ತಿದೆ

Great Job Opportunity: ಕೊರೊನಾ ಮಹಾಮಾರಿಯ ಕಾರಣ ಪ್ರಕಟಗೊಂಡ ಹಲವು ವರದಿಗಳಲ್ಲಿ ವಿಶ್ವಾದ್ಯಂತ ಸುಮಾರು ಎಲ್ಲಾ ಕ್ಷೇತ್ರಗಳಲ್ಲಿ ಕೋಟ್ಯಂತರ ಜನರು ತಮ್ಮ ನೌಕರಿಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.   

Written by - Nitin Tabib | Last Updated : Jul 4, 2022, 05:20 PM IST
  • ಕರೋನಾ ಕಾಲಾವಧಿಯಲ್ಲಿ ಎಷ್ಟು ಜನರು ತಮ್ಮ ಉದ್ಯೋಗ ಕಳೆದುಕೊಂಡರು ಎಂಬುದನ್ನು ಅಂದಾಜಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಸರಿ.
  • ಸಾಂಕ್ರಾಮಿಕ ರೋಗದ ನಂತರ, ವಿಶ್ವಾದ್ಯಂತ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕೋಟ್ಯಾಂತರ
  • ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಅನೇಕ ವರದಿಗಳು ಬಹಿರಂಗಪಡಿಸಿವೆ.
Jobs: ಅನುಭವ ಅಥವಾ ಸಿವಿ ಯಾವುದು ಬೇಕಿಲ್ಲ, 24 ಗಂಟೆಯೊಳಗೆ ನೌಕರಿಯ ಆಫರ್, ಭರ್ಜರಿ ವೇತನ ಕೂಡ ಸಿಗುತ್ತಿದೆ title=
Great Job Opportunity

Great Job Opportunity: ಕರೋನಾ ಕಾಲಾವಧಿಯಲ್ಲಿ ಎಷ್ಟು ಜನರು ತಮ್ಮ ಉದ್ಯೋಗ ಕಳೆದುಕೊಂಡರು ಎಂಬುದನ್ನು ಅಂದಾಜಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಸರಿ. ಸಾಂಕ್ರಾಮಿಕ ರೋಗದ ನಂತರ, ವಿಶ್ವಾದ್ಯಂತ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕೋಟ್ಯಾಂತರ  ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಅನೇಕ ವರದಿಗಳು ಬಹಿರಂಗಪಡಿಸಿವೆ. ಕೊರೊನಾ ಸಾಂಕ್ರಾಮಿಕದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಹೆಚ್ಚು ಪ್ರಭಾವಕ್ಕೆ ಒಳಗಾಗಿದೆ. ಬಹುತೇಕ ಎಲ್ಲೆಡೆ, ಈ ಉದ್ಯಮ ಸುಮಾರು ಎರಡು ವರ್ಷಗಳ ಕಾಲ ಸಂಪೂರ್ಣವಾಗಿ ನಿಂತುಹೋಗಿತ್ತು. ಸಾಂಕ್ರಾಮಿಕ ರೋಗದಿಂದ ಪರಿಸ್ಥಿತಿ ಸುಧಾರಿಸಿದ ನಂತರವೂ, ಆರ್ಥಿಕ ಹಿಂಜರಿತ ಈ ಕ್ಷೇತ್ರವನ್ನು ಹಿಮ್ಮೆಟ್ಟಿಸಿತು. ಆದರೆ ಜನರ ಮನಸ್ಸಿನಿಂದ ಕರೋನಾ ಭಯದ ನಂತರ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತೊಮ್ಮೆ ಚೇತರಿಕೆ ಕಂದುಬರಲಾರಂಭಿಸಿದೆ. ಅಷ್ಟೇ ಅಲ್ಲ, ಇಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗುತ್ತಿವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಲಿ ಇರುವ ಜಾಗಗಳ ಕುರಿತು ಬೆಚ್ಚಿಬೀಳಿಸುವ ವರದಿಯೊಂದು ಪ್ರಕಟವಾಗಿದೆ.

ನೌಕರಿಗಳ ಮಹಾಪೂರ
ಪ್ರವಾಸ ಇಷ್ಟಪಡುವ ಜನರ ಪಟ್ಟಿಯಲ್ಲಿ ಯುರೋಪಿಯನ್ ದೇಶಗಳು ಯಾವಾಗಲೂ ಅಗ್ರಸ್ಥಾನದಲ್ಲಿರುತ್ತವೆ. ವಿಶ್ವಾದ್ಯಂತ ಲಕ್ಷಾಂತರ ಪ್ರವಾಸಿಗರು ನಿತ್ಯ ಯುರೋಪ್ ಗೆ ಭೇಟಿ ನೀಡುತ್ತಾರೆ. ಆದರೆ ಕೋವಿಡ್ ನಂತರ ಅಲ್ಲಿಗೆ ಜನರು ಭೇಟಿ ನೀಡುವುದು ಬಹುತೇಕ ನಿಂತುಹೋಗಿತ್ತು.ಇದೀಗ  ಪರಿಸ್ಥಿತಿ ಸುಧಾರಿಸಿದ ಬಳಿಕ, ಯುರೋಪಿಗೆ  ಸಾಕಷ್ಟು ಜನರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೊಟೇಲ್, ರೆಸ್ಟೊರೆಂಟ್, ಬಾರ್, ಪಬ್ ಹೀಗೆ ಎಲ್ಲೆಂದರಲ್ಲಿ ಸಿಬ್ಬಂದಿಯ ಕಿರಿ ಕಿರಿ ಇರುವುದರಿಂದ ಹೋಟೆಲ್, ರೆಸ್ಟೊರೆಂಟ್ ಗಳಲ್ಲಿ ಜನರಿಗೆ ಸೇವೆ ನೀಡುವುದೇ ದುಸ್ತರವಾಗಿದೆ.

ಅನುಭವವಿಲ್ಲದ ಉದ್ಯೋಗಿಗಳ ನೇಮಕಾತಿ
ಇದನ್ನು ಗಮನದಲ್ಲಿಟ್ಟುಕೊಂಡು, ಯುರೋಪಿಯನ್ ಹೋಟೆಲ್ ಚೈನ್ ಗಳು ಅನುಭವವಿಲ್ಲದೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ ಅಥವಾ ಅವರ ಅನುಭವವನ್ನು ನೋಡದೆಯೇ ಅವರ ಉದ್ಯೋಗಗಳನ್ನು ಬೇಷರತ್ತಾಗಿ ಅಂದರೆ ಸಿವಿ ಇಲ್ಲದೆ ಸೇರಿಸಿಕೊಳ್ಳಲಾಗುತ್ತಿದೆ. ಯುರೋಪ್‌ನ ಅತಿ ದೊಡ್ಡ ಹೊಟೇಲ್ ಉದ್ಯಮಿಯಾಗಿರುವ Accor, ಹಿಂದೆಂದೂ ಉದ್ಯಮದಲ್ಲಿ ಕೆಲಸ ಮಾಡದ ಜನರನ್ನು ನೇಮಿಸಿಕೊಳ್ಳಲು ಹೊಸ ಉಪಕ್ರಮವನ್ನು ನಡೆಸುತ್ತಿದೆ. ಕಳೆದ ತಿಂಗಳು ಕತಾರ್ ಎಕನಾಮಿಕ್ ಫೋರಮ್‌ನಲ್ಲಿ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅಕಾರ್ ಮುಖ್ಯ ಕಾರ್ಯನಿರ್ವಾಹಕ ಸೆಬಾಸ್ಟಿಯನ್ ಬಾಜಿನ್ ಈ ವಿಷಯಗಳನ್ನು ತಿಳಿಸಿದ್ದಾರೆ.

24 ಗಂಟೆಗಳಲ್ಲಿ ಕೆಲಸ ಸಿಗುತ್ತಿದೆ
110 ಕ್ಕೂ ಹೆಚ್ಚು ದೇಶಗಳಲ್ಲಿ ಮರ್ಕ್ಯೂರ್, ಐಬಿಸ್ ಮತ್ತು ಫೇರ್‌ಮಾಂಟ್‌ನಂತಹ ಬ್ರ್ಯಾಂಡ್‌ಗಳನ್ನು ನಿರ್ವಹಿಸುತ್ತಿರುವ ಅಕಾರ್‌ಗೆ ಜಾಗತಿಕವಾಗಿ 35,000 ಉದ್ಯೋಗಿಗಳ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. "ನಾವು ಹತ್ತು ದಿನಗಳ ಹಿಂದೆ ಲಿಯಾನ್ ಮತ್ತು ಬೋರ್ಡೆಕ್ಸ್‌ನಲ್ಲಿ ಇದನ್ನು ಪ್ರಯತ್ನಿಸಿದ್ದೇವೆ ಮತ್ತು ಈ ವಾರಾಂತ್ಯದಲ್ಲಿ ನಾವು ಯಾವುದೇ ರೆಸ್ಯೂಮ್‌ಗಳಿಲ್ಲದ, ಯಾವುದೇ ಪೂರ್ವ ಉದ್ಯೋಗ ಅನುಭವವಿಲ್ಲದ ಜನರನ್ನು ಸಂದರ್ಶಿಸುತ್ತಿದ್ದೇವೆ ಮತ್ತು ಅವರನ್ನು 24 ಗಂಟೆಗಳ ಒಳಗೆ ಅವರಿಗೆ ಕೆಲಸದ ಪತ್ರವನ್ನು ನೀಡುತ್ತಿದ್ದೇವೆ" ಎಂದು ಬಾಜಿನ್ ಹೇಳಿದ್ದಾರೆ.

ಉತ್ತಮ ಆಫರ್ ನೀಡಲಾಗುತ್ತಿದೆ
ಆರು ತಾಸು ತರಬೇತಿ ನೀಡಿ ನೇರವಾಗಿ ಹೊಸಬರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಬಾಜಿನ್ ಹೇಳಿದಾರೆ. ಸಿಬ್ಬಂದಿ ಕೊರತೆಯು ವಿಶೇಷವಾಗಿ ಸ್ಪೇನ್ ಮತ್ತು ಪೋರ್ಚುಗಲ್‌ನ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಮಹಾಮಾರಿಗೂ ಮೊದಲು ಪ್ರವಾಸೋದ್ಯಮವು ಕ್ರಮವಾಗಿ ಆರ್ಥಿಕ ಉತ್ಪಾದನೆಯ ಶೇ. 13 ಮತ್ತು ಶೇ.15 ರಷ್ಟಿತ್ತು. ಆದರೆ, ಇದೀಗ ಹೋಟೆಲ್ ಮಾಲೀಕರು ಹೆಚ್ಚಿನ ವೇತನ, ಉಚಿತ ವಸತಿ ಮತ್ತು ಬೋನಸ್ ಮತ್ತು ಆರೋಗ್ಯ ವಿಮೆಯಂತಹ ಸವಲತ್ತುಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ-Crocodile Video: ಮೊಸಳೆ ಬಾಯಿಯಿಂದ ತನ್ನ ಸ್ನೇಹಿತನನ್ನು ಹೊರತೆಗೆದ ವ್ಯಕ್ತಿ! ವಿಡಿಯೋ ನೋಡಿ

ಹೋಟೆಲ್ ವಲಯದಲ್ಲಿ ಉದ್ಯೋಗಿಗಳ ಕೊರತೆ
ರಾಷ್ಟ್ರೀಯ ಆತಿಥ್ಯ ಸಂಘಗಳ ಪ್ರಕಾರ, ಸ್ಪೇನ್‌ನ ಅಡುಗೆ ಉದ್ಯಮವು 200,000 ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ ಮತ್ತು ಪೋರ್ಚುಗೀಸ್ ಹೋಟೆಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕನಿಷ್ಠ 15,000 ಜನರ ಅಗತ್ಯವಿದೆ. ಸ್ಪೇನ್‌ನಲ್ಲಿ, ಅಧಿಕೃತ ಅಂಕಿಅಂಶಗಳ ಪ್ರಕಾರ, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮೊದಲ ತ್ರೈಮಾಸಿಕದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಉದ್ಯೋಗಿಗಳ ವೇತನವನ್ನು ಸುಮಾರು ಶೇ 60% ರಷ್ಟು ಹೆಚ್ಚಿಸಿವೆ. ಆದರೆ ಪ್ರವಾಸೋದ್ಯಮವು ಏಕಮಾತ್ರ ಕ್ಷೇತ್ರವಾಗಿದ್ದು, ಅದು  ಉದ್ಯೋಗಿಗಳಿಗೆ ತಿಂಗಳಿಗೆ ಕನಿಷ್ಠ 1,150 ಯುರೋಗಳಷ್ಟು ($1,200) (ರೂ. 94,884) ಪಾವತಿಸುವ ಕ್ಷೇತ್ರವಾಗಿದೆ.

ಇದನ್ನೂ ಓದಿ-High Security For Mango Trees: ಎರಡು ಮಾವಿನ ಮರಗಳ ರಕ್ಷಣೆಗೆ 3 ಸೆಕ್ಯೂರಿಟಿ ಗಾರ್ಡ್ ಹಾಗೂ 6 ನಾಯಿಗಳ ನಿಯೋಜನೆ, ಕಾರಣ ರೋಚಕವಾಗಿದೆ

ಉತ್ತಮ ವೇತನವೂ ಕೂಡ ಸಿಗುತ್ತಿದೆ
ಸೆಂಟ್ರಲ್ ಬ್ಯಾಂಕ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಟಿಸ್ಟಿಕ್ಸ್‌ನ ಸಮೀಕ್ಷೆಯ ಪ್ರಕಾರ, ಪೋರ್ಚುಗಲ್‌ನಲ್ಲಿ ಈ ವಲಯದ ಉದ್ಯೋಗಿಗಳ ವೇತನವು ಈ ವರ್ಷ ಶೇ.7 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ಆದರೆ ಈ ವಲಯದ ಸರಾಸರಿ ವೇತನವು ತಿಂಗಳಿಗೆ 881 ಯುರೋಗಳಾಗಿದ್ದರೆ (ರೂ. 72,698), ಕನಿಷ್ಠ ವೇತನ 705 ಯುರೋಗಳಾಗಿದೆ (ರೂ. 58,175).

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News