Petrol Price 12 February 2021 Update:ಹೆಚ್ಚುತ್ತಿರುವ ಪೆಟ್ರೋಲ್ ಡೀಸೆಲ್ (Petrol-diesel) ಹಣದುಬ್ಬರವನ್ನು ಸರ್ಕಾರ ನಿಭಾಯಿಸುತ್ತಿಲ್ಲ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಾಗುತ್ತಿರುವುದೇ ತೈಲ ಬೆಲೆ ಹೆಚ್ಚಳಕ್ಕೆ ಕಾರಣ  ಎಂದು ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೆ ಈ ವಾದವು ಸಾಮಾನ್ಯ ಜನರ ಜೇಬನ ಹೊರೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಇಂದು, ಸತತ ನಾಲ್ಕನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ. ದೆಹಲಿಯಲ್ಲಿ ಪೆಟ್ರೋಲ್ 88 ರೂಪಾಯಿಗಳ ಗಡಿ ದಾಟಿದೆ.


COMMERCIAL BREAK
SCROLL TO CONTINUE READING

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಏರಿಕೆಯಾಗಲಿದೆಯೇ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು (Crude Oil) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿಯೂ ಪೆಟ್ರೋಲ್ (Petrol) ಮತ್ತು ಡೀಸೆಲ್ ಬೆಲೆಗಳು ಗಗನಕ್ಕೆರುತ್ತಿವೆ. ಬ್ರೆಂಟ್ ಕಚ್ಚಾ ನಿನ್ನೆ ರಿಂದ $ 60 ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ನಿನ್ನೆ ಅದು $ 61 ಮಟ್ಟವನ್ನು ದಾಟಿದೆ. ಇದು ಜನವರಿ 2020 ರ ನಂತರದ ವರ್ಷದ ಅತ್ಯುನ್ನತ ಮಟ್ಟವಾಗಿದೆ. ಕಚ್ಚಾ ತೈಲ ಮತ್ತಷ್ಟು ಹೆಚ್ಚಾಗಬಹುದು ಎಂದು ಮಾರುಕಟ್ಟೆಯ ತಜ್ಞರು ಊಹಿಸಿದ್ದಾರೆ. ಇದು ಸಂಭವಿಸಿದಲ್ಲಿ, ಭವಿಷ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಹೆಚ್ಚಾಗಬಹುದು ಎಂಬ ಆತಂಕವೂ ಇದೆ.


ಇದನ್ನೂ ಓದಿ - ಈ ನಗರದಲ್ಲಿ ಇನ್ನುಮುಂದೆ ಹೆಲ್ಮೆಟ್ ಇಲ್ಲದೆ ಸಿಗಲ್ಲ ಪೆಟ್ರೋಲ್


4 ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆ
ನಗರ ನಿನ್ನೆ ದರ ಇಂದಿನ ದರ
ದೆಹಲಿ 87.85 88.14
ಮುಂಬೈ 94.36 94.64
ಕೋಲ್ಕತಾ 89.16 89.44
ಚೆನ್ನೈ 90.18 90.44

ಇದನ್ನೂ ಓದಿ - ಭಾರತದ ಈ ಪ್ರಾಂತ್ಯದಲ್ಲಿ Petrol-Diesel ಇಲ್ಲದೆಯೇ ವಾಹನಗಳು ಓಡಾಡುತ್ತವಂತೆ... ಕಾರಣ ಇಲ್ಲಿದೆ


4 ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ
ನಗರ ನಿನ್ನೆ ದರ ಇಂದಿನ ದರ
ದೆಹಲಿ 78.03 78.38
ಮುಂಬೈ 84.94 85.32
ಕೋಲ್ಕತಾ 81.61 81.96
ಚೆನ್ನೈ 83.18 83.52


ನಿಮ್ಮ ನಗರದಲ್ಲಿನ ಪೆಟ್ರೋಲ್ ಡೀಸೆಲ್ ಬೆಲೆಯನ್ನು ನೀವು ಈ ರೀತಿ ಪರಿಶೀಲಿಸಬಹುದು :
ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ (Diesel) ಬೆಲೆಯನ್ನೂ ನೀವು ತಿಳಿದುಕೊಳ್ಳಬಹುದು. ಇಂಡಿಯನ್ ಆಯಿಲ್ ಐಒಸಿ (IOC) ನಿಮ್ಮ ಮೊಬೈಲ್‌ನಲ್ಲಿ ಆರ್‌ಎಸ್‌ಪಿ ಮತ್ತು ನಿಮ್ಮ ಸಿಟಿ ಕೋಡ್ ಬರೆದು ಅದನ್ನು 9224992249 ಸಂಖ್ಯೆಗೆ ಕಳುಹಿಸುವ ಸೌಲಭ್ಯವನ್ನು ನೀಡುತ್ತದೆ. ಈ ರೀತಿ ಸಂದೇಶ ಕಳುಹಿಸಿದ ತಕ್ಷಣವೇ ನಿಮ್ಮ ನಗರ ಪೆಟ್ರೋಲ್ ಮತ್ತು ಡೀಸೆಲ್ ದರಗಳು ನಿಮ್ಮ ಮೊಬೈಲ್‌ನಲ್ಲಿ ಬರುತ್ತವೆ. ಪ್ರತಿ ನಗರ ಕೋಡ್ ವಿಭಿನ್ನವಾಗಿದೆ, ಅದನ್ನು ಐಒಸಿ ತನ್ನ ವೆಬ್‌ಸೈಟ್‌ನಲ್ಲಿ ನಿಮಗೆ ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.