Mysterious Places In India:ಪ್ರಪಂಚದಲ್ಲಿ ಇಂತಹ ಹಲವಾರು ಸಂಗತಿಗಳಿದ್ದು, ಈ ಸಂಗತಿಗಳ ಮೇಲೆ ಕಿವಿ ಮತ್ತು ಕಣ್ಣುಗಳು ನಂಬುವುದೇ ಇಲ್ಲ. ಈ ಸಂಗತಿಗಳು ತನ್ನ ಒಡಲಲ್ಲಿ ಹಲವಾರು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿವೆ. ಹಾಗಾದರೆ ಬನ್ನಿ ಇಂತಹುದೇ ಒಂದು ರಹಸ್ಯದಿಂದ ಕೂಡಿದ ಸ್ಥಳವೊಂದರ ಬಗ್ಗೆ ಮಾಹಿತಿ ಪಡೆಯೋಣ.
ಇದನ್ನು ಓದಿ- North Korea Rules: ಈ ದೇಶದಲ್ಲಿ ಅಳುವುದು ಕಡ್ಡಾಯ, ಇಲ್ಲದಿದ್ದರೆ ಸಿಗುತ್ತೆ ಮರಣದಂಡನೆ ಶಿಕ್ಷೆ
ಮ್ಯಾಗ್ನೆಟಿಕ್ ಹಿಲ್ Magnetic Hill
ಭಾರತದಲ್ಲಿ ಪರ್ವತ ಪ್ರದೇಶವೊಂದಿದ್ದು, ಅಲ್ಲಿ ವಾಹನಗಳು ಪೆಟ್ರೋಲ್-ಡೀಸೆಲ್ ಇಲ್ಲದೆ ಚಲಿಸುತ್ತವೆ. ಈ ಬೆಟ್ಟವು ಲಡಾಖ್‌ನ ಲೇಹ್ (Leh of Ladakh) ಪ್ರದೇಶದಲ್ಲಿದೆ. ಇಲ್ಲಿನ ರಸ್ತೆಗಳಲ್ಲಿ ವಾಹನಗಳು ತನ್ನಷ್ಟಕ್ಕೆ ತಾನೇ ಚಲಿಸುತ್ತವೆ. ಅಷ್ಟೇ ಅಲ್ಲ, ಈ ಪ್ರದೇಶದಲ್ಲಿ ಯಾರಾದರೂ ತಮ್ಮ ಕಾರನ್ನು ಇರಿಸಿದರೆ ಅವರಿಗೆ ಆ ಕಾರು ಎಂದಿಗೂ ಸಿಗುವುದಿಲ್ಲವಂತೆ. ಇದೆಲ್ಲ ಹೇಗೆ ನಡೆಯುತ್ತದೆ ಎಂಬ ರಹಸ್ಯ ಇನ್ನೂ ತಿಳಿದುಬಂದಿಲ್ಲ.
ವಿಜ್ಞಾನಿಗಳ ಹೇಳುವ ಪ್ರಕಾರ, ಈ ಪರ್ವತ ಪ್ರದೇಶವು ಆಯಸ್ಕಾಂತೀಯ ಶಕ್ತಿಯನ್ನು ಹೊಂದಿದೆ, ಇದು ವಾಹನಗಳನ್ನು ಗಂಟೆಗೆ ಸುಮಾರು 20 ಕಿಲೋಮೀಟರ್ ವೇಗದಲ್ಲಿ ಎಳೆಯುತ್ತದೆ.
ಇದನ್ನು ಓದಿ- Jupiter ಹಾಗೂ Saturn ಗ್ರಹಗಳ ಅಪರೂಪದ ಮಿಲನ, 400 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ದೃಶ್ಯ
ವಿಮಾನಗಳಲ್ಲಿಯೂ ಕೂಡ ಈ ಆಯಸ್ಕಾಂತಿಯ ಶಕ್ತಿಯ ಪ್ರಭಾವ
ಈ ಪರ್ವತ ಪ್ರದೇಶದಲ್ಲಿರುವ ಆಯಸ್ಕಾಂತೀಯ ಶಕ್ತಿಯ ಪ್ರಭಾವ ಎಷ್ತೊಂದು ಪ್ರಬಲವಾಗಿದೆ ಎಂದರೆ ಈ ಪ್ರದೇಶದ ಮೇಲೆ ಹಾರಾಡುವ ವಿಮಾನಗಳೂ ಕೂಡ ಇದಕ್ಕೆ ಹೊರತಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಹಲವು ಪೈಲಟ್ ಗಳು ಕೂಡ ಈ ಪ್ರದೇಶದ ಮೇಲಿಂದ ವಿಮಾನ ಹಾರಾಟದ ಸಮಯದಲ್ಲಿಯೂ ಕೂಡ ಈ ಆಯಸ್ಕಾಂತಿಯ ಶಕ್ತಿಯ ಅನುಭವವಾಗಿದೆ ಎನ್ನುತ್ತಾರೆ. ಈ ಆಯಸ್ಕಾಂತೀಯ ಸೆಳೆತದಿಂದ ಪಾರಾಗಲು ವಿಮಾನ ವೇಗವಾಗಿ ಚಲಿಸಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.
ಇದನ್ನು ಓದಿ- ಕೇವಲ 18 ನಿಮಿಷಗಳಲ್ಲಿ ಚಾರ್ಜ್ ಆಗುವ ಈ ಎಲೆಕ್ಟ್ರಿಕ್ ಕಾರುಗಳು 500ಕಿ.ಮೀ.ವರೆಗೆ ಚಲಿಸಬಲ್ಲವು
ಗ್ರ್ಯಾವಿಟಿ ಹಿಲ್ Gravity Hill
ಈ ಮ್ಯಾಗ್ನೆಟಿಕ್ ಹಿಲ್ ಅನ್ನು ಗ್ರ್ಯಾವಿಟಿ ಹಿಲ್ ಎಂದೂ ಕೂಡ ಕರಯಲಾಗುತ್ತದೆ. ಈ ಪರ್ವತ ಪ್ರದೇಶದಲ್ಲಿ ಗುರುತ್ವಾಕರ್ಶನದ ನಿಯಮಗಳೂ ಕೂಡ ಫೇಲ್ ಆಗುತ್ತವಂತೆ. ಗುರುತ್ವಾಕರ್ಷಣ ನಿಯಮದ ಪ್ರಕಾರ ಯಾವುದೇ ಒಂದು ವಸ್ತುವನ್ನು ಇಳಿಜಾರು ಪ್ರದೇಶದಲ್ಲಿ ಇರಿಸಿದರೆ. ಅದು ಕೇಳಬಾಗಕ್ಕೆ ಉರುಳುತ್ತದೆ. ಆದರೆ, ಈ ಪರ್ವತ ಪ್ರದೇಶದಲ್ಲಿ ಇದರ ತದ್ವಿರುದ್ಧ ನಡೆಯುತ್ತದೆ ಎನ್ನಲಾಗಿದೆ.