ನವದೆಹಲಿ: ಕೇಂದ್ರ ಸರ್ಕಾರವು ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಸುಮಾರು 3 ವಾರಗಳ ನಂತರ ಛತ್ತೀಸ್‌ಗಢ ಸರ್ಕಾರವು ನ.22 ರಂದು ಪೆಟ್ರೋಲ್ ಮತ್ತು ಡೀಸೆಲ್(Petrol-Diesel Prices) ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕ್ರಮವಾಗಿ ಶೇ.1 ಮತ್ತು ಶೇ.2ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 70 ಪೈಸೆ ಹಾಗೂ ಡೀಸೆಲ್ ಬೆಲೆ 1.36 ರೂ. ಇಳಿಕೆಯಾಗಲಿದೆ.


COMMERCIAL BREAK
SCROLL TO CONTINUE READING

ದೇಶಗಳು ತೈಲಬೆಲೆ(Fuel prices)ಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದ್ದರಿಂದ ಜನಸಾಮಾನ್ಯರು ಹೈರಾಣಾಗಿದ್ದರು. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯು ದೊಡ್ಡ ಹೊರೆಯಾಣಿ ಪರಿಣಮಿಸಿತ್ತು. ಹೀಗಾಗಿ ಕೇಂದ್ರ ಸರ್ಕಾರವು ಎರಡು ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ದೀಪಾವಳಿ ಹಬ್ಬದ ಮುನ್ನಾದಿನದಂದು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ.ಕಡಿತಗೊಳಿಸಿತ್ತು. ಇದರಿಂದ ಜನರು ಕೊಂಚ ನಿರಾಳರಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಸತತ 20ನೇ ದಿನವೂ ಪೆಟ್ರೋಲ್-ಮತ್ತು ಡೀಸೆಲ್ ದರವನ್ನು ಪರಿಷ್ಕರಿಸಿಲ್ಲ. ಹೀಗಾಗಿ ದೇಶದಾದ್ಯಂತ ಇಂಧನ ದರಗಳಲ್ಲಿ ಮಂಗಳವಾರ ಯಾವುದೇ ಬದಲಾವಣೆಯಾಗಿಲ್ಲ.


ಇದನ್ನೂ ಓದಿ: Share Market Update: ಷೇರು ಮಾರುಕಟ್ಟೆ ಧಡಂ, ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ(Petrol price) 103.97 ರೂ. ಇದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 86.67 ರೂ.ನಷ್ಟಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 109.98 ರೂ. ಇದ್ದರೆ, ಡೀಸೆಲ್ 94.14 ರೂ. ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 100.58 ರೂ. ಇದ್ದರೆ, ಡೀಸೆಲ್ ಬೆಲೆ 85.01 ರೂ. ಇದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 104.67 ರೂ. ಇದ್ದರೆ, ಡೀಸೆಲ್ ಬೆಲೆ(Diesel Price) 89.79 ರೂ. ಇದೆ. ತಮಿಳುನಾಡಿನ ಚೆನ್ನೈನಲ್ಲಿ ಪೆಟ್ರೋಲ್ ದರ 1 ಲೀಟರ್‌ಗೆ 101.40 ರೂ.ಇದ್ದರೆ, ಡೀಸೆಲ್ 91.43 ರೂ. ಇದೆ. ಹೈದರಾಬಾದ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 108.20 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 94.62 ರೂ. ಇದೆ. ಭೋಪಾಲ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.23 ರೂ. ಇದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 90.87 ರೂ. ಇದೆ.


ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಗ್ರಾಹಕರಿಗೆ ಪರಿಹಾರ ನೀಡಲು ಪೆಟ್ರೋಲ್ ಮತ್ತು ಡೀಸೆಲ್(Diesel Price) ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿಮೆ ಮಾಡಲು ರಾಜ್ಯಗಳನ್ನು ಒತ್ತಾಯಿಸಿದೆ. ಎಎಪಿ ಆಡಳಿತವಿರುವ ದೆಹಲಿ, ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳ, ಎಡಪಕ್ಷಗಳ ಆಡಳಿತವಿರುವ ಕೇರಳ, ಟಿಆರ್‌ಎಸ್ ನೇತೃತ್ವದ ತೆಲಂಗಾಣ ಮತ್ತು ವೈಎಸ್‌ಆರ್ ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶ ಕೂಡ ವ್ಯಾಟ್ ಅನ್ನು ಕಡಿತಗೊಳಿಸಿಲ್ಲ.  


ತೈಲ ಕಂಪನಿಗಳು ಅಳವಡಿಸಿಕೊಂಡ ಬೆಲೆ ಸೂತ್ರದ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್( BPCL ), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ( HPCL)ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಪ್ರಸ್ತುತ ದೇಶದ 4 ಮೆಟ್ರೋ ನಗರಗಳಲ್ಲಿ ಇಂಧನ ದರ ಅತ್ಯಧಿಕವಾಗಿದೆ.


ಇದನ್ನೂ ಓದಿ: RBI Alert! ಬ್ಯಾಂಕ್ ಗ್ರಾಹಕರಿಗೆ RBI ನೀಡಿದೆ ಈ ಎಚ್ಚರಿಕೆ! ಹೂಡಿಕೆಗೆ ಮುನ್ನ ಸುದ್ದಿ ಓದಲು ಮರೆಯಬೇಡಿ


ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel Price)ಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಸಂಜೆ 6 ರಿಂದ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಅಬಕಾರಿ ತೆರಿಗೆ, ಡೀಲರ್ ಕಮಿಷನ್ ಮತ್ತು ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ. ವಿದೇಶಿ ವಿನಿಮಯ ದರಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.


ಈ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol Diesel Price)ಯನ್ನು ಪರಿಶೀಲಿಸಿ ನೀವು ಪೆಟ್ರೋಲ್ ಡೀಸೆಲ್ ಬೆಲೆಯನ್ನು SMS ಮೂಲಕ ತಿಳಿದುಕೊಳ್ಳಬಹುದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಸಂಜೆ 6 ಗಂಟೆಗೆ ನವೀಕರಿಸಲಾಗುತ್ತದೆ. ಇಂಡಿಯನ್ ಆಯಿಲ್ ಗ್ರಾಹಕರ ಬೆಲೆಯನ್ನು ತಿಳಿಯಲು, ನೀವು ನಿಮ್ಮ ನಗರ ಕೋಡ್ ಅನ್ನು RSP ಯೊಂದಿಗೆ ಟೈಪ್ ಮಾಡಬೇಕು ಮತ್ತು 9224992249 ಗೆ SMS ಕಳುಹಿಸಬೇಕು. ಪ್ರತಿ ನಗರ ಕೋಡ್ ವಿಭಿನ್ನವಾಗಿರುತ್ತದೆ. ಈ ವಿವರಗಳನ್ನು ಐಒಸಿಎಲ್ ವೆಬ್‌ಸೈಟ್‌ನಲ್ಲಿ ಕಾಣಬಹುದು. ಬಿಪಿಸಿಎಲ್ ಗ್ರಾಹಕರು ಆರ್‌ಎಸ್‌ಪಿ 9223112222 ಮತ್ತು ಎಚ್‌ಪಿಸಿಎಲ್ ಗ್ರಾಹಕ ಎಚ್‌ಪಿ ಬೆಲೆ 9222201122 ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ತಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಂಡುಹಿಡಿಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.