ಬೆಂಗಳೂರು: ಸರ್ಕಾರ ಮತ್ತೆ ಜನರಿಗೆ ಬೆಲೆಯೇರಿಕೆ ಶಾಕ್ ನೀಡಿದೆ. ಪೆಟ್ರೋಲಿಯಂ ಕಂಪನಿಗಳು ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ.  ಮಂಗಳವಾರ ಮಧ್ಯರಾತ್ರಿಯಿಂದಲೇ ಈ ಹೊಸ ದರ ಜಾರಿಯಾಗಲಿದೆ. 


COMMERCIAL BREAK
SCROLL TO CONTINUE READING

ಸತತ ಎರಡನೇ ದಿನವೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ (Petrol Diesel Price Hike) ಕಂಡಿದೆ. ಮಂಗಳವಾರ ಡೀಸೆಲ್ 0.79 ಪೈಸೆ, ಪೆಟ್ರೋಲ್ 0.84 ಪೈಸೆ ಹೆಚ್ಚಳ ಆಗಿದ್ರೆ, ಬುಧವಾರ ಮತ್ತೆ ಪೆಟ್ರೋಲ್ ಬೆಲೆ 84 ಪೈಸೆ, ಡೀಸೆಲ್ ಬೆಲೆ 79 ಪೈಸೆ ಮತ್ತೆ ಏರಿಕೆಯಾಗಿದೆ. ಒಟ್ಟಿನಲ್ಲಿ ಎರಡು ದಿನದಲ್ಲಿ ಪೆಟ್ರೋಲ್ ಬೆಲೆ 1.68, ಡೀಸೆಲ್ ಬೆಲೆ 1.58 ಕ್ಕೆ ಏರಿಕೆಯಾದಂತಾಗಿದೆ. 


ಇದನ್ನೂ ಓದಿ- LPG Cylinder Price Hike: ಪೆಟ್ರೋಲ್-ಡೀಸೆಲ್ ನಂತರ ಎಲ್‌ಪಿಜಿ ಬೆಲೆಯಲ್ಲಿ ಭಾರೀ ಏರಿಕೆ!


ಬುಧವಾರದಿಂದ ಪೆಟ್ರೋಲ್ ದರ (Petrol Price) 102.26, ಡೀಸೆಲ್ 86.59 ರೂಪಾಯಿ, ಹಾಗೂ ಸ್ಪೀಡ್ ಪೆಟ್ರೋಲ್ ಹೊಸ ದರ 106.67, ಗ್ರೀನ್ ಡೀಸೆಲ್ ದರ 90.08 ರೂ. ಇರಲಿದೆ. 


ಇದನ್ನೂ ಓದಿ- Affordable Bikes: ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವ 4 ಬೈಕ್‌ಗಳಿವು


ನಿರಂತರವಾಗಿ ಏರಿಕೆಯಾಗ್ತಿರುವ ಇಂಧನ ಬೆಲೆ ಶತಕದ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಅಗತ್ಯವಸ್ತುಗಳ ಬೆಲೆಯೂ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.