ನಿಮಗೂ ಪೆಟ್ರೋಲ್ ವಾಸನೆ ತೆಗೆದುಕೊಳ್ಳುವ ಚಟವಿದೆಯೇ? ತುಂಬಾ ಅಪಾಯಕಾರಿ ಈ ಅಭ್ಯಾಸ!

Sniffing Petrol: ಸಾಮಾನ್ಯವಾಗಿ ಅನೇಕ ಜನರು ಪೆಟ್ರೋಲ್ ವಾಸನೆಯನ್ನು ಇಷ್ಟಪಡುತ್ತಾರೆ. ಆದರೆ ಇದು ಸ್ನಿಫಿಂಗ್ ಪೆಟ್ರೋಲ್ ಅಥವಾ ಸ್ನಿಫಿಂಗ್ ಗ್ಯಾಸೋಲಿನ್ ಎಂದು ಕರೆಯಲ್ಪಡುವ ಕೆಟ್ಟ ಚಟವಾಗಿದೆ.

Written by - Chetana Devarmani | Last Updated : Feb 23, 2022, 01:11 PM IST
  • ಪೆಟ್ರೋಲ್ ವಾಸನೆ ತೆಗೆದುಕೊಳ್ಳುವುದನ್ನು ತಪ್ಪಿಸಿ
  • ಈ ಚಟ ತುಂಬಾ ಕೆಟ್ಟದು
  • ಈ ಅಭ್ಯಾಸವನ್ನು ತೊಡೆದುಹಾಕುವುದು ಹೇಗೆ?
ನಿಮಗೂ ಪೆಟ್ರೋಲ್ ವಾಸನೆ ತೆಗೆದುಕೊಳ್ಳುವ ಚಟವಿದೆಯೇ? ತುಂಬಾ ಅಪಾಯಕಾರಿ ಈ ಅಭ್ಯಾಸ!  title=
ಪೆಟ್ರೋಲ್ ವಾಸನೆ

ನವದೆಹಲಿ: ಸಾಮಾನ್ಯವಾಗಿ ಅನೇಕ ಜನರು ಪೆಟ್ರೋಲ್ (Petrol) ವಾಸನೆಯನ್ನು ಇಷ್ಟಪಡುತ್ತಾರೆ. ಆದರೆ ಇದು ಸ್ನಿಫಿಂಗ್ (Sniffing) ಪೆಟ್ರೋಲ್ ಅಥವಾ ಸ್ನಿಫಿಂಗ್ ಗ್ಯಾಸೋಲಿನ್ ಎಂದು ಕರೆಯಲ್ಪಡುವ ಕೆಟ್ಟ ಚಟವಾಗಿದೆ. 

ಪೆಟ್ರೋಲ್ ವಾಸನೆಯು (Petrol Smell) ನಮ್ಮ ಕೇಂದ್ರ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಆರೋಗ್ಯಕ್ಕೆ ಹಾನಿಕಾರಕವಾದ ಅಮಲು ತರುತ್ತದೆ. ಪೆಟ್ರೋಲ್ ವಾಸನೆಯ (Sniffing Petrol) ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ.

ಇದನ್ನೂ ಓದಿ: Desi Ghee Uses: ಕೂದಲ ಆರೈಕೆಗಾಗಿ ತುಪ್ಪವನ್ನು ಈ ರೀತಿ ಬಳಸಿ

ಪೆಟ್ರೋಲ್ ವಾಸನೆಯು ನಮ್ಮ ಮೆದುಳಿನ (Brain) ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ಇದರಲ್ಲಿರುವ ಸೀಸವು ಅನೇಕ ರೋಗಗಳಿಗೆ ಮೂಲವಾಗಿದೆ, ಇದು ಸಾವಿಗೆ ಕಾರಣವಾಗಬಹುದು, ಯುವ ಪೀಳಿಗೆಯಲ್ಲಿ ಈ ಚಟ ಹರಡುವುದು ಆತಂಕದ ವಿಷಯವಾಗಿದೆ.

ಪೆಟ್ರೋಲ್ ಸ್ನಿಫಿಂಗ್ ಚಟದ ಅನಾನುಕೂಲಗಳು:

- ಉಸಿರಾಟದ ತೊಂದರೆ
- ಗಂಟಲು ನೋವು ಅಥವಾ ಉರಿಯುವಿಕೆ
- ಮಲದಲ್ಲಿ ರಕ್ತ
- ಕಿರಿಕಿರಿ
- ಮೂಡ್ ಸ್ವಿಂಗ್
- ಕಡಿಮೆ ಹಸಿವು
- ನಿದ್ರೆಯ ಕೊರತೆ
- ಖಿನ್ನತೆ
- ಮೂರ್ಛೆ
- ತೀವ್ರ ತಲೆನೋವು
- ಅತಿಯಾದ ಆಯಾಸ
- ದೇಹದ ದೌರ್ಬಲ್ಯ
- ಅನ್ನನಾಳದಲ್ಲಿ ಕಿರಿಕಿರಿ
- ಹೊಟ್ಟೆ ನೋವು
- ದೃಷ್ಟಿ ನಷ್ಟ

ಪೆಟ್ರೋಲ್ ವಾಸನೆಯ ಚಟದಿಂದ ಹೊರಬರುವುದು ಹೇಗೆ?

- ಪೆಟ್ರೋಲ್ ಪಂಪ್‌ನಲ್ಲಿ ಎಣ್ಣೆ ತುಂಬುವಾಗ ಮಾಸ್ಕ್ ಬಳಸಿ 

- ಉದ್ವೇಗವನ್ನು ಹೋಗಲಾಡಿಸಲು, ಪೆಟ್ರೋಲ್ ಅನ್ನು ಸ್ನಿಫ್ ಮಾಡುವ ಅಭ್ಯಾಸವನ್ನು ಮಾಡಬೇಡಿ 

- ಈ ಸಮಸ್ಯೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ 

- ಒಬ್ಬ ವ್ಯಕ್ತಿಯು ಈ ಚಟವನ್ನು ತೊಡೆದುಹಾಕದಿದ್ದರೆ, ಅವನನ್ನು ಪುನರ್ವಸತಿಗೆ ಕಳುಹಿಸಿ 

ಇದನ್ನೂ ಓದಿ: ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಜಿರಳೆ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು

ವಾಸನೆ ಮುಕ್ತ ಪೆಟ್ರೋಲ್ ಆಯ್ಕೆ: ಈ ಕಾರಣಕ್ಕಾಗಿಯೇ ಅತ್ಯಂತ ಕಡಿಮೆ ಸೀಸದ ಅಂಶವನ್ನು ಹೊಂದಿದ ಓಪಲ್ (Opal) ಅನ್ನು ಕಂಡುಹಿಡಿಯಲಾಯಿತು. ಆರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳನ್ನು ಸಹ ಕಡಿಮೆ ಬಳಸಲಾಗುತ್ತದೆ. ಇದರ ಬಳಕೆಯನ್ನು ಉತ್ತೇಜಿಸುವುದರಿಂದ ಪೆಟ್ರೋಲ್ ವಾಸನೆಯ ಅಭ್ಯಾಸವನ್ನು ಕಡಿಮೆ ಮಾಡಬಹುದು. ಆದರೆ ಓಪಲ್ ತುಂಬಾ ದುಬಾರಿಯಾಗಿದೆ, ಭಾರತದಂತಹ ದೇಶಗಳಲ್ಲಿ ಅದನ್ನು ಪ್ರಚಾರ ಮಾಡುವುದು ಕಷ್ಟ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News