ನವದೆಹಲಿ : ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಮತ್ತೆ ದೇಶಾದ್ಯಂತ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ.


COMMERCIAL BREAK
SCROLL TO CONTINUE READING

ಎರಡು ತಿಂಗಳಲ್ಲಿ 34 ಭಾರೀ ಪೆಟ್ರೋಲ್ ದರ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 99.22 ರೂ.ಗೆ ಇದೆ, ಮತ್ತೆ  ಡೀಸೆಲ್ ಬೆಲೆ(Diesel Prices) ಪ್ರತಿ ಲೀಟರ್‌ಗೆ 89.23 ರೂ.ಗೆ ತಲುಪಿದೆ ಎಂದು ಭಾರತ್ ಪೆಟ್ರೋಲಿಯಂ ತಿಳಿಸಿದೆ.


ಇದನ್ನೂ ಓದಿ : EPFO Interest Calculation- ನಿಮ್ಮ ಪಿಎಫ್‌ನ ಬಡ್ಡಿಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂದು ತಿಳಿದಿದೆಯೇ?


ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ(Petrol Prices) 100 ರೂ. ದಾಟಿದೆ. ರಾಜ್ಯ ಮಾತ್ರವಲ್ಲದೆ ರಾಜಸ್ಥಾನ, ಹೈದರಾಬಾದ್ ನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 102 ರೂ. ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 105 ರೂ. ಆಗಿದೆ. ಜೈಪುರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106 ರೂ. ಆಗುವ ಮೂಲಕ ಹೊಸ ದಾಖಲೆ ಬರೆದಿದೆ. ಬೆಂಗಳೂರಿನಲ್ಲೂ 1 ಲೀಟರ್ ಪೆಟ್ರೋಲ್ 102 ರೂ. ಆಗಿದೆ. ಇಂದು ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದೆ.


ಇದನ್ನೂ ಓದಿ : SEBI Clarification: ಹೂಡಿಕೆ ಸಲಹೆಗಾರರು ಹೂಡಿಕೆದಾರರಿಗೆ ಕೇವಲ ಸಲಹೆ ಮಾತ್ರ ನೀಡಬೇಕು, ಅವರ ಹಣವನ್ನು ನಿಯಂತ್ರಿಸಬಾರದು


ದೇಶದ ವಿವಿಧ ನಗರಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ :


ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 99.16 ರೂ. 


ಕೊಲ್ಕತ್ತಾದಲ್ಲಿ 99.04 ರೂ.


ಮುಂಬೈನಲ್ಲಿ 105.24 ರೂ. 


ಚೆನ್ನೈನಲ್ಲಿ 100.13 ರೂ.


ಇದನ್ನೂ ಓದಿ : Instant e-PAN : ಹೊಸ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ Pan ಕಾರ್ಡ್ ಗೆ ಅರ್ಜಿ ಸಲ್ಲಿಸುವಿರಾ? ಹಾಗಿದ್ರೆ ಇಲ್ಲಿದೆ ಓದಿ


ಬೆಂಗಳೂರಿನಲ್ಲಿ 102.48 ರೂ.


ಭುವನೇಶ್ವರದಲ್ಲಿ 99.77 ರೂ.


ಹೈದರಾಬಾದ್ ನಲ್ಲಿ 103.05 ರೂ.


ಜೈಪುರದಲ್ಲಿ 106.18 ರೂ.


ಇದನ್ನೂ ಓದಿ : Big Announcement: ಮೊಬೈಲ್, ಬ್ರಾಡ್ಬ್ಯಾಂಡ್ ಹಾಗೂ DTH ಸೇವೆಗಳಿಗೆ ಒಂದೇ ಯೋಜನೆ, Airtelನಿಂದ ಮಹತ್ವದ ಘೋಷಣೆ


ಲಕ್ನೋದಲ್ಲಿ 96.31 ರೂ.


ಪಾಟ್ನಾದಲ್ಲಿ 101.49 ರೂ. 


ತಿರುವನಂತಪುರದಲ್ಲಿ 100.87 ರೂ.


ಇದನ್ನೂ ಓದಿ : Modi Government Big Decision: MSME ಅಡಿ ಚಿಲ್ಲರೆ ಮತ್ತು ಸಗಟು ವ್ಯಾಪಾರ, ಮೋದಿ ಸರ್ಕಾರದ ಮಹತ್ವದ ನಿರ್ಧಾರ


ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆ(Fuel Price)ಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜಸ್ಥಾನ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದ್ದರೆ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ನಂತರದ ಸ್ಥಾನದಲ್ಲಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.