SEBI Clarification: ಹೂಡಿಕೆ ಸಲಹೆಗಾರರು ಹೂಡಿಕೆದಾರರಿಗೆ ಕೇವಲ ಸಲಹೆ ಮಾತ್ರ ನೀಡಬೇಕು, ಅವರ ಹಣವನ್ನು ನಿಯಂತ್ರಿಸಬಾರದು

SEBI On Investment Advisor's Rule - ಹೂಡಿಕೆ ಸಲಹಾ ಸಂಸ್ಥೆ (Investment Advisor Firm) ಕೇಳಿದ ಪ್ರಶ್ನೆಗೆ ಉತ್ತರಿಸಿದ SEBI, ಹೂಡಿಕೆ ಸಲಹೆಗಾರರು ತಮ್ಮ ಗ್ರಾಹಕರಿಂದ ಪವರ್ ಆಫ್ ಅಟಾರ್ನಿ ಪಡೆಯಬಾರದು ಎಂದು ಹೇಳಿದೆ.

Written by - Nitin Tabib | Last Updated : Jul 2, 2021, 10:20 PM IST
  • ಹೂಡಿಕೆ ಸಲಹೆಗಾರರು ತಮ್ಮ ಗ್ರಾಹಕರಿಗೆ ಹೂಡಿಕೆಯ ಸಲಹೆ ಮಾತ್ರ ನೀಡಬೇಕು.
  • ಗ್ರಾಹಕರ ಹೂಡಿಕೆಗಳನ್ನು ಹಾಗೂ ಸೆಕ್ಯೂರಿಟಿಗಳನ್ನು ನಿರ್ವಹಿಸಬಾರದು.
  • ಇದಕ್ಕಾಗಿ ಹೂಡಿಕೆ ಸಲಹೆಗಾರರು ಗ್ರಾಹಕರಿಂದ ಪವರ್ ಆಫ್ ಅಟಾರ್ನಿ ಪಡೆಯುವ ಅವಶ್ಯಕತೆ ಇಲ್ಲ.
SEBI Clarification: ಹೂಡಿಕೆ ಸಲಹೆಗಾರರು ಹೂಡಿಕೆದಾರರಿಗೆ ಕೇವಲ ಸಲಹೆ ಮಾತ್ರ ನೀಡಬೇಕು, ಅವರ ಹಣವನ್ನು ನಿಯಂತ್ರಿಸಬಾರದು title=
SEBI On Investment Advisor's Rule (File Photo)

SEBI On Investment Advisor's Rule - ಹೂಡಿಕೆ ಸಲಹೆಗಾರರು ತಮ್ಮ ಗ್ರಾಹಕರಿಗೆ ಕೇವಲ ಸಲಹೆಗಳನ್ನು ಮಾತ್ರ ನೀಡಬೇಕು ಮತ್ತು ಅವರ ಹೂಡಿಕೆ ಹಣ ಅಥವಾ ಶೇರುಗಳನ್ನು ನಿರ್ವಹಿಸುವಂತಿಲ್ಲ ಎಂದು ದೇಶದ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟಿಸ್ ಅಂಡ್ ಎಕ್ಸ್ಚೆಂಜ್ ಬೋರ್ಡ್ ಆಫ್ ಇಂಡಿಯಾ (SEBI) ಎಂದು ಸ್ಪಷ್ಟನೆ ನೀಡಿದೆ. ಹೀಗಾಗಿ ಹೂಡಿಕೆ ಸಲಹೆದಾರರು ಆ ಉದ್ದೇಶದಿಂದ ತಮ್ಮ ಗ್ರಾಹಕರ ಬಳಿಯಿಂದ ಪಾವರ್ ಆಫ್ ಅಟಾರ್ನಿ ದೊರೆತಿದೆ ಎಂದು ಭಾವಿಸಬಾರದು. ಹೂಡಿಕೆ ಸಲಹಾ ಸಂಸ್ಥೆಯ ವತಿಯಿಂದ ಕೇಳಲಾಗಿರುವ ಪ್ರಶ್ನೆಯೊಂದರ ಉತ್ತರಕ್ಕೆ ಸೇಬಿ ಈ ಸ್ಪಷ್ಟನೆ ನೀಡಿದೆ. ಹೂಡಿಕೆ ಸಲಹೆದಾರದ ಕೆಲಸ ಗ್ರಾಹಕರಿಗೆ ಹೂಡಿಕೆಯ ಕುರಿತು ಸಲಹೆಗಳನ್ನು ಮಾತ್ರ ನೀಡುವುದಾಗಿದೆ. ಗ್ರಾಹಕರವತಿಯಿಂದ ಹೂಡಿಕೆ ಮಾಡುವುದು ಅವರ ಕೆಲಸವಲ್ಲ ಎಂಬುದು SEBI ಇದರ ಹಿಂದಿನ ಉದ್ದೇಶವಾಗಿದೆ.

Waterfield Financial and Investment Advisors ಈ ಪ್ರಶ್ನೆ ಕೇಳಿತ್ತು
ವಾಟರ್ ಫೀಲ್ಡ್ ಫೈನಾನ್ಸಿಯಲ್ ಅಂಡ್ ಇನ್ವೆಸ್ಟ್ಮೆಂಟ್ ಸಲಹಾ ಸಂಸ್ಥೆ ಹೂಡಿಕೆ ಸಲಹೆಗಾರರ ಪರವಾಗಿ ನಿಯಮಗಳಲ್ಲಿ ಮಾರ್ಗಸೂಚಿಗಳನ್ನು ನೀಡುವಂತೆ SEBIಗೆ ಕೇಳಿತ್ತು.  ಗ್ರಾಹಕರು ತಮ್ಮ ಸ್ವಇಚ್ಛೆಯಿಂದ ವಾಟರ್ ಫೀಲ್ಡ್ ಗೆ ತಮ್ಮ ಪವರ್ ಆಫ್ ಅಟಾರ್ನಿ ನೀಡಬಹುದು? ಎಂದು ಸಲಹಾ ಸಂಸ್ಥೆ ಪ್ರಶ್ನಿಸಿತ್ತು. ಇದರಿಂದ ತಮ್ಮ ಗ್ರಾಹಕರ ವತಿಯಿಂದ ಅವರ ಖಾತೆಯ ಕುರಿತು ಕಸ್ಟೋಡಿಯನ್ ವಿಚಾರಣೆ ನಡೆಸಲು ಅನುಕೂಲವಾಗುತ್ತದೆ ಎಂದಿತ್ತು. ಇದಲ್ಲದೆ ಒಂದೇ ಬಾರಿಗೆ ತಮ್ಮ ಗ್ರಾಹಕರಿಂದ ಪಾವರ್ ಆಫ್ ಅಟಾರ್ನಿ ಹಾಗೂ ಲಿಖಿತ ಅನುಮತಿ ಪಡೆದು, ನಿರ್ದೇಶನಗಳನ್ನು ಒಪಡೆದು ಶಾಶ್ವತವಾಗಿ ಅವರ ಖಾತೆಗಳ ಕಸ್ಟೋಡಿಯನ್ ರನ್ನು ಸಂಪರ್ಕಿಸಿ ಗ್ರಾಹನರ ಹೂಡಿಕೆಯ ನಿರ್ಧಾರ ಹಾಗೂ ಹೂಡಿಕೆಯ ಉತ್ಪನ್ನದ ಬಗ್ಗೆ ಸೂಚನೆಗಳನ್ನು ಪಡೆಯಬಹುದೇ? ಎಂದು ಕೂಡ ಸಲಹಾ ಸಂಸ್ಥೆ ಪ್ರಶ್ನಿಸಿತ್ತು. 

ಇದರ ಜೊತೆಗೆ ತಮ್ಮ ವತಿಯಿಂದ ನೀಡಲಾಗುವ ಇಂತಹ ಸೇವೆಗಳನ್ನು ಇನ್ವೆಸ್ಟ್ಮೆಂಟ್ ಅಡ್ವೈಸರ್ ಗೆ ಸಂಬಂಧಿಸಿದ ನಿಯಮಗಳ ಅಡಿ 'ಇಂಪ್ಲಿಮೆಂಟೆಶನ್ ಸರ್ವಿಸ್" ಎಂದು ಪರಿಗಣಿಸಲಾಗುವುದೇ ಅಥವಾ ಇಲ್ಲ? ಎಂದು ವಾಟರ್ ಫೀಲ್ಡ್ ಪ್ರಶ್ನಿಸಿತ್ತು.

ಇದನ್ನೂ ಓದಿ-Big News: ದ್ವಿದಳ ಧಾನ್ಯಗಳ ಮೇಲೆ ಸ್ಟಾಕ್ ಲಿಮಿಟ್ ವಿಧಿಸಿದ ಮೋದಿ ಸರ್ಕಾರ, ಬೆಲೆ ಏರಿಕೆಗೆ ಬೀಳಲಿದೆ ಬ್ರೇಕ್

ಹೂಡಿಕೆ ಸಲಹೆಗಾರರ ನಿಯಮಗಳ ಕುರಿತು ಸ್ಪಷ್ಟನೆ ನೀಡಿದ SEBI
ಸಲಹಾ ಸಂಸ್ಥೆ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ SEBI ಈ ಕುರಿತು ತನ್ನ ಸ್ಥಿತಿಯನ್ನು ಸ್ಪಷ್ಟಪಡಿಸಿರುವ ಅದು, ಹೂಡಿಕೆ ಸಲಹೆಗಾರರ ​​ಕೆಲಸ ತನ್ನ ಗ್ರಾಹಕರಿಗೆ ಹೂಡಿಕೆಗಳ ಬಗ್ಗೆ ಸಲಹೆ ನೀಡುವುದಾಗಿದೆ ಮತ್ತು ಅವರ ಹಣ ಅಥವಾ ಭದ್ರತೆಗಳನ್ನು ನಿರ್ವಹಿಸುವುದು ಅಲ್ಲ ಎಂದು ಸ್ಪಷ್ಟಪಡಿಸಿದೆ. ಹೂಡಿಕೆ ಸಲಹೆಗಾರರಿಗೆ ಸಂಬಂಧಿಸಿದ ನಿಯಮಗಳ ಅಡಿಯಲ್ಲಿ, ಹೂಡಿಕೆ ಸಲಹೆಗಾರರು ತಮ್ಮ ಗ್ರಾಹಕರಿಂದ ಪವರ್ ಆಫ್  ಅಟಾರ್ನಿ ಅಧಿಕಾರವನ್ನು ಪಡೆಯುವ ಅಗತ್ಯವಿಲ್ಲ ಎಂದು ಸೆಬಿ ಹೇಳಿದೆ. 

ಇದನ್ನೂ ಓದಿ-Good News: ಗರ್ಭವತಿ ಮಹಿಳೆಯರಿಗೆ ಲಸಿಕೆ ಹಾಕಲು ಸರ್ಕಾರದ ಅನುಮತಿ

ಆದರೆ, ಇದರೊಂದಿಗೆ, ಸೆಬಿ ತನ್ನ ಸ್ಪಷ್ಟೀಕರಣದಲ್ಲಿ ತನ್ನ ಉತ್ತರವು ಪ್ರಶ್ನೆಯೊಂದಿಗೆ ನೀಡಲಾದ ಮಾಹಿತಿಯ ಮೇಲೆ ಆಧಾರಿತವಾಗಿದೆ ಮತ್ತು ನಿಯಮಗಳನ್ನು ವಿಭಿನ್ನ ಸಂಗತಿಗಳು ಅಥವಾ ಸಂದರ್ಭಗಳಲ್ಲಿ ವಿಭಿನ್ನವಾಗಿ ವ್ಯಾಖ್ಯಾನಿಸಬಹುದು ಎಂದೂ ಕೂಡ ಹೇಳಿದೆ. SEBI ನೀಡಿರುವ ಈ  ಪತ್ರವು ಈ ವಿಷಯದಲ್ಲಿ ಮಂಡಳಿಯ ಯಾವುದೇ ನಿರ್ಧಾರವನ್ನು ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ-MSME ಅಡಿ ಚಿಲ್ಲರೆ ಮತ್ತು ಸಗಟು ವ್ಯಾಪಾರ, ಮೋದಿ ಸರ್ಕಾರದ ಮಹತ್ವದ ನಿರ್ಧಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News