Auto Claim Settlement Facility : ಉದ್ಯೋಗಿಗಳಿಗಾಗಿ EPFO ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈಗ ಉದ್ಯೋಗಿಗಳಿಗಾಗಿ EPFO ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ, ಶಿಕ್ಷಣ, ಮದುವೆ ಮತ್ತು ಮನೆಗೆ ಹಣದ ಅಗತ್ಯವಿದ್ದರೆ, ತ್ವರಿತ ಅನುಮೋದನೆಯ ಸೌಲಭ್ಯವನ್ನು ಪಡೆಯಬಹುದು.ಈ ಸೌಲಭ್ಯದಲ್ಲಿ, ನಿಮ್ಮ ಕ್ಲೈಮ್ ಅನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸಲಾಗುತ್ತದೆ. ನಂತರ ಅದನ್ನು ತ್ವರಿತವಾಗಿ ಅನುಮೋದಿಸಲಾಗುತ್ತದೆ.ಇದುವರೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಖಾತೆದಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿತ್ತು. ಆದರೆ ಈಗ 6 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರು ಶಿಕ್ಷಣ,ಮದುವೆ ಮತ್ತು ಮನೆಗೆ ಹಣದ ಅಗತ್ಯವಿರುವಾಗ ಅದರ ಪ್ರಯೋಜನವನ್ನು ಪಡೆಯಬಹುದು.


COMMERCIAL BREAK
SCROLL TO CONTINUE READING

4.45 ಕೋಟಿ ಕ್ಲೇಮ್‌ :
EPFO ನೀಡಿದ ಮಾಹಿತಿಯಲ್ಲಿ, ಈ ಸೌಲಭ್ಯದ ಮಿತಿಯನ್ನು 50,000 ದಿಂದ  1 ಲಕ್ಷಕ್ಕೆ ಹೆಚ್ಚಿಸಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಇಪಿಎಫ್‌ಒ ಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥ ಮಾಡಿದೆ. ಇವುಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು (2.84 ಕೋಟಿ) ಅಡ್ವಾನ್ಸ್ ಕ್ಲೈಮ್ ಆಗಿತ್ತು.ಸರಳ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ ಶಿಕ್ಷಣ, ಮದುವೆ ಅಥವಾ ವಸತಿ ಅಗತ್ಯಗಳಿಗಾಗಿ 1 ಲಕ್ಷದವರೆಗಿನ ಮೊತ್ತವನ್ನು ಹಿಂಪಡೆಯಬಹುದು. 


ಇದನ್ನೂ ಓದಿ : ಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆ


ಕಳೆದ ವರ್ಷ ಅನುಮೋದಿಸಲಾದ ಎಲ್ಲಾ ಮುಂಗಡ ಕ್ಲೈಮ್‌ಗಳಲ್ಲಿ 3-4 ದಿನಗಳಲ್ಲಿ ಅನುಮೋದನೆಯನ್ನು ಸ್ವೀಕರಿಸಲಾಗಿದೆ. ಸುಮಾರು 90 ಲಕ್ಷ ಕ್ಲೈಮ್‌ಗಳು ಸ್ವಯಂ ಇತ್ಯರ್ಥವಾಗಿವೆ.ಹೊಸ ವ್ಯವಸ್ಥೆಯಲ್ಲಿ, ಎಲ್ಲಾ ಕೆಲಸಗಳನ್ನು ಕಂಪ್ಯೂಟರ್‌ಗಳ ಮೂಲಕ ಮಾಡಲಾಗುತ್ತದೆ.ಮುಂಗಡ ಕ್ಲೈಮ್‌ಗಳ ಅನುಮೋದನೆಗೆ ತೆಗೆದುಕೊಳ್ಳುವ ಸಮಯವೂ ಕಡಿಮೆಯಾಗಲು ಇದು ಕಾರಣವಾಗಿದೆ.ಮೊದಲು ಈ ಪ್ರಕ್ರಿಯೆ ಪೂರ್ಣಗೊಳ್ಳಲು 10 ದಿನ ಬೇಕಾಗುತ್ತಿತ್ತು. ಆದರೆ, ಈಗ ಈ ಕೆಲಸ ಕೇವಲ 3-4 ದಿನಗಳಲ್ಲಿ ಮುಗಿಯಲಿದೆ. 


ಮೇ 6 ರಿಂದ ಪ್ರಾರಂಭಿಸಲಾದ ಸೌಲಭ್ಯ :
ಕಂಪ್ಯೂಟರ್ ಸಿಸ್ಟಮ್ ಕ್ಲೈಮ್ ಅನ್ನು ಅನುಮೋದಿಸದಿದ್ದರೆ,ಅದನ್ನು ಮರುಪಾವತಿ ಮಾಡಲಾಗುವುದಿಲ್ಲ. ಆದರೆ  ರದ್ದು ಕೂಡಾ ಮಾಡುವುದಿಲ್ಲ. ಬದಲಿಗೆ,ಅಂಥಹ ಪ್ರಕರಣಗಳನ್ನು ಮರುಪರಿಶೀಲಿಸಿ ನಂತರ ಅನುಮೋದಿಸಲಾಗುತ್ತದೆ.ಮೇ 6, 2024 ರಿಂದ EPFO ​​ನಿಂದ ಸ್ವಯಂಚಾಲಿತ ಮೋಡ್‌ನಲ್ಲಿ ಕ್ಲೈಮ್‌ಗಳನ್ನು ರವಾನಿಸುವ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಈ ಮೂಲಕ 13,011 ಮಂದಿ ಪ್ರಯೋಜನ ಪಡೆದಿದ್ದಾರೆ. 


ಇದನ್ನೂ ಓದಿ : Arecanut Price in Karnataka: ಶಿವಮೊಗ್ಗದಲ್ಲಿ ಅಡಿಕೆ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.