Anand Mahindra Wife: ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಬಗ್ಗೆ ಹೆಚ್ಚು ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ. ಆದರೆ ಅವರ ಪತ್ನಿಯ ಬಗ್ಗೆ ಎಷ್ಟು ಜನರಿಹೆ ಗೊತ್ತು?
Anand Mahindra Wife : ಮಹೀಂದ್ರ ಅಂಡ್ ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಪರಿಚಯ ಯಾರಿಗೆ ತಾನೇ ಇಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಆನಂದ್ ಮಹೀಂದ್ರಾ ಅವರ ಪೋಸ್ಟ್ಗಳನ್ನು ಜನ ಬಹಳಷ್ಟು ಇಷ್ಟಪಡುತ್ತಾರೆ.ಅವರ ಮಂಡೆ ಮೊಟಿವೆಶನ್ ಗಾಗಿ ಕಾಯುವ ಬಹಳಷ್ಟು ಮಂದಿ ನಮ್ಮ ನಡುವೆ ಇದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಬಗ್ಗೆ ಹೆಚ್ಚು ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ.ಆದರೆ, ಅವರ ಪತ್ನಿಯ ಬಗ್ಗೆ ಎಷ್ಟು ಜನರಿಗೆ ಗೊತ್ತು? ಆನಂದ್ ಮಹೀಂದ್ರಾ ಅವರ ಪತ್ನಿ ಮತ್ತು ಮಕ್ಕಳ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯೇ ಇಲ್ಲ.ಲೈಮ್ ಲೈಟ್ ನಿಂದ ದೂರ ಉಳಿಯುವ ಆನಂದ್ ಮಹೀಂದ್ರ ಅವರ ಪತ್ನಿ ಸ್ವತಃ ಪತ್ರಕರ್ತೆ.
ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ನಲ್ಲಿ ಸಕ್ರಿಯರಾಗಿರುತ್ತಾರೆ.ಜನ ಇಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ಕುತೂಹಲದಿಂದ ಮಾತನಾಡುತ್ತಾರೆ. ಪತ್ನಿಯ ಬಗ್ಗೆ ಹೇಳುವಂತೆಯೂ ಕೇಳುತ್ತಾರೆ.
ಆನಂದ್ ಮಹೀಂದ್ರಾ ಅವರ ಪತ್ನಿಯ ಹೆಸರು ಅನುರಾಧಾ ಮಹೀಂದ್ರಾ.ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ಅನುರಾಧಾ ಮಹೀಂದ್ರಾ ಲಗ್ಸುರಿ ಲೈಫ್ಸ್ಟೈಲ್ ಮ್ಯಾಗಜೀನ್ ಸಂಸ್ಥಾಪಕರು.ಇದಲ್ಲದೆ, ಅವರು ಮೇನ್ಸ್ ವರ್ಲ್ಡ್ ಎಂಬ ನಿಯತಕಾಲಿಕವನ್ನು ಪ್ರಕಟಿಸುತ್ತಾರೆ.
ಅನುರಾಧಾ ಮಹೀಂದ್ರಾ ಮುಂಬೈನ ಸೋಫಿಯಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ. ಆನಂದ್ ಮಹೀಂದ್ರ ಅವರನ್ನು ಭೇಟಿಯಾಗಿದ್ದು ಅದೇ ಕಾಲೇಜಿನಲ್ಲಿ.ನಂತರ,ಆನಂದ್ ಮಹೀಂದ್ರಾ ಹಾರ್ವರ್ಡ್ನಲ್ಲಿ ಫಿಲ್ಮ್ ಮೇಕಿಂಗ್ ಮತ್ತು ಆರ್ಕಿಟೆಕ್ಚರ್ ಕಲಿಯುತ್ತಿದ್ದಾಗ ಅವರಿಬ್ಬರೂ ಇಂದೋರ್ನಲ್ಲಿ ಭೇಟಿಯಾದರು.ಸ್ಟೂಡೆಂಟ್ ಸಿನಿಮಾ ಮಾಡಲು ಇಂದೋರ್ ಗೆ ಬಂದಿದ್ದ ಅವರು ಮತ್ತೆ ಅನುರಾಧಾ ಅವರನ್ನು ಭೇಟಿಯಾಗಿದ್ದರು.
ಅನುರಾಧಾ ಅವರನ್ನು ಬಹಳ ಇಷ್ಟಪಡುತ್ತಿದ್ದ ಆನಂದ್ ಮಹೀಂದ್ರಾ, ತಮ್ಮ ತಾಯಿಯ ಉಂಗುರವನ್ನು ನೀಡಿ ಪೋಪೋಸ್ ಮಾಡಿದ್ದರು.ಇದಾದ ನಂತರ ಇಬ್ಬರೂ ಜೂನ್ 17, 1985 ರಂದು ಮದುವೆಯಾಗಿ USನತ್ತ ಪಯಣ ಬೆಳೆಸುತ್ತಾರೆ.
ಅನುರಾಧಾ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಂವಹನ ಕಾರ್ಯಕ್ರಮದಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿ, ಪತ್ರಿಕೋದ್ಯಮವನ್ನು ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡರು.ರೋಲಿಂಗ್ ಸ್ಟೋನ್ ಇಂಡಿಯಾದ ಮುಖ್ಯ ಸಂಪಾದಕರಾದರು. ಅವರು ಭಾರತದ ಕಲೆಯನ್ನು ಉತ್ತೇಜಿಸಲು ದಿ ಇಂಡಿಯಾ ಸ್ಟೋರಿಯ ಸಲಹಾ ಮಂಡಳಿ ಮತ್ತು ಕುಶಲಕರ್ಮಿಗಳ ಸಲಹಾ ಮಂಡಳಿಯ ಸದಸ್ಯರಾದರು.