ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಒಂದು ದೊಡ್ಡ ಸುದ್ದಿಯನ್ನು ಹೊರ ತಂದಿದೆ. ಮೋದಿ ಸರಕಾರ ಶೀಘ್ರದಲ್ಲಿಯೇ ಬಡ್ಡಿ ಹಣವನ್ನು ಖಾತೆಗೆ ಸಂದಾಯ ಮಾಡಲಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಬ್ಯಾಂಕ್ ಖಾತೆಯಲ್ಲಿನ ಮೊತ್ತ ಹೆಚ್ಚಾಗಲಿದೆ. ಕೆಲವು ತಿಂಗಳ ಹಿಂದೆ, ಕೇಂದ್ರ ಸರ್ಕಾರವು 2022-2023 ರ ಹಣಕಾಸು ವರ್ಷಕ್ಕೆ ಶೇಕಡಾ 8.15 ರ ಬಡ್ಡಿದರವನ್ನು ನೀಡಲು ನಿರ್ಧರಿಸಿತ್ತು. ಇದಾದ ಬಳಿಕ ಎಲ್ಲಾ ಉದ್ಯೋಗಿಗಳು ತಮ್ಮ ಖಾತೆಗಳಲ್ಲಿ ಈ ಬಡ್ಡಿ ಮೊತ್ತಕ್ಕಾಗಿ ಕಾಯುತ್ತಿದ್ದಾರೆ. ಪಿಎಫ್ ಚಂದಾದಾರರಿಗೆ ಸರ್ಕಾರ ಶೀಘ್ರದಲ್ಲೇ ಈ ಒಳ್ಳೆಯ ಸುದ್ದಿಯನ್ನು ನೀಡುವ ನಿರೀಕ್ಷೆಯಿದೆ. 


COMMERCIAL BREAK
SCROLL TO CONTINUE READING

6 ಕೋಟಿಗೂ ಹೆಚ್ಚು ಪಿಎಫ್ ಉದ್ಯೋಗಿಗಳಿಗೆ ಅನುಕೂಲ : 
ಕಳೆದ ಮೂರು ವರ್ಷಗಳಲ್ಲಿ ಪಿಎಫ್ ಚಂದಾದಾರರಿಗೆ ಹೆಚ್ಚಿನ ಬಡ್ಡಿ ದರವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವವರಿಗೆ ಇದು ಬಹುದೊಡ್ಡ ರಿಲೀಫ್ ಆಗಲಿದೆ. ಮತ್ತೊಂದೆಡೆ, ಚಂದಾದಾರರ ಖಾತೆಗೆ ಬಡ್ಡಿಯನ್ನು ಯಾವಾಗ ಜಮಾ ಮಾಡಲಾಗುತ್ತದೆ ಮತ್ತು ಅದನ್ನು ಯಾವ ದಿನಾಂಕದಂದು ಪಾವತಿಸಲಾಗುತ್ತದೆ ಎಂಬುದನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ ಈ ತಿಂಗಳ ಅಂತ್ಯದೊಳಗೆ ಬಡ್ಡಿ ಮೊತ್ತವನ್ನು ಜಮಾ ಮಾಡಬಹುದು ಎನ್ನಲಾಗಿದೆ. 


ಇದನ್ನೂ ಓದಿ :  ನಿಮ್ಮ ಬಳಿಯೂ ಇದೆಯಾ ಇಂಥ ವಿಶೇಷ ನಾಣ್ಯಗಳು ! ಮಾರಾಟ ಮಾಡಿದರೆ ಸಿಗುವುದು ಲಕ್ಷ ಲಕ್ಷ ಹಣ


ನಿಮ್ಮ ಖಾತೆಗೆ ಎಷ್ಟು ಹಣ ಬರುತ್ತದೆ  :
ಕೇಂದ್ರ ಮೋದಿ ಸರ್ಕಾರ ಈ ಹಣಕಾಸು ವರ್ಷಕ್ಕೆ ಶೇ.8.15ರ ಬಡ್ಡಿ ದರವನ್ನು ಘೋಷಿಸಿದೆ. ಹಾಗಿದ್ದರೆ ನಮ್ಮ ಖಾತೆಗೆ ಎಷ್ಟು ಹಣ ವರ್ಗಾವಣೆಯಾಗಲಿದೆ ಎನ್ನುವುದನ್ನು ತಿಳಿದುಕೊಳ್ಳಲು ಅದರ ಲೆಕ್ಕಾಚಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. 


- ನಿಮ್ಮ ಇಪಿಎಫ್ ಖಾತೆಯಲ್ಲಿ 6 ಲಕ್ಷ ಇದ್ದರೆ, ಶೇ.8.15ರ ಬಡ್ಡಿ ದರದಲ್ಲಿ ಸುಮಾರು 50,000 ರೂಪಾಯಿ ಬಡ್ಡಿ ಸಿಗುತ್ತದೆ. 
- ನಿಮ್ಮ ಖಾತೆಯಲ್ಲಿ 7 ಲಕ್ಷ ಠೇವಣಿ ಇಟ್ಟಿದ್ದರೆ ಸುಮಾರು 58,000 ರೂ.   ಸಿಗುವುದು. 
- ನಿಮ್ಮ ಇಪಿಎಫ್ ಖಾತೆಯಲ್ಲಿ 8 ಲಕ್ಷ ಠೇವಣಿ ಇದ್ದರೆ  ಶೇ. 8.15 ಬಡ್ಡಿ ದರದ ಅನ್ವಯ 66,000  ರೂಪಾಯಿ ನಿಮ್ಮ ಖಾತೆ ಸೇರುವುದು.  


ಪಿಎಫ್ ಚಂದಾದಾರರು ತಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂದು ತಿಳಿಯಲು ಎಲ್ಲಿಯೂ ತಿರುಗಾಡಬೇಕಾಗಿಲ್ಲ. ಇದನ್ನು ಕಂಡುಹಿಡಿಯುವುದು ತುಂಬಾ ಸುಲಭ. 


ಇದನ್ನೂ ಓದಿ : ಭಾರತದ ಅತ್ಯಂತ ಶ್ರೀಮಂತ ರೈತ ಯಾರು ಗೊತ್ತಾ..? ಇವರೇ ನೋಡಿ..


ಈ ರೀತಿಯಲ್ಲಿ ನೀವು ತ್ವರಿತವಾಗಿ ಪರಿಶೀಲಿಸಬಹುದು :
ಇಪಿಎಫ್ ಖಾತೆಯಲ್ಲಿ ಸರ್ಕಾರ ಎಷ್ಟು ಹಣವನ್ನು ವರ್ಗಾಯಿಸಿದೆ ಎಂದು ತಿಳಿಯಲು ಎಲ್ಲಿಗೂ ಹೋಗಬೇಕಾಗಿಲ್ಲ. PF ಚಂದಾದಾರರು ಉಮಾಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದರ   ಸಹಾಯದಿಂದ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಇದಕ್ಕಾಗಿ ಯಾವುದೇ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ಇದಲ್ಲದೆ, ಇಪಿಎಫ್‌ಒ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಖಾತೆಯಲ್ಲಿರುವ ಮೊತ್ತವನ್ನು ಪರಿಶೀಲಿಸಬಹುದು. 


EPFO ಅಪ್ಡೇಟ್ : 
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಉದ್ಯೋಗಿಗಳಿಗೆ ಕಾಲಕಾಲಕ್ಕೆ ವಿವಿಧ  ಅಪ್ಡೇಟ್ ಗಳನ್ನು ಬಿಡುಗಡೆ ಮಾಡುತ್ತದೆ. ಇಪಿಎಫ್‌ಒ ಸದಸ್ಯರು ತಮ್ಮ ಖಾತೆಯಲ್ಲಿ ಉದ್ಯೋಗದಾತರು/ಕಂಪನಿಯಿಂದ ಮಾಡಿದ ಬದಲಾವಣೆಗಳನ್ನು ಪರಿಶೀಲಿಸುವುದು ಅಗತ್ಯ ಎಂದು ಇಪಿಎಫ್‌ಒ ಹೇಳಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಇದರಲ್ಲಿ, 'ಇಪಿಎಫ್ ಖಾತೆದಾರರ ಹಕ್ಕು ಉದ್ಯೋಗದಾತ/ಕಂಪನಿ ಲಾಗ್-ಇನ್‌ನಲ್ಲಿಯೂ ಗೋಚರಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.