PF ಖಾತೆದಾರರಿಗೆ ಬಿಗ್ ಶಾಕ್! ಶೇ.8.10 ಕ್ಕೆ ಬಡ್ಡಿದರ ಇಳಿಕೆ ಮಾಡಿದ EPFO
ಇಪಿಎಫ್‌ಒ ಬಡ್ಡಿದರ ಹೆಚ್ಚಳಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದ ಜನರಿಗೆ ಭಾರಿ ಹಿನ್ನಡೆಯಾಗಿದೆ. ಹೋಳಿ ಹಬ್ಬದ ಮೊದಲು, ಇಪಿಎಫ್‌ಒ ಬಡ್ಡಿದರವನ್ನು ಹೆಚ್ಚಿಸುವ ಬದಲು ಕಡಿಮೆ ಮಾಡಿದೆ.
ನವದೆಹಲಿ : ಭವಿಷ್ಯ ನಿಧಿ ಸಂಸ್ಥೆ ಉದ್ಯೋಗಿಗಳಿಗೆ ಬಿಗ್ ಶಾಕ್ ಒಂದನ್ನು ನೀಡಿದೆ. ಇಪಿಎಫ್‌ಒ ಬಡ್ಡಿದರ ಹೆಚ್ಚಳಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದ ಜನರಿಗೆ ಭಾರಿ ಹಿನ್ನಡೆಯಾಗಿದೆ. ಹೋಳಿ ಹಬ್ಬದ ಮೊದಲು, ಇಪಿಎಫ್‌ಒ ಬಡ್ಡಿದರವನ್ನು ಹೆಚ್ಚಿಸುವ ಬದಲು ಕಡಿಮೆ ಮಾಡಿದೆ.
2021-22 ರ ಹಣಕಾಸು ವರ್ಷಕ್ಕೆ ಶೇ.8.1 ರಷ್ಟು ಬಡ್ಡಿ ದರ(EPF Interest Rate)ವನ್ನು ಘೋಷಿಸಲಾಗಿದೆ, ಇದು 2020-21 ರಲ್ಲಿ ಶೇ. 8.5 ರಷ್ಟಿತ್ತು. ಇಷ್ಟು ಮಾತ್ರವಲ್ಲದೆ, ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಯು ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. 1977-78ರಲ್ಲಿ ಇಪಿಎಫ್ ಬಡ್ಡಿ ದರ ಶೇ.8ರಷ್ಟಿದ್ದ ನಂತರ ಇದು ಅತ್ಯಂತ ಕಡಿಮೆಯಾಗಿದೆ.
ಇದನ್ನೂ ಓದಿ : FD Rules : FD ಗೆ ಸಂಬಂಧಿಸಿದ ನಿಯಮಗಲ್ಲಿ ಭಾರಿ ಬದಲಾವಣೆ ಮಾಡಿದ RBI
ಸಧ್ಯ ಗುವಾಹಟಿಯಲ್ಲಿ EPFO ಸಭೆ ನಡೆಯುತ್ತಿದೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (EPFO) ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಶನಿವಾರ ನಡೆದ ತನ್ನ ಸಭೆಯಲ್ಲಿ 2021-22 ನೇ ಸಾಲಿಗೆ ಇಪಿಎಫ್‌ಗೆ ಶೇ. 8.1 ಬಡ್ಡಿ ದರವನ್ನು ನೀಡಲು ನಿರ್ಧರಿಸಿದೆ.
ಈ ಹಿಂದೆ, CBT ಮಾರ್ಚ್ 2021 ರಲ್ಲಿ 2020-21 ಕ್ಕೆ EPF ಠೇವಣಿಗಳ ಮೇಲೆ ಶೇ.8.5 ರಷ್ಟು ಬಡ್ಡಿ ದರವನ್ನು ನಿಗದಿಪಡಿಸಿತ್ತು.
ಇದನ್ನೂ ಓದಿ : ನಿಮ್ಮ Aadhar ಕಳೆದುಹೋಗಿದೆಯೇ? ಅದನ್ನ Enrollment ID ಇಲ್ಲದೆಯೇ ಡೌನ್‌ಲೋಡ್ ಮಾಡಬಹುದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.