Pensionಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಪ್ರಕಟ! NPS ಅಡಿ ಸಿಗಲಿದೆ ನಿಶ್ಚಿತ ರಿಟರ್ನ್, ಸರ್ಕಾರದ ಯೋಜನೆ ಇಲ್ಲಿದೆ
NPS Assured Return Scheme: ಈ ಯೋಜನೆಯನ್ನು ಸಾಕಾರಗೊಳಿಸಲು PFRDA ಸಲಹೆಗಾರರ ನೇಮಕಾತಿ ಆರಂಭಿಸಿದೆ.ಸಲಹೆಗಾರರು ಯೋಜನೆಯ ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದ್ದಾರೆ.
ನವದೆಹಲಿ: NPS Assured Return Scheme- ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಅದ್ಭುತವಾದ ಯೋಜನೆ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಪಿಂಚಣಿ ನಿಯಂತ್ರಕ PFRDA ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಕನಿಷ್ಠ ಆಶ್ವಾಸಿತ ರಿಟರ್ನ್ ಸ್ಕೀಮ್ (MARS) ನೊಂದಿಗೆ ಬರಲಿದೆ. ಈ ಕುರಿತಾದ ಸರ್ಕಾರದ ವಿಶೇಷ ಯೋಜನೆ ಏನು ತಿಳಿದುಕೊಳ್ಳೋಣ ಬನ್ನಿ.
ಸಲಹೆಗಾರರನ್ನು ನೇಮಿಸಲು ಮುಂದಾದ PFRDA
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಈ ಯೋಜನೆಯನ್ನು ವಿನ್ಯಾಸಗೊಳಿಸಲು ಸಲಹೆಗಾರರ ನಿಯುಕ್ತಿ ಪ್ರಸ್ತಾವನೆಯನ್ನು (RFP) ಬಿಡುಗಡೆ ಮಾಡಿದೆ. ಕಳೆದ ವರ್ಷ, ಪಿಎಫ್ಆರ್ಡಿಎ ಅಧ್ಯಕ್ಷ ಸುಪ್ರತಿಮ್ ದಾಸ್ ಬಂಡೋಪಾಧ್ಯಾಯ ಅವರು ಈ ಯೋಜನೆಯ ಬಗ್ಗೆ 'ಪಿಂಚಣಿ ನಿಧಿಗಳು ಮತ್ತು ಆಕ್ಚುರಿಯಲ್ ಸಂಸ್ಥೆಗಳೊಂದಿಗೆ ಇದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರು ಎಂಬುದು ಇಲ್ಲಿ ಗಮನಾರ್ಹ.
ಈ ಮಾತುಕತೆಯ ಆಧಾರದ ಮೇಲೆ, ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. PFRDA ಕಾಯಿದೆಯಡಿಯಲ್ಲಿ ಕನಿಷ್ಟ ಖಚಿತವಾದ ರಿಟರ್ನ್ ಯೋಜನೆಗೆ ಈಗಾಗಲೇ ಅನುಮತಿ ಕೂಡ ನೀಡಲಾಗಿದೆ. ಪಿಂಚಣಿ ನಿಧಿ (National Pension Scheme) ಯೋಜನೆಗಳ ಅಡಿಯಲ್ಲಿ ನಿರ್ವಹಿಸಲ್ಪಡುವ ಹಣವನ್ನು MAARKED TO MARKET ಎಂದು ಗುರುತಿಸಲಾಗಿದೆ. ನಿಸ್ಸಂಶಯವಾಗಿ, ಇದರಲ್ಲಿ ಕೆಲವು ಏರಿಳಿತಗಳಿದ್ದು. ಅವುಗಳ ಮೌಲ್ಯಮಾಪನ ಮಾರುಕಟ್ಟೆ ಸ್ಥಿತಿಯನ್ನು ಆಧರಿಸಲಿವೆ.
ಸಲಹೆಗಾರರ ಕೆಲಸ ಏನು? (Business News In Kannada)
PFRDA ಯ RFP ಕರಡು ಪ್ರಕಾರ, ಸಲಹೆಗಾರರ ನೇಮಕಾತಿಯು NPS ಅಡಿಯಲ್ಲಿ ಖಾತರಿಯ ಆದಾಯದೊಂದಿಗೆ ಯೋಜನೆಯನ್ನು ರೂಪಿಸಲು PFRDA ಮತ್ತು ಸೇವಾ ಪೂರೈಕೆದಾರರ ನಡುವೆ ಪ್ರಧಾನ-ಏಜೆಂಟ್ ಸಂಬಂಧವನ್ನು ಸೃಷ್ಟಿಸುವುದಾಗಿದೆ. ಪಿಎಫ್ಆರ್ಡಿಎ ಕಾಯಿದೆಯ ಸೂಚನೆಗಳ ಪ್ರಕಾರ, ಎನ್ಪಿಎಸ್ ಅಡಿಯಲ್ಲಿ, ಚಂದಾದಾರರು 'ಕನಿಷ್ಠ ಖಚಿತವಾದ ಆದಾಯ' ನೀಡುವ ಯೋಜನೆಯನ್ನು ಆರಿಸಿಕೊಳ್ಳಲಿದ್ದಾರೆ, ಈ ರೀತಿಯ ಯೋಜನೆಯನ್ನು ನಿಯಂತ್ರಕದಲ್ಲಿ ನೋಂದಾಯಿಸಲಾದ ಪಿಂಚಣಿ ನಿಧಿಯಿಂದ ನೀಡಬೇಕಾಗುತ್ತದೆ. ಹೀಗೆ ಸಲಹೆಗಾರರು ಪಿಂಚಣಿ ನಿಧಿಯಿಂದ ಅಸ್ತಿತ್ವದಲ್ಲಿರುವ ಮತ್ತು ಸಂಭಾವ್ಯ ಚಂದಾದಾರರಿಗೆ 'ಕನಿಷ್ಠ ಖಚಿತ ರಿಟರ್ನ್' ಯೋಜನೆಯನ್ನು ಸಿದ್ಧಪಡಿಸಲು ಕೆಲಸ ಮಾಡಲಿದ್ದಾರೆ.
ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ನಿಮ್ಮ ಖಾತೆಗೆ ₹2 ಲಕ್ಷ ಜಮಾ!
ಇದುವರೆಗೆ ಇಂತಹ ಯಾವುದೇ ಯೋಜನೆ ರೂಪಗೊಂಡಿಲ್ಲ
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಮತ್ತು ಅಟಲ್ ಪಿಂಚಣಿ ಯೋಜನೆ (APY) ಗೆ ವೈಶಿಷ್ಟ್ಯಗಳನ್ನು ರಚಿಸಲು ಮತ್ತು ಸೇರಿಸುವಲ್ಲಿ PFRDA ಸಾಕಷ್ಟು ಕೆಲಸ ಮಾಡಿದೆ, ಆದರೆ ಇವೆಲ್ಲವೂ ಕೇಂದ್ರ ಸರ್ಕಾರದ ಯೋಜನೆಗಳಾಗಿವೆ. PFRDA ತರಲು ಯೋಜಿಸುತ್ತಿರುವ ಯೋಜನೆಯು ಅದರ ಮೊದಲ ನೈಜ ಯೋಜನೆಯಾಗಿದೆ. PFRDA ಇದುವರೆಗೆ ಇಂತಹ ಯಾವುದೇ ಖಾತರಿಯ ಯೋಜನೆಯನ್ನು ನಡೆಸದ ಕಾರಣ ಇದು ಕೂಡ ವಿಶೇಷವಾಗಿದೆ. ಈ ಪಿಂಚಣಿ ಯೋಜನೆ ಗ್ಯಾರಂಟಿ ಮಾರುಕಟ್ಟೆ ಲಿಂಕ್ ಆಗಿರುತ್ತದೆ ಎಂದು PFRDA ಹೇಳಿದೆ. ಹೂಡಿಕೆಯ ಮೇಲಿನ ಲಾಭದ ಖಾತರಿಯ ಭಾಗವನ್ನು ನಿಧಿ ವ್ಯವಸ್ಥಾಪಕರು ನಿರ್ಧರಿಸಬೇಕಾಗುತ್ತದೆ ಎಂದು ಅದು ಹೇಳಿದೆ.
ಇದನ್ನೂ ಓದಿ-ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಶುಭಸುದ್ದಿ: ಶೀಘ್ರವೇ ದೊಡ್ಡ ಸೌಲಭ್ಯ ಲಭ್ಯವಾಗಲಿದೆ!
NPS ಎಂದರೇನು?
ಜನವರಿ 1, 2004 ರಂದು ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಎನ್ಪಿಎಸ್ ಅನ್ನು ಕಡ್ಡಾಯವಾಗಿ ಜಾರಿಗೊಳಿಸಿದೆ. ಇದರ ನಂತರ ಎಲ್ಲಾ ರಾಜ್ಯಗಳು ತಮ್ಮ ಉದ್ಯೋಗಿಗಳಿಗೆ ಎನ್ಪಿಎಸ್ ಅನ್ನು ಅಳವಡಿಸಿಕೊಂಡಿವೆ. 2009 ರ ನಂತರ, ಈ ಯೋಜನೆಯನ್ನು ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೂ ತೆರೆಯಲಾಗಿದೆ. ನಿವೃತ್ತಿಯ (Retirement) ನಂತರ, ಉದ್ಯೋಗಿಗಳು NPS ನ ಭಾಗವನ್ನು ಹಿಂಪಡೆಯಬಹುದು, ಉಳಿದವರು ನಿಯಮಿತ ಆದಾಯಕ್ಕಾಗಿ ವರ್ಷಾಶನವನ್ನು ತೆಗೆದುಕೊಳ್ಳಬಹುದು. 18 ರಿಂದ 60 ವರ್ಷದೊಳಗಿನ ಯಾವುದೇ ವ್ಯಕ್ತಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತೆಗೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ-Bank of Baroda Offer: ಅಗ್ಗದ ದರದಲ್ಲಿ ಮನೆ ಖರೀದಿಸಬೇಕೆ? ಈ ಬ್ಯಾಂಕ್ ನೀಡುತ್ತಿದೆ ನಿಮಗೊಂದು ಸುವರ್ಣಾವಕಾಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.