ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಶುಭಸುದ್ದಿ: ಶೀಘ್ರವೇ ದೊಡ್ಡ ಸೌಲಭ್ಯ ಲಭ್ಯವಾಗಲಿದೆ!

ಇದುವರೆಗೂ ಈ ಯೋಜನೆಯಡಿ ವರ್ಷದಲ್ಲಿ ಕೇವಲ 2 ಬಾರಿ ಮಾತ್ರ ಹೂಡಿಕೆ ಮಾದರಿಯನ್ನು ಬದಲಾಯಿಸುವ ಸೌಲಭ್ಯವಿತ್ತು.

Written by - Puttaraj K Alur | Last Updated : Jan 22, 2022, 09:27 AM IST
  • ಎನ್‌ಪಿಎಸ್‌ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ
  • ಗ್ರಾಹಕರಿಗೆ NPS ಹೂಡಿಕೆ ಮಾದರಿಯನ್ನು 4 ಬಾರಿ ಬದಲಾಯಿಸುವ ಸೌಲಭ್ಯ
  • ಇದುವರೆಗೆ ವರ್ಷದಲ್ಲಿ 2 ಬಾರಿ ಹೂಡಿಕೆ ಆಯ್ಕೆ ಬದಲಾಯಿಸುವ ಸೌಲಭ್ಯವಿತ್ತು
ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಶುಭಸುದ್ದಿ: ಶೀಘ್ರವೇ ದೊಡ್ಡ ಸೌಲಭ್ಯ ಲಭ್ಯವಾಗಲಿದೆ! title=
ಎನ್‌ಪಿಎಸ್ ಹೂಡಿಕೆ ಯೋಜನೆ

ನವದೆಹಲಿ: ಎನ್‌ಪಿಎಸ್ ಯೋಜನೆ: ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (National Pension System) ಹೂಡಿಕೆ ಮಾಡಿದರೆ ಶೀಘ್ರದಲ್ಲೇ ಉತ್ತಮ ಸೌಲಭ್ಯಗಳನ್ನು ಪಡೆಯಲಿದ್ದೀರಿ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಶೀಘ್ರದಲ್ಲೇ ಈ ಯೋಜನೆಯ (NPS) ಚಂದಾದಾರರಿಗೆ ಹಣಕಾಸು ವರ್ಷದಲ್ಲಿ 4 ಬಾರಿ ಹೂಡಿಕೆ ಮಾದರಿಯನ್ನು ಬದಲಾಯಿಸಲು ಅನುಮತಿಸಲಾಗುವುದು ಎಂದು ಘೋಷಿಸಿದೆ. ಇದುವರೆಗೂ ಈ ಯೋಜನೆಯಡಿ ವರ್ಷದಲ್ಲಿ ಕೇವಲ 2 ಬಾರಿ ಮಾತ್ರ ಹೂಡಿಕೆ ಮಾದರಿಯನ್ನು ಬದಲಾಯಿಸುವ ಸೌಲಭ್ಯವಿತ್ತು.

PFRDA ಅಧ್ಯಕ್ಷರು ಹೇಳಿದ್ದೇನು ಗೊತ್ತಾ?

ಪಿಎಫ್‌ಆರ್‌ಡಿಎ ಅಧ್ಯಕ್ಷ ಸುಪ್ರತಿಮ್ ಬಂಡೋಪಾಧ್ಯಾಯ(Supratim Bandyopadhyay)ಈ ಬಗ್ಗೆ ಮಾತನಾಡಿದ್ದು, ‘ಸದ್ಯ ಗ್ರಾಹಕರು ವರ್ಷಕ್ಕೆ 2 ಬಾರಿ ಹೂಡಿಕೆ ಆಯ್ಕೆಗಳನ್ನು ಬದಲಾಯಿಸಬಹುದು. ಶೀಘ್ರದಲ್ಲೇ ನಾವು ಮಿತಿಯನ್ನು 4 ಪಟ್ಟು ಹೆಚ್ಚಿಸಲಿದ್ದೇವೆ. ಕಳೆದ ಹಲವು ದಿನಗಳಿಂದ ಗ್ರಾಹಕರು ಈ ಪ್ಲಾನ್‌ನಲ್ಲಿ ಬದಲಾವಣೆಗೆ ಒತ್ತಾಯಿಸುತ್ತಿದ್ದರು. ನಂತರ ಈ ನಿರ್ಧಾರವನ್ನು PFRDA ತೆಗೆದುಕೊಂಡಿದೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ICICI Bank ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶಾಕ್, ಈಗ ಪಾವತಿ ತಡವಾದ್ರೆ ಬೀಳುತ್ತೆ ಭಾರೀ ದಂಡ

ಮ್ಯೂಚುವಲ್ ಫಂಡ್‌ನಂತೆ ಪರಿಗಣಿಸಬೇಡಿ

ಮುಂದುವರೆದು ಮಾತನಾಡಿರುವ ಅವರು, ‘ಪಿಎಫ್‌ಆರ್‌ಡಿಎ ಪಿಂಚಣಿ ನಿಧಿ(Govt Scheme)ಯನ್ನು ರೂಪಿಸಲು ದೀರ್ಘಾವಧಿಯ ಹೂಡಿಕೆ ಉತ್ಪನ್ನವನ್ನಾಗಿ ಇದನ್ನು ನೋಡಬೇಕು. ಇದನ್ನು ಮ್ಯೂಚುವಲ್ ಫಂಡ್ ಯೋಜನೆಯಾಗಿ ಪರಿಗಣಿಸಬಾರದು. ಜನರು ಕೆಲವೊಮ್ಮೆ ಇದನ್ನು ಮ್ಯೂಚುವಲ್ ಫಂಡ್‌ಗಳೊಂದಿಗೆ ಹೋಲಿಸುತ್ತಾರೆ. ಇದಕ್ಕೆ ಸ್ವಲ್ಪ ಸಮಯ ನೀಡಬೇಕು ಮತ್ತು ನಂತರ ನೀವು ಇದರ ಲಾಭವನ್ನು ಪಡೆಯಬಹುದು. ಇದನ್ನು ವಿವೇಚನೆಯಿಂದ ಬಳಸಿದರೆ ನಾವು ಅದನ್ನು ಹೆಚ್ಚಿಸಲಿದ್ದೇವೆ’ ಅಂತಾ ಹೇಳಿದ್ದಾರೆ.

ಹೂಡಿಕೆ ಎಲ್ಲಿದೆ..?

ಈ ಯೋಜನೆಯ ಅಡಿಯಲ್ಲಿ ಚಂದಾದಾರರು ತಮ್ಮ ಹೂಡಿಕೆ(Pension Fund)ಗಳನ್ನು ಸರ್ಕಾರಿ ಭದ್ರತೆಗಳು, Debt Instruments, ಆಸ್ತಿ-ಬೆಂಬಲಿತ ಮತ್ತು ಟ್ರಸ್ಟ್-ರಚನಾತ್ಮಕ ಹೂಡಿಕೆಗಳು, ಅಲ್ಪಾವಧಿಯ ಸಾಲ ಹೂಡಿಕೆಗಳು, ಇಕ್ವಿಟಿ ಮತ್ತು ಸಂಬಂಧಿತ ಹೂಡಿಕೆಗಳಲ್ಲಿ ಹೂಡಿಕೆ ಮಾಡಬಹುದು. ಆದಾಗ್ಯೂ ವಿಭಿನ್ನ ಗ್ರಾಹಕರಿಗೆ ವಿಭಿನ್ನ ನಿಯಮಗಳಿವೆ. ಉದಾಹರಣೆಗೆ ಸರ್ಕಾರಿ ವಲಯದ ಉದ್ಯೋಗಿಗಳು ಈಕ್ವಿಟಿಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ಸಾಧ್ಯವಿಲ್ಲ, ಆದರೆ ಕಾರ್ಪೊರೇಟ್ ವಲಯದ ಉದ್ಯೋಗಿಗಳು ಈಕ್ವಿಟಿಗಳಿಗೆ ಶೇ.75ರವರೆಗೆ ಆಸ್ತಿಯನ್ನು ನಿಯೋಜಿಸಲು ಅನುಮತಿಸಲಾಗಿದೆ.

ಇದನ್ನೂ ಓದಿ: Petrol Price Today : ಇಂದಿನ ಪೆಟ್ರೋಲ್ - ಡೀಸೆಲ್‌ ಹೊಸ ದರ ಬಿಡುಗಡೆ ಮಾಡಿದ ಸರ್ಕಾರಿ ತೈಲ ಕಂಪನಿಗಳು!  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News