Drone For Vaccine Delivery - ನವದೆಹಲಿ: ಪ್ರಮುಖ ಸರಕುಗಳನ್ನು ಡ್ರೋನ್‌ಗಳ ಮೂಲಕ ಮೈಲುಗಳಷ್ಟು ದೂರ ಸಾಗಿಸುವ ದಿನಗಳು ಹತ್ತಿರಕ್ಕೆ ಬಂದಿವೆ. ಮುಂದಿನ ದಿನಗಳಲ್ಲಿ, ಪಿಜ್ಜಾದಿಂದ ಲಸಿಕೆಯವರೆಗಿನ ವಿತರಣೆಯನ್ನು ಡ್ರೋನ್ ಮೂಲಕ ಮಾಡಬಹುದು. ನಾಗರಿಕ ವಿಮಾನಯಾನ ಸಚಿವಾಲಯವು ಆಹಾರ ವಿತರಣಾ ಕಂಪನಿ ಸ್ವಿಗ್ಗಿ ಸೇರಿದಂತೆ ಇನ್ನೂ 7 ಕಂಪನಿಗಳಿಗೆ ಡ್ರೋನ್‌ಗಳನ್ನುದೀರ್ಘಾವಧಿ ಹಾರಾಟಕ್ಕೆ ಬಳಸಲು ಅನುಮತಿ ನೀಡಿದೆ.  ಸ್ವಿಗ್ಗಿ ಸ್ಕೈಲಾರ್ಕ್‌ ಜೊತೆ ಸೇರಿ ಈ ಪ್ರಯೋಗ ನಡೆಸಲಿದೆ. ಈ ಸೌಲಭ್ಯವನ್ನು ಪರಿಚಯಿಸುವುದರಿಂದ ಸಮಯ ಉಳಿತಾಯವಾಗುತ್ತದೆ ಮತ್ತು ಜನರಿಗೆ ಸಹ ಸೌಲಭ್ಯ ಸಿಗುತ್ತದೆ.


COMMERCIAL BREAK
SCROLL TO CONTINUE READING

ಮಾರುತ್ ಡ್ರೋನ್ ಟೆಕ್ ವೈದ್ಯಕೀಯ ವಿತರಣೆಯನ್ನು ಪರೀಕ್ಷಿಸುತ್ತಿದೆ
ಮಾರುತ್ ಡ್ರೋನ್ ಟೆಕ್ ಗೆ BVLOSನ ಅನುಮತಿ ದೊರೆತಿದ್ದು, ಕಂಪನಿ ತೆಲಂಗಾಣ ಸರ್ಕಾರದ ಜೊತೆ ಸೇರಿ ಮೆಡಿಕಲ್ ಸಪ್ಲೈ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಕೊವಿಡ್ ಕಾಲಾವಧಿಯಲ್ಲಿ ಈ ಕಂಪನಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಈ ಅವಧಿಯಲ್ಲಿ ಕಂಪನಿ ಒತ್ತು 52 ಡ್ರೋನ್ ಗಳನ್ನು ಬಳಸಿದೆ. ವ್ಯಾಕ್ಸಿನ್ ಸಪ್ಲೈ ಮಾಡಲು ಮಾರುತ್ ಡ್ರೋನ್ (Drone) ಟೆಕ್ ಇದೀಗ ಅನುಮತಿ ಕೋರಿದೆ. ಇವಲ್ಲದೆ AutoMicroUAS, Centillion Networks, Terradrone, Virginatech ಕಂಪನಿಗಳಿಗೂ ಕೂಡ BVLOS ಅನುಮತಿ ದೊರೆತಿವೆ.


ಇದನ್ನು ಓದಿ- 190 ಅಡಿ ಎತ್ತರದಿಂದ ಡ್ರೋನ್ ಮೂಲಕ ಶರೀರ ತಾಪಮಾನ ತಪಾಸಣೆ,..


ಇದುವರೆಗೆ 20 ಕಂಪನಿಗಳಿಗೆ ಈ ಅನುಮತಿ ನೀಡಲಾಗಿದೆ
ಕಳೆದ ವರ್ಷ ಒಟ್ಟು 13 ಕಂಪನಿಗಳಿಗೆ ಡ್ರೋನ್ ಮೂಲಕ ವಿತರಣೆ ಮಾಡಲು ಅನುಮತಿ ದೊರೆತಿದೆ. ಈ ಕಂಪನಿಗಳಲ್ಲಿ ಮೊದಲು ಸ್ಪೈಸ್ ಜೆಟ್ ಅಂಗಸಂಸ್ಥೆಯಾಗಿರುವ SpiceXpressಗೆ DGCA ತನ್ನ ಮೊದಲ ಅನುಮೋದನೆ ನೀಡಿತ್ತು. ಇದರೊಂದಿಗೆ ಇದುವರೆಗೆ ಒಟ್ಟು 20 ಕಂಪನಿಗಳಿಗೆ ಈ ರೀತಿಯ ಅನುಮತಿ ದೊರೆತಿದೆ.


ಡ್ರೋನ್ ಮೂಲಕ ವ್ಯಾಕ್ಸಿನ್ ವಿತರಣೆ
ಮೇ ತಿಂಗಳಲ್ಲಿ, ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಡ್ರೋನ್ ಮೂಲಕ ಇ-ಕಾಮರ್ಸ್ ಪಾರ್ಸೆಲ್ ವಿತರಣೆಯನ್ನು ಕೈಗೆಟುಕುವ ದರದಲ್ಲಿ ಪೂರೈಸಲು ವಿಮಾನಯಾನ ಸಂಸ್ಥೆ  ಸ್ಪೈಸ್ ಜೆಟ್‌ನ ಸರಕು ಘಟಕವಾದ ಸ್ಪೈಸ್‌ಎಕ್ಸ್‌ಪ್ರೆಸ್‌ಗೆ  ಅನುಮತಿ ನೀಡಿತ್ತು. ಡಿಜಿಸಿಎ ನೀಡಿದ ಈ ಅನುಮೋದನೆಯ ನಂತರ, ಸ್ಪಾಸ್‌ಜೆಟ್ ಡ್ರೋನ್‌ಗಳ ಸಹಾಯದಿಂದ, ಇ-ಕಾಮರ್ಸ್‌ಗೆ ಪಾರ್ಸೆಲ್‌ಗಳು, ವೈದ್ಯಕೀಯ, ಫಾರ್ಮಾ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಡಗಿದೆ. ಈ ವಸ್ತುಗಳನ್ನು ಇದೀಗ ದೂರದ ಪ್ರದೇಶಗಳಲ್ಲಿ ತಲುಪಿಸಲು ಸಾಧ್ಯವಾಗುತ್ತಿದೆ.


ಇದನ್ನು ಓದಿ-ನಿಮ್ಮ ಬಳಿಯೂ ಡ್ರೋನ್ ಇದ್ದರೆ ಈಗಲೇ ನೋಂದಾಯಿಸಿ


ಏನಿದು BVLOS?
ಡ್ರೋನ್ ಉದ್ಯಮ ಕ್ಷೇತ್ರದಲ್ಲಿ BVLOS ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಗರಿಷ್ಠ ದಕ್ಷತೆಯೊಂದಿಗೆ ಹಾರಲು ಸಾಧ್ಯವಾಗುವಂತೆ ಜಗತ್ತಿನ ಅನೇಕ ದೇಶಗಳು ತಮ್ಮ ಡ್ರೋನ್ ನೀತಿಯನ್ನು ಪರಿಷ್ಕರಿಸುತ್ತಿವೆ. BVLOS ವಿಮಾನಗಳನ್ನು ಸಹ ದೃಶ್ಯ ವ್ಯಾಪ್ತಿಯನ್ನು ಮೀರಿ ಹಾರಿಸಬಹುದು. ಅಲ್ಲದೆ, ಇದು ಡ್ರೋನ್‌ಗಳಿಗೆ ಹೆಚ್ಚಿನ ದೂರವನ್ನು ಕ್ರಮಿಸಲು ಸಹಾಯ ಮಾಡುತ್ತದೆ. ಇದನ್ನು ಹಲವು ವಿಧಗಳಲ್ಲಿ ಬಳಸಬಹುದು ಮತ್ತು ಇದಕ್ಕೆ ಆರ್ಥಿಕವಾಗಿ ತುಂಬಾ ಕಡಿಮೆ ವೆಚ್ಚ ತಗುಲುತ್ತದೆ.


ಇದನ್ನು ಓದಿ-  ಡ್ರೋನ್ ಗಳು ನಿಮ್ಮದಾಗಬೇಕೇ? ಹಾಗಾದರೆ ನೀವು ಮಾಡಬೇಕಾಗಿರುವುದಿಷ್ಟು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.