190 ಅಡಿ ಎತ್ತರದಿಂದ ವ್ಯಕ್ತಿಯೊಬ್ಬರ ದೇಹದ ತಾಪಮಾನವನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಕಂಪನಿಯೊಂದು ಹೇಳಿಕೊಂಡಿದೆ. ಅಷ್ಟೇ ಅಲ್ಲ ಈ ರೀತಿ ತಾಪಮಾನ ಅಳೆಯುವ ಡ್ರೋನ್ ಅನ್ನು ಅಮೆರಿಕಾದ ಪೊಲೀಸರು ಟೆಸ್ಟ್ ಕೂಡ ನಡೆಸಿದ್ದಾರೆ ಎಂದು ಹೇಳಿರುವ ಕಂಪನಿ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇದು ತುಂಬಾ ಪರಿಣಾಮಕಾರಿಯಾಗಲಿದೆ ಎಂದಿದೆ.
ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಅಮೆರಿಕಾದ ಕನೆಕ್ಟಿಕಟ್ ನ ಪೊಲೀಸರು Draganfly ಹೆಸರಿನ ಕಂಪನಿ ತಯಾರಿಸಿರುವ ಈ ಡ್ರೋನ್ ಅನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಡ್ರ್ಯಾಗನ್ ಫ್ಲೈ, ಕೆನಡಾ ಮೂಲದ ಕಂಪನಿಯಾಗಿದ್ದು, ಕೇವಲ ಸಾರ್ವಜನಿಕ ಪ್ರದೇಶದಲ್ಲಿ ಮಾತ್ರವೇ ಈ ಡ್ರೋನ್ ಅನ್ನು ಬಳಸಬಹುದಾಗಿದ್ದು, ಜನರ ಖಾಸಗಿತನಕ್ಕೆ ಇದರಿಂದ ಯಾವುದೇ ರೀತಿಯ ಧಕ್ಕೆ ಉಂಟಾಗದು ಎಂದಿದೆ. ಅಷ್ಟೇ ಅಲ್ಲ ಈ ಡ್ರೋನ್ ನಲ್ಲಿ ಫೆಸಿಯಲ್ ರಿಕಗ್ನಿಶನ್ ಕೂಡ ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.
ಜನರಲ್ಲಿರುವ ಕಫ್ ಹಾಗೂ ಶೀನಿನ ಕುರಿತು ಕೂಡ ಪತ್ತೆ ಹಚ್ಚಬಹುದಾಗಿದೆ. ಈ ಡ್ರೋನ್ ನಲ್ಲಿ ವಿಶೇಷ ರೀತಿಯ ಸೆನ್ಸರ್ ಹಾಗೂ ಕಂಪ್ಯೂಟರ್ ವಿಶನ್ ಗಳನ್ನು ಅಳವಡಿಸಲಾಗಿದ್ದು, ಇದರಿಂದ ಹೃದಯ ಹಾಗೂ ಶ್ವಾಸದ ವೇಗದ ಕುರಿತು ಕೂಡ ಮಾಹಿತಿ ಪಡೆಯಬಹುದಾಗಿದೆ.
ಆದರೆ ಈ ಡ್ರೋನ್ ಜನರನ್ನು ಗುರುತಿಸುವುದಿಲ್ಲ. ಇದಕ್ಕೂ ಮೊದಲು ಈ ಡ್ರೋನ್ ಕುರಿತುಮಾರ್ಚ್ ನಲ್ಲಿ ಮಾಹಿತಿ ನೀಡಿದ್ದ ಕಂಪನಿ ಯುನಿವರ್ಸಿಟಿ ಆಫ್ ಸೌತ್ ಆಸ್ಟ್ರೇಲಿಯಾ ಜೊತೆ ಸೇರಿ ಒಂದು ವಿಶೇಷ ರೀತಿಯ ಡ್ರೋನ್ ತಯಾರಿಸುತ್ತಿರುವುದಾಗಿ ಹೇಳಿದ್ದು, ಇದನ್ನು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಬಳಸಬಹುದು ಎಂದು ಹೇಳಿತ್ತು.
ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಪಾಲಿಸುತ್ತಿದ್ದಾರೆ ಅಥವಾ ಇಲ್ಲವೇ ಎಂಬುದನ್ನೂ ಸಹ ಈ ಡ್ರೋನ್ ಪತ್ತೆ ಹಚ್ಚಬಹುದಾಗಿದ್ದು, ಸದ್ಯ ಇದನ್ನು ನ್ಯೂಯಾರ್ಕ್ ಪಟ್ಟಣದಲ್ಲಿಯೂ ಕೂಡ ಟೆಸ್ಟಿಂಗ್ ನಡೆಸಲಾಗಿದೆ.