ನವದೆಹಲಿ : PM Awas Yojana: ಪಿಎಂ ಆವಾಸ್ ಯೋಜನೆಯನ್ನು   ಮರು ಆರಂಭಿಸುವಂತೆ ಕೈಗಾರಿಕಾ ಸಂಸ್ಥೆ ಸಿಐಐ ಸರ್ಕಾರವನ್ನು ಒತ್ತಾಯಿಸಿದೆ. ಇದರ ಅಡಿಯಲ್ಲಿ, ಜೀವ ವಿಮೆಯ ಸೌಲಭ್ಯವನ್ನು ಕಡ್ಡಾಯಗೊಳಿಸಬೇಕು ಎಂದು ಸಿಐಐ ಕೋರಿದೆ. ಇದರೊಂದಿಗೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಫಲಾನುಭವಿಗಳಿಗೆ ಕಡ್ಡಾಯವಾಗಿ ವಿಮಾ ಸೌಲಭ್ಯವನ್ನು ಒದಗಿಸಬೇಕೆಂಬ ಬೇಡಿಕೆಯನ್ನು ಮುಂದಿಡಲಾಗಿದೆ. 


COMMERCIAL BREAK
SCROLL TO CONTINUE READING

ಎಲ್ಲರಿಗೂ ಮನೆ ವಿತರಿಸುವ ಯೋಜನೆ : 
ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana Benefits) ಅಡಿಯಲ್ಲಿ ದೇಶದ ಪ್ರತಿಯೊಬ್ಬರಿಗೂ  ಮನೆಯನ್ನು ನೀಡಲು ಸರ್ಕಾರ ಯೋಜಿಸಿದೆ. ಇದರ ಅಡಿಯಲ್ಲಿ, ಸಾಲಗಾರ ಸತ್ತರೆ ಅಥವಾ ದುರ್ಘಟನೆಯಿಂದಾಗಿ ಅಂಗವಿಕಲರಾದರೆ, ಆತನ ಮನೆಯ ಕನಸನ್ನು ನನಸಾಗಿಸಲು ಸಾಲದ ಜೊತೆಗೆ ಜೀವವಿಮೆಯ (life insurance) ಪ್ರಯೋಜನವನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.


ಇದನ್ನೂ ಓದಿ : UAN ನಂಬರ್ ಮರೆತಿದ್ದರೆ, online ಮೂಲಕವೇ ಮತ್ತೆ ಪಡೆದುಕೊಳ್ಳಬಹುದು, ಹೇಗೆ ತಿಳಿಯಿರಿ


ಸರ್ಕಾರದ ಕಾರ್ಯಗಳಲ್ಲಿ ಪ್ರಮುಖವಾದುದು :
ಪ್ರಧಾನ ಮಂತ್ರಿ ಆವಾಸ್ ಯೋಜನೆ PMAY ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.  ಇದರ ಅಡಿಯಲ್ಲಿ, ಕೇಂದ್ರ ಸರ್ಕಾರವು (Central government) 2022 ರ ವೇಳೆಗೆ  ಎಲ್ಲರಿಗೂ ವಸತಿ ಒದಗಿಸುವ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಈಡೇರಿಸಲು, ಸಿಐಐ ಸರ್ಕಾರದಿಂದ ಜೀವವಿಮೆಯ ಲಾಭವನ್ನು ಫಲಾನುಭವಿಗಳಿಗೆ ವಸತಿ ಯೋಜನೆಯೊಂದಿಗೆ ನೀಡುವಂತೆ ಒತ್ತಾಯಿಸಿದೆ.


ಸಿಐಐನ ಬೇಡಿಕೆ ಏನು?
ಸರ್ಕಾರವು CII ಈ ಬೇಡಿಕೆಯನ್ನು ಸ್ವೀಕರಿಸಿ, ಜೀವ ವಿಮೆಯೊಂದಿಗೆ ಯೋಜನೆಯನ್ನು ಪ್ರಾರಂಭಿಸಿದರೆ, ಅದು ಫಲಾನುಭವಿಗಳಿಗೆ ಸಿಗುವ ಅತಿ ದೊಡ್ಡ ಸೌಲಭ್ಯವಾಗಲಿದೆ. ಇಲ್ಲಿಯವರೆಗೆ ಈ ಯೋಜನೆಯಲ್ಲಿ ಸಾಲ ಪಡೆಯುವ ವ್ಯಕ್ತಿಗೆ ಯಾವುದೇ ರೀತಿಯ ರಕ್ಷಣೆಯ ಸೌಲಭ್ಯವಿಲ್ಲ. ಸಾಲದೊಂದಿಗೆ ಇನ್ ಬಿಲ್ಟ್ ವಿಮಾ ಯೋಜನೆಯ ಅವಕಾಶವೂ ಇಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸಾಲದೊಂದಿಗೆ, ವಿಮೆಯ ಲಾಭವನ್ನು ಪಡೆದರೆ, ಪ್ರತಿಕೂಲ ಸಂದರ್ಭಗಳಲ್ಲಿ ಮನೆಯ ವೆಚ್ಚವೂ ಮುಂದುವರಿಯುತ್ತದೆ ಮತ್ತು ಮನೆ ನಿರ್ಮಾಣದ ಕೆಲಸ ನಿಲ್ಲುವುದಿಲ್ಲ ಎನ್ನುವುದು ಸಿಐಐ ಅಭಿಪ್ರಾಯ.


ಇದನ್ನೂ ಓದಿ Good News:Diwali Bonus ಜೊತೆಗೆ ಸಿಗಲಿದೆ 18 ತಿಂಗಳ DA Arrears! ಶೀಘ್ರದಲ್ಲಿಯೇ ಮೋದಿ ಸರ್ಕಾರದ ಘೋಷಣೆ ಸಾಧ್ಯತೆ


ಜೀವ ವಿಮೆಯ ಲಾಭಗಳು :
ಸಿಐಐ ಡೈರೆಕ್ಟರ್ ಜನರಲ್ ಚಂದ್ರಜಿತ್ ಬ್ಯಾನರ್ಜಿ ಹೇಳಿದರು, "ಪಿಎಂಎವೈ ಯೋಜನೆಯನ್ನು ಮರುಪ್ರಾರಂಭಿಸುವ ಅವಶ್ಯಕತೆಯಿದೆ, ಇದರೊಂದಿಗೆ ಕ್ರೆಡಿಟ್ ಲಿಂಕ್ಡ್ ವಿಮೆ (credit linked insurance) ಅಥವಾ ಮೂಲಭೂತವಾಗಿ ಜೀವ ವಿಮೆಯನ್ನು ಪ್ರತಿ ಸಾಲಗಾರರಿಗೂ ವಿಸ್ತರಿಸಬಹುದು. ಸಾಲಗಾರನ ಸಾವು ಅಥವಾ ಅಂಗವೈಕಲ್ಯದ ಕಾರಣ ಮನೆಯ ನಿರ್ಮಾಣ ಕಾರ್ಯ ನಿಲ್ಲುವುದಿಲ್ಲ. ಜೀವ ವಿಮೆ ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ದೇಶದಲ್ಲಿ ತ್ವರಿತ ಅಭಿವೃದ್ಧಿಗಾಗಿ, ಅಗ್ಗದ ಮನೆಗಳನ್ನು ಒದಗಿಸುವುದು ಅತಿದೊಡ್ಡ ಅಗತ್ಯವಾಗಿದೆ. 


ಕೊರೊನಾ ಸಮಯದಲ್ಲಿ ಹೆಚ್ಚಿನ ವಿಮೆ ಅಗತ್ಯವಿದೆ :
ಕರೋನಾ (Coronavirus) ಅವಧಿಯಲ್ಲಿ ಜನರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಎರಡನೇ ಅಲೆಯ ವೇಳೆ ಸಾವಿನ ಸಂಖೆಯಲ್ಲಿ ತ್ವರಿತ ಏರಿಕೆ ಕಂಡು ಬಂದಿತ್ತು. ಇಂತಹ ಪರಿಸ್ಥಿತಿಯಲ್ಲಿ, ಹಣಕಾಸಿನ ನೆರವು ಬಹಳ ಅಗತ್ಯವಾಗಿದೆ. PMAY ಯೋಜನೆಯೊಂದಿಗೆ ಜೀವ ವಿಮೆಯ ಲಾಭವನ್ನು ನೀಡುವ ಮೂಲಕ ಆರ್ಥಿಕವಾಗಿ ತೊಂದರೆಗೊಳಗಾದ ಜನರು ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು. ಯೋಜನೆಯಡಿಯಲ್ಲಿ, ಸರ್ಕಾರವು ಬಯಸಿದಲ್ಲಿ ಜೀವ ವಿಮೆಗೆ ಪ್ರಮಾಣಿತ ಪ್ರೀಮಿಯಂ ಅನ್ನು ನಿಗದಿಪಡಿಸಬಹುದು. ಈ ಮೂಲಕ, ವಿಮಾ ಕಂಪನಿಯು PM ಆವಾಸ್ ಯೋಜನೆಯ ಫಲಾನುಭವಿಗಳಿಗೆ ಕ್ರೆಡಿಟ್ ಕವರ್ (credit cover) ನೀಡಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.