ಪ್ರಧಾನಿ ಮೋದಿ 18 ಗಂಟೆ ಕೆಲಸ ಮಾಡುತ್ತಿರುವುದು ಯಾರಿಗಾಗಿ?: ಕಾಂಗ್ರೆಸ್

ದೇಶದಲ್ಲಿ ಜನಸಾಮಾನ್ಯರು ಬದುಕಲೇಬಾರದೆಂದು ಪ್ರಧಾನಿ ಮೋದಿ ತೀರ್ಮಾನಿಸಿದಂತಿದೆ ಅಂತಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Written by - Zee Kannada News Desk | Last Updated : Oct 2, 2021, 12:33 PM IST
  • ಜನರನ್ನು ಈ ಮಟ್ಟಿಗೆ ಲೂಟಿಗೈದು ಯಾವ ಸಾಧನೆ ಮಾಡಲು ಹೊರಟಿದ್ದಾರೆ ಪ್ರಧಾನಿ ಮೋದಿಯವರು?
  • ಪ್ರಧಾನಿ ಮೋದಿ 18 ಗಂಟೆ ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್
  • ಭಾರತ ಬಡವಾಗಿದೆ, ಮೋದಿ ಗೆಳೆಯರು ಸಿರಿವಂತರಾಗಿದ್ದಾರೆ ಎಂದು ವ್ಯಂಗ್ಯವಾಗಿ ಟೀಕಿಸಿದ ಕಾಂಗ್ರೆಸ್
ಪ್ರಧಾನಿ ಮೋದಿ 18 ಗಂಟೆ ಕೆಲಸ ಮಾಡುತ್ತಿರುವುದು ಯಾರಿಗಾಗಿ?: ಕಾಂಗ್ರೆಸ್ title=
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಆಕ್ರೋಶ (Photo Courtesy:@Zee News)

ಬೆಂಗಳೂರು: ಬೆಲೆ ಏರಿಕೆ ವಿಚಾರವಾಗಿ ಪ್ರಧಾನಿ ಮೋದಿ(Narendra Modi) ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪ್ರಧಾನಿ ನರೇಂದ್ರ ಮೋದಿಯವರು 18 ಗಂಟೆ ಕೆಲಸ ಮಾಡುತ್ತಿರುವುದು ಯಾರಿಗಾಗಿ ಎಂದು ಬಿಜೆಪಿಯನ್ನು ವ್ಯಂಗ್ಯವಾಗಿ ಪ್ರಶ್ನಿಸಿದೆ.

‘ಇಂದು ಬಂದ ಎರಡು ‘ಏರಿಕೆ’ ಸುದ್ದಿಗಳು. ಉದ್ಯಮಿ ಗೌತಮ್ ಅದಾನಿ(Gautam Adani) ಆಸ್ತಿಯಲ್ಲಿ ಶೇ.261ರಷ್ಟು ಏರಿಕೆ! ಅದೇ ರೀತಿ ಗ್ಯಾಸ್ ಬೆಲೆಯಲ್ಲಿ ಶೇ.62ರಷ್ಟು  ಏರಿಕೆ! ಹೀಗಾಗಿ ಪ್ರಧಾನಿ ಮೋದಿಯವರು 18 ಗಂಟೆ ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ?’ ಅಂತಾ ಬಿಜೆಪಿಗೆ ಪ್ರಶ್ನಿಸುವ ಮೂಲಕ ಕಾಂಗ್ರೆಸ್(Congress) ಟೀಕಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದುವರಿದ ದುರಂತಗಳ ಸರಣಿ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ..!

‘ಆಡಳಿತ ನಡೆಸುವವರಿಗೆ ದೇಶದ ಜನರ ಕಷ್ಟ ನಷ್ಟಗಳನ್ನು ಅರಿಯುವ ಹೃದಯವಿರಬೇಕು. ಜನರನ್ನು ಈ ಮಟ್ಟಿಗೆ ಲೂಟಿಗೈದು ಯಾವ ಸಾಧನೆ ಮಾಡಲು ಹೊರಟಿದ್ದಾರೆ ಪ್ರಧಾನಿ ಮೋದಿ(Narendra Modi)ಯವರು? ಪ್ರತಿನಿತ್ಯ ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುತ್ತಾ ಸಾಗುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನರ ಅಳಲು ಕೇಳುವ ಕನಿಷ್ಠ ಪ್ರಜ್ಞೆ ಇಲ್ಲವಾಗಿದ್ದು ದುರಂತ’ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿದೆ.

Congress-2.jpg

ತನ್ನ ಮತ್ತೊಂದು ಟ್ವೀಟ್ ನಲ್ಲಿ ‘ದೇಶದಲ್ಲಿ ಏರಿಕೆ ಪರ್ವ(Price Hike) ನಡೆಯುತ್ತಿದೆ! ಜನಸಾಮಾನ್ಯರಿಗೆ ದರ ಏರಿಕೆ, ಅದಾನಿ ಅಂಬಾನಿಗಳ ಸಂಪಾದನೆ ಏರಿಕೆ, ದೇಶದ ಸಾಲ ಏರಿಕೆ, ನಿರುದ್ಯೋಗ ಏರಿಕೆ, ಬಡತನ ಏರಿಕೆ. ನೈಸರ್ಗಿಕ ಅನಿಲ ದರ ಏಕಾಏಕಿ ಶೇ.62ರಷ್ಟು ಏರಿಸಿದ ಪರಿಣಾಮ ರಸಗೊಬ್ಬರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಲಿದೆ. ದೇಶದಲ್ಲಿ ಜನಸಾಮಾನ್ಯರು ಬದುಕಲೇಬಾರದೆಂದು ಪ್ರಧಾನಿ ಮೋದಿ ತೀರ್ಮಾನಿಸಿದಂತಿದೆ’ ಅಂತಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Congress-1.jpg

ಇದನ್ನೂ ಓದಿ: BMTC Bus: ಬೆಂಗಳೂರಿನಲ್ಲಿ ಬಸ್ ಸಂಚಾರ ಹೆಚ್ಚಳಕ್ಕೆ ಬಿಎಂಟಿಸಿ ನಿರ್ಧಾರ

‘ಭಾರತ ಬಡವಾಗಿದೆ, ಮೋದಿ(PM Modi) ಗೆಳೆಯರು ಸಿರಿವಂತರಾಗಿದ್ದಾರೆ. ಭಾರತದ ಆಸ್ತಿ ಮಾರಲಾಗುತ್ತಿದೆ, ಮೋದಿ ಗೆಳೆಯರ ಆಸ್ತಿ ಬೆಳೆಯುತ್ತಿದೆ. ಬಡವಾದ ಭಾರತವನ್ನು ಅದಾನಿ, ಅಂಬಾನಿಗೆ ಅಡ ಇಡಲಾಗುತ್ತಿದೆ! ಜನತೆ ಬಡವರಾಗಿರುವುದಷ್ಟೇ ಅಲ್ಲ, ಸರ್ಕಾರದ ಖಜಾನೆಯೂ ಖಾಲಿ, ಆದರೆ ಉದ್ಯಮಿಗಳು ಹೇಗೆ ಬೆಳೆದರು ಎಂದು ಜನತೆ ಯೋಚಿಸಿದರೆ ಮೋದಿಯವರ ಆಡಳಿತ ಅರ್ಥವಾಗಲಿದೆ’ ಅಂತಾ ಕಾಂಗ್ರೆಸ್ ಮತ್ತೊಂದು ಟ್ವೀಟ್ ನಲ್ಲಿ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News