PM Awas Yojana: ಪಿಎಂ ಅವಾಜ್ ಯೋಜನೆಯಲ್ಲಿನ ಹೊಸ ಬದಲಾವಣೆಯನ್ನು ತಿಳಿದುಕೊಳ್ಳಿ, ಇಲ್ಲವಾದರೆ ಸಿಗುವುದಿಲ್ಲ ಮನೆ
ಯೋಜನೆಯಿಂದ ಪಡೆದಿರುವ ಮನೆಗಳನ್ನು ಬಳಸಿದ್ದೀರೋ ಇಲ್ಲವೋ ಎಂಬುದನ್ನು ಸರ್ಕಾರವು ಐದು ವರ್ಷಗಳ ಕಾಲ ನೋಡುತ್ತದೆ.
ನವದೆಹಲಿ : PM Awas Yojana: ಪ್ರಧಾನಮಂತ್ರಿ ಆವಾಜ್ ಯೋಜನೆಯ ನಿಯಮಗಳಲ್ಲಿ ಸರ್ಕಾರವು ದೊಡ್ಡ ಬದಲಾವಣೆ ಮಾಡಿದೆ. ಈ ಹೊಸ ನಿಯಮ ಗೊತ್ತಿಲ್ಲದಿದ್ದರೆ, ನಿಮಗೆ ಬಿಡುಗಡೆಯಾದ ಮನೆಯನ್ನು ತಡೆಹಿಡಿಯಬಹುದು. ಈ ಯೋಜನೆಯಲ್ಲಿ ಮನೆಯನ್ನು ಪಡೆದರೆ, ಆ ಮನೆಯಲ್ಲಿ ಐದು ವರ್ಷಗಳ ಕಾಲ ಉಳಿಯುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದರೆ ನಿಮಗೆ ಬಿಡುಗಡೆ ಮಾಡಿರುವ ಮನೆಯನ್ನು ರದ್ದುಗೊಳಿಸಲಾಗುವುದು.
PM ಆವಾಸ್ ಯೋಜನೆಯ ನಿಯಮಗಳಲ್ಲಿ ಬದಲಾವಣೆ :
ಯೋಜನೆಯಿಂದ (PM Awas Yojana) ಪಡೆದಿರುವ ಮನೆಗಳನ್ನು ಬಳಸಿದ್ದೀರೋ ಇಲ್ಲವೋ ಎಂಬುದನ್ನು ಸರ್ಕಾರವು ಐದು ವರ್ಷಗಳ ಕಾಲ ನೋಡುತ್ತದೆ. ಆ ಮನೆಯಲ್ಲಿ ನೀವು ವಾಸಿಸುತ್ತಿದ್ದರೆ ಈ ಒಪ್ಪಂದವನ್ನು ಲೀಸ್ ಡೀಡ್ (lease deed) ಆಗಿ ಪರಿವರ್ತಿಸಲಾಗುತ್ತದೆ. ಇಲ್ಲದಿದ್ದರೆ ಅಭಿವೃದ್ಧಿ ಪ್ರಾಧಿಕಾರವು ನಿಮ್ಮೊಂದಿಗೆ ಮಾಡಿಕೊಂಡ ಒಪ್ಪಂದವನ್ನು ತಕ್ಷಣ ರದ್ದುಗೊಳಿಸುತ್ತದೆ. ಹೀಗೆ ಒಪ್ಪಂದ ರದ್ದು ಮಾಡಿದರೆ, ಠೇವಣಿ ಮಾಡಿದ ಮೊತ್ತವನ್ನು ಕೂಡಾ ಮರುಪಾವತಿಸಲಾಗುವುದಿಲ್ಲ.
ಇದನ್ನೂ ಓದಿ : FD :ನೀವು ಎಫ್‌ಡಿಗಳಲ್ಲಿ ಹೂಡಿಕೆ ಮಾಡಿದ್ದೀರಾ? ಹಾಗಿದ್ರೆ ನಿಮಗಿಲ್ಲಿದೆ ಬ್ಯಾಡ ನ್ಯೂಸ್!
ಫ್ಲ್ಯಾಟ್‌ಗಳು ಕೂಡಾ ಫ್ರೀ ಹೋಲ್ಡ್ ಆಗಿರುವುದಿಲ್ಲ :
ಇದರ ಹೊರತಾಗಿ, ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ನಗರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಫ್ಲ್ಯಾಟ್‌ಗಳು ಎಂದಿಗೂ ಫ್ರೀ ಹೋಲ್ಡ್ (free hold) ಆಗಿರುವುದಿಲ್ಲ. ಐದು ವರ್ಷಗಳ ನಂತರವೂ ಜನರು ಲೀಸ್ ಮೇಲೆಯೇ ಇರಬೇಕಾಗುತ್ತದೆ. ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಮನೆಯನ್ನು ಪಡೆದು, ಆ ಮನೆಯನ್ನು ಬಾಡಿಗೆಗೆ ನೀಡುತ್ತಿದ್ದವರ ವ್ಯವಹಾರ ಇನ್ನು ಮುಂದೆ ನಿಂತು ಹೋಗಲಿದೆ.
ಇದನ್ನೂ ಓದಿ : WhatsAppನಲ್ಲಿ ಕೇವಲ 5 ನಿಮಿಷಗಳಲ್ಲಿ ಸಿಗಲಿದೆ ೧೦ ಲಕ್ಷ ರೂ. ಗಳ ಸಾಲ, ತಕ್ಷಣ ಹೀಗೆ ಅರ್ಜಿ ಸಲ್ಲಿಸಿ
ನಿಯಮಗಳು ಏನು ಹೇಳುತ್ತವೆ ? :
ಇದರೊಂದಿಗೆ, ಹಂಚಿಕೆದಾರ ಸತ್ತರೆ, ನಂತರ ನಿಯಮಗಳ ಪ್ರಕಾರ, ಗುತ್ತಿಗೆಯನ್ನು ಕುಟುಂಬದ ಸದಸ್ಯರಿಗೆ ಮಾತ್ರ ವರ್ಗಾಯಿಸಲಾಗುತ್ತದೆ. ಕೆಡಿಎ (KDA) ಯಾವುದೇ ಇತರ ಕುಟುಂಬದೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. ಈ ಒಪ್ಪಂದದ ಪ್ರಕಾರ, ಹಂಚಿಕೆದಾರರು 5 ವರ್ಷಗಳವರೆಗೆ ಮನೆಗಳನ್ನು ಬಳಸಬೇಕಾಗುತ್ತದೆ. ಇದರ ನಂತರ ಮನೆಗಳ ಗುತ್ತಿಗೆಯನ್ನು ಮರುಸ್ಥಾಪಿಸಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ