Jan-Dhan Update: ಜನ್-ಧನ್ ಖಾತೆದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ
Pradhan Mantri Jan-Dhan Yojana: ಜನ್ ಧನ್ ಖಾತೆದಾರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನಗಾಂವ್ನಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ (ಡಿಬಿಯು) ಆನ್‌ಲೈನ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಸ್ತುತ ಬಡವರ ಜನ್ ಧನ್ ಬ್ಯಾಂಕ್ ಖಾತೆಗಳಲ್ಲಿ 1.75 ಲಕ್ಷ ಕೋಟಿ ರೂ.ಇರಿಸಲಾಗಿದೆ ಎಂದು ಹೇಳಿದ್ದಾರೆ.
PM Jan-Dhan Yojana Update: ನೀವು ಸಹ ಜನ್ ಧನ್ ಖಾತೆ ಹೊಂದಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಈ ಕುರಿತು ಮಾತನಾಡಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ, ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳ ಮೂಲಕ ಫಲಾನುಭವಿಗಳಿಗೆ ಇದುವರೆಗೆ 25 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ. ಅಂದರೆ, ದೇಶದಲ್ಲಿ ಈ ಯೋಜನೆಯ ಫಲಾನುಭವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಸಚಿವರು ನೀಡಿದ ಮಾಹಿತಿ ಏನು
ಪ್ರಧಾನಿ ನರೇಂದ್ರ ಮೋದಿ ಅವರು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ (ಡಿಬಿಯು) ಆನ್‌ಲೈನ್ ಉದ್ಘಾಟನೆಯ ಸಂದರ್ಭದಲ್ಲಿ, ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಜನಾಂವ್‌ನಲ್ಲಿ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಸಬ್ಸಿಡಿಗಳ ಅಡಿಯಲ್ಲಿ ಫಲಾನುಭವಿಗಳಿಗೆ ಈ ಖಾತೆಗಳ ಮೂಲಕ ಹಣವನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ, ಈ 50 ಕೋಟಿ ಜನ್-ಧನ್ ಖಾತೆಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಸೇರಿವೆ ಎಂದು ಸಚಿವರು ಮಾಹಿತಿಯನ್ಬ್ನು ಹಂಚಿಕೊಂಡಿದ್ದಾರೆ.
ಜನ್-ಧನ್ ಖಾತೆಗಳಲ್ಲಿ 1.75 ಲಕ್ಷ ಕೋಟಿ ರೂ.
ಈ ಸಂದರ್ಭದಲ್ಲಿ ಪ್ರಸ್ತುತ ಬಡವರ ಜನ್ ಧನ್ ಬ್ಯಾಂಕ್ ಖಾತೆಗೆ 1.75 ಲಕ್ಷ ಕೋಟಿ ಜಮಾ ಆಗಿದೆ ಎಂದು ಕೇಂದ್ರ ಸಚಿವ ರೆಡ್ಡಿ ಹೇಳಿದ್ದಾರೆ. 'ಜನ್-ಧನ್ ಖಾತೆಗಳನ್ನು ತೆರೆಯುವಾಗ, ನಮ್ಮ ದೇಶದಲ್ಲಿ ಇದು ಅಗತ್ಯವಿದೆಯೇ ಎಂದು ಜನರು ಪ್ರಶ್ನೆಗಳನ್ನು ಎತ್ತುತ್ತಿದ್ದರು. ಇಂದು ನಾವು ಜನ್ ಧನ್ ಖಾತೆಗಳ ಮೂಲಕ ಬಡ ಜನರಿಗೆ ಕಲ್ಯಾಣ ಯೋಜನೆಗಳಿಗಾಗಿ 25 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಿದ್ದೇವೆ ಮತ್ತು ಇದೊಂದು ಸಾಧನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-SBI ಗ್ರಾಹಕರಿಗೆ ಬಿಗ್ ಶಾಕ್, ಸಾಲದ EMI ಬಡ್ಡಿ ಹೆಚ್ಚಿಸಿದ ಬ್ಯಾಂಕ್!
ಪ್ರಧಾನಿ ಮೋದಿಯಿಂದ ಉದ್ಘಾಟನೆ
ಮಹತ್ವದ ಸಂಗತಿಯೆಂದರೆ, ಜಮ್ಮು ಮತ್ತು ಕಾಶ್ಮೀರದ 2 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಸೇರಿದಂತೆ ಒಟ್ಟು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ್ದಾರೆ. ಇದರ ನಂತರ ನೀವು ಇನ್ನು ಮುಂದೆ ಉಳಿತಾಯ ಖಾತೆ ತೆರೆಯಲು, ಪಾಸ್‌ಬುಕ್ ಮುದ್ರಿಸಲು, ಎಫ್‌ಡಿಯಲ್ಲಿ ಹೂಡಿಕೆ ಮಾಡಲು, ಸಾಲಕ್ಕೆ ಅರ್ಜಿ ಸಲ್ಲಿಸಲು, ಕ್ರೆಡಿಟ್ / ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ. ನೀವು ಮನೆಯ ಹತ್ತಿರದಲ್ಲಿಯೇ ಈ ಉತ್ತಮ ಸೌಲಭ್ಯವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ-PM Kisan: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತು ಬಂತು, ತಕ್ಷಣ ಖಾತೆ ಪರಿಶೀಲಿಸಿ
ಬಜೆಟ್ ನಲ್ಲಿ ಘೋಷಣೆಯಾಗಿತ್ತು
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸುವಾಗ ದೇಶಾದ್ಯಂತ 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ದೇಶ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ತೆರೆಯಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದರು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.