PM Jandhan Account: ಪ್ರಧಾನಿ ಜನ್ ಧನ್ ಯೋಜನೆ ಎನ್‌ಡಿಎ ಸರ್ಕಾರದ ಅತ್ಯಂತ ಅದ್ಭುತ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿಯಲ್ಲಿ, ನೀವು ಅಂಚೆ ಕಚೇರಿ ಮತ್ತು ಯಾವುದೇ ಸರ್ಕಾರಿ ಅಥವಾ ಖಾಸಗಿ ಬ್ಯಾಂಕಿನಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯಬಹುದು. ಪ್ರಧಾನಿ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಜನ ಧನ್ ಯೋಜನೆ  (Jandhan Yojna) ಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ ಜೀರೋ ಬ್ಯಾಲೆನ್ಸ್ ಖಾತೆ ತೆರೆಯಲು ಎಲ್ಲರಿಗೂ ಅವಕಾಶ ಕಲ್ಪಿಸಲಾಯಿತು.  ಆದರೆ, ಈಗ ಹೊಸ ವಿಷಯ ಹೊರಹೊಮ್ಮಿದೆ. ಜನ ಧನ್ ಖಾತೆದಾರರು ಇದರ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗಿದೆ. ಶೂನ್ಯ ಬ್ಯಾಲೆನ್ಸ್ ಗಾಗಿ ಈ ಖಾತೆದಾರರಿಂದ ಬ್ಯಾಂಕ್ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಈ ಖಾತೆಯಲ್ಲಿ ಒಂದು ಮಿತಿಯವರೆಗೆ ಮಾತ್ರ ವಹಿವಾಟು ಉಚಿತವಾಗಿರುತ್ತದೆ.  ನೀವು ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದರೆ ಬ್ಯಾಂಕುಗಳು ನಿಮಗೆ ಶುಲ್ಕ ವಿಧಿಸುತ್ತವೆ.


COMMERCIAL BREAK
SCROLL TO CONTINUE READING

ಜನ ಧನ್ ಯೋಜನೆ ಅಡಿಯಲ್ಲಿ ಖಾತೆ ತೆರೆದ ಜನ ಧನ್ (Jandhan) ಖಾತೆದಾರರಿಗೆ 4 ಬಾರಿ ಉಚಿತ ವಹಿವಾಟು ಸೌಲಭ್ಯವನ್ನು ಒದಗಿಸಲಾಗಿದೆ. ಹೆಚ್ಚಿನ ವಹಿವಾಟುಗಳಿಗಾಗಿ, ಖಾತೆದಾರನು ಪ್ರತಿ ವಹಿವಾಟಿಗೆ 20 ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ, ಬ್ಯಾಂಕ್ ಯುಪಿಐ ಅಥವಾ ಇನ್ನಾವುದೇ ಡಿಜಿಟಲ್ ಮಾರ್ಗದ ಮೂಲಕ ನಡೆಸುವ ವಹಿವಾಟುಗಳನ್ನು ಸಹ ಇದರಲ್ಲಿ ಸೇರಿಸಲಾಗುತ್ತಿದೆ. 


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಯಮಗಳ ಪ್ರಕಾರ, ಬಿಎಸ್‌ಬಿಡಿಎ ಖಾತೆದಾರರಿಂದ ಅಂತಹ ಯಾವುದೇ ಶುಲ್ಕವನ್ನು ತೆಗೆದುಕೊಳ್ಳಬಾರದು. ಆದಾಗ್ಯೂ, ಬ್ಯಾಂಕುಗಳು ಅನಿಯಂತ್ರಿತವಾಗಿ ಹಾಗೆ ಮಾಡುತ್ತಿವೆ. ಐಐಟಿ ಬಾಂಬೆಯ ಪ್ರಾಧ್ಯಾಪಕರ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.  


ಇದನ್ನೂ ಓದಿ - ʼಉಳಿತಾಯ ಖಾತೆʼಯನ್ನ ʼಜನ ಧನ್‌ ಖಾತೆʼಯಾಗಿ ಪರಿವರ್ತಿಸಿದ್ರೆ ಏನೆಲ್ಲಾ ಲಾಭವಿದೆ ಗೊತ್ತಾ?


ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (SBI) ಪ್ರತಿ ವಹಿವಾಟಿಗೆ 17.70 ರೂ. ಶುಲ್ಕ ವಿಧಿಸುತ್ತಿದೆ. ಎಸ್‌ಬಿಐ 2014-15ನೇ ಸಾಲಿನಿಂದ 2019-20ರವರೆಗಿನ 5 ವರ್ಷಗಳಲ್ಲಿ ಸುಮಾರು 12 ಕೋಟಿ ಬಿಎಸ್‌ಬಿಡಿಎ ಖಾತೆದಾರರಿಂದ ಸುಮಾರು 300 ಮಿಲಿಯನ್ ರೂಪಾಯಿಗಳನ್ನು ವಸೂಲಿ ಮಾಡಿದೆ. ಅದೇ ಸಮಯದಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಅವಧಿಯಲ್ಲಿ 3.9 ಕೋಟಿ ಬಿಎಸ್ಬಿಡಿಎ ಖಾತೆದಾರರಿಂದ 9.9 ಕೋಟಿ ರೂ. ವಸೂಲಿ ಮಾಡಿದೆ ಎಂದು ತಿಳಿದುಬಂದಿದೆ.


ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಜನ ಧನ್ ಖಾತೆದಾರರ ಸಂಖ್ಯೆ 42 ಕೋಟಿ ಮೀರಿದೆ. ಈ ಪೈಕಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ 33.23 ಕೋಟಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ 7.52 ಕೋಟಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ 1.25 ಕೋಟಿ ತೆರೆಯಲಾಗಿದೆ. ಜನ ಧನ್ ಖಾತೆ ಹೊಂದಿರುವ ಒಟ್ಟು ಮಹಿಳೆಯರ ಸಂಖ್ಯೆ 23.27 ಕೋಟಿ.


ಇದನ್ನೂ ಓದಿ - JanDhan ಖಾತೆಯಲ್ಲಿ ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಲು ಈ ವಿಧಾನ ಅನುಸರಿಸಿ


ನೀವು ಜನ ಧನ್ ಖಾತೆಯನ್ನು ಹೊಂದಿದ್ದರೆ, ಅಗತ್ಯವಿರುವ ಸಮಯದಲ್ಲಿ ನೀವು ಖಾತೆಯಿಂದ 10,000 ರೂಪಾಯಿಗಳನ್ನು ಹಿಂಪಡೆಯಬಹುದು. ಇದಕ್ಕಾಗಿ, ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ ಸಹ, ನೀವು ಹಣವನ್ನು ಹಿಂಪಡೆಯಬಹುದು. ಈ ಸೌಲಭ್ಯವನ್ನು ಓವರ್‌ಡ್ರಾಫ್ಟ್ ಮೂಲಕ ನೀಡಲಾಗುತ್ತದೆ. ಆದರೆ, ಇದಕ್ಕಾಗಿ ನೀವು ಕೆಲವು ತಿಂಗಳು ಜನ ಧನ್ ಖಾತೆಯನ್ನು ಸರಿಯಾಗಿ ನಿರ್ವಹಿಸಬೇಕು. ಹಿಂದಿನ ಜನ ಧನ್ ಯೋಜನೆಯಲ್ಲಿ ಓವರ್‌ಡ್ರಾಫ್ಟ್ ಮಿತಿ 5000 ರೂ. ಆಗಿದ್ದು, ಈಗ ಅದನ್ನು 10,000 ರೂ.ಗಳಿಗೆ ಹೆಚ್ಚಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.