PM Kisan 12th Installment: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ, ಅಕ್ಟೋಬರ್ 17 ರಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ನೇ ಕಂತನ್ನು ಬಿಡುಗಡೆ ಮಾಡಿದರು. ನವದೆಹಲಿಯ ಪುಸಾ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ "ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022" ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ ಯೋಜನೆಯ  12ನೇ ಕಂತಾಗಿ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂ. ಹಣವನ್ನು ವರ್ಗಾಯಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸರ್ಕಾರ ಇದುವರೆಗೆ 2 ಲಕ್ಷ ಕೋಟಿಗೂ ಹೆಚ್ಚು ಖರ್ಚು ಮಾಡಿದೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

11 ನೇ ಕಂತಿನಲ್ಲಿ 21 ಸಾವಿರ ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ:
ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಯೋಜನೆಯಲ್ಲಿ ಯಾವುದೇ ರೀತಿಯ ವಂಚನೆಯನ್ನು ತಡೆಯಲು ಸರ್ಕಾರವು ಇ-ಕೆವೈಸಿ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಿದೆ.  ಆದರೆ ನಿಗದಿತ ಸಮಯಕ್ಕೆ ಇ-ಕೆವೈಸಿ ಪೂರ್ಣಗೊಳಿಸದ ಕಾರಣ ಕೋಟಿಗಟ್ಟಲೆ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಿಲ್ಲ. ಒಂದು ಅಂಕಿ ಅಂಶದ ಪ್ರಕಾರ ಸುಮಾರು 2.5 ಕೋಟಿ ರೈತರ ಖಾತೆಗೆ 2000 ರೂಪಾಯಿ ಕಂತು ಕಳುಹಿಸಿಲ್ಲ. 


ಇದನ್ನೂ ಓದಿ- EPFO Insurance : PF ಖಾತೆದಾರರೆ ತಕ್ಷಣ ಈ ಕೆಲಸ ಮಾಡಿ, ನಿಮಗೆ ₹7 ಲಕ್ಷ ಸಿಗುತ್ತೆ!


16 ಸಾವಿರ ಕೋಟಿ ಬಿಡುಗಡೆ:
ವಾಸ್ತವವಾಗಿ, 11 ನೇ ಕಂತಾಗಿ, 21 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಸರ್ಕಾರವು ರೈತರ ಖಾತೆಗಳಿಗೆ ವರ್ಗಾಯಿಸಿದೆ. ಆದರೆ, ಅ.17ರಂದು 12ನೇ ಕಂತಾಗಿ 16 ಸಾವಿರ ಕೋಟಿ ಬಿಡುಗಡೆಯಾಗಿದೆ. ಅಂದರೆ, 11ನೇ ಕಂತಿಗಿಂತ 12ನೇ ಕಂತಿನಲ್ಲಿ 5 ಸಾವಿರ ಕೋಟಿ ರೂಪಾಯಿ ಕಡಿಮೆ ಹಣ ವರ್ಗಾವಣೆಯಾಗಿದೆ. ಅಂದರೆ ಈ ಬಾರಿ 2.50 ಕೋಟಿ ರೈತರ ಖಾತೆಗಳಿಗೆ ಕಂತು ಕಳುಹಿಸಿಲ್ಲ. ಪಿಎಂ ಕಿಸಾನ್‌ನ ಅಧಿಕೃತ ಪೋರ್ಟಲ್‌ನಲ್ಲಿ 12 ಕೋಟಿಗೂ ಹೆಚ್ಚು ರೈತರ ನೋಂದಣಿ ಇದೆ ಮತ್ತು 16 ಸಾವಿರ ಕೋಟಿ ಎಂದರೆ ಎಂಟು ಕೋಟಿ ರೈತರು ಮಾತ್ರ ಹಣವನ್ನು ಪಡೆದಿದ್ದರೆ, ಇನ್ನೂ ನಾಲ್ಕು ಕೋಟಿ ರೈತರು ಸರ್ಕಾರದ ಈ ಯೋಜನೆಯ ಲಾಭ ಪಡೆಯುವಲ್ಲಿ ವಿಫಲರಾಗಿದ್ದಾರೆ.


ಇದನ್ನೂ ಓದಿ-  PM Kisan: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತು ಬಂತು, ತಕ್ಷಣ ಖಾತೆ ಪರಿಶೀಲಿಸಿ


ಒಂದೇ ಒಂದು ತಪ್ಪಿನಿಂದ ಪಿಎಂ ಕಿಸಾನ್ ಲಾಭ ಪಡೆಯದ ನಾಲ್ಕು ಕೋಟಿ ರೈತರು:
ವಾಸ್ತವವಾಗಿ, ಈ ಮೊದಲೇ ಸರ್ಕಾರ ಸ್ಪಷ್ಟಪಡಿಸಿದಂತೆ ಇ-ಕೆವೈಸಿ ಪೂರ್ಣಗೊಳಿಸದ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಕಂತಿನ ಹಣವನ್ನು ವರ್ಗಾಯಿಸಲಾಗಿಲ್ಲ. ಇ-ಕೆವೈಸಿ ಪೂರ್ಣಗೊಳಿಸದ ಒಂದೇ ಒಂದು ತಪ್ಪಿನಿಂದಾಗಿ ನಾಲ್ಕು ಕೋಟಿ ರೈತರಿಗೆ ಪಿಎಂ ಕಿಸಾನ್ 12ನೇ ಕಂತಿನ ಹಣ ಸಿಕ್ಕಿಲ್ಲ.ನೀವೂ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದಲ್ಲಿ, ಇನ್ನೂ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸದಿದ್ದಲ್ಲಿ ಈಗಲೇ ಈ ಕೆಲಸ ಮಾಡಿ. ಸರ್ಕಾರದ ಯೋಜನೆಯ ಲಾಭ ಪಡೆಯಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.