PM Kisan: ನಾಳೆಯಿಂದ ರೈತರ ಖಾತೆಗೆ ಸೇರಲಿದೆ 2000 ರೂಪಾಯಿ
PM Kisan Yojana: ಒಂದು ಕಡೆ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಮೋದಿ ಸರ್ಕಾರ ರೈತರ ಖಾತೆಗಳಿಗೆ 2-2 ಸಾವಿರ ರೂಪಾಯಿಗಳನ್ನು ವರ್ಗಾಯಿಸಲಿದೆ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಯೋಜನೆಯ 7 ನೇ ಕಂತನ್ನು ನಾಳೆ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi) ಯೋಜನೆಯ ಮುಂದಿನ ಕಂತನ್ನು ಡಿಸೆಂಬರ್ 25 ಶುಕ್ರವಾರ ಬಿಡುಗಡೆ ಮಾಡಲಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಅಂದರೆ ನಾಳೆ 2000 ರೂಪಾಯಿಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು.
9 ಕೋಟಿ ರೈತರ ಖಾತೆಗಳಲ್ಲಿ ಹಣ ಬರಲಿದೆ:
ಪ್ರಧಾನಿ ಕಚೇರಿ (ಪಿಎಂಒ) ನೀಡಿರುವ ಮಾಹಿತಿಯ ಪ್ರಕಾರ, ಒಂದು ಗುಂಡಿಯನ್ನು ಒತ್ತುವ ಮೂಲಕ ಪಿಎಂ ಮೋದಿ ಅವರು ದೇಶದ 9 ಕೋಟಿ ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi) ಯೋಜನೆಯ ಫಲಾನುಭವಿ ರೈತ ಕುಟುಂಬಗಳಿಗೆ 18 ಸಾವಿರ ಕೋಟಿಗೂ ಹೆಚ್ಚು ಹಣವನ್ನು ವರ್ಗಾಯಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೋದಿ ಆರು ರಾಜ್ಯಗಳ ರೈತರೊಂದಿಗೆ ಸಂವಹನ ನಡೆಸಲಿದ್ದಾರೆ.
ರೈತರ ಚಳವಳಿಯ ನಡುವೆ ಕಾರ್ಯಕ್ರಮ:
ದೆಹಲಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಹಣ ವರ್ಗಾವಣೆ ನಡೆಯುತ್ತಿದೆ. ಹಲವಾರು ಹಂತದ ಮಾತುಕತೆಗಳ ನಂತರವೂ ಸರ್ಕಾರ ಮತ್ತು ರೈತ ಸಂಘಗಳ ನಡುವಿನ ಸಭೆ ಯಶಸ್ವಿಯಾಗಿಲ್ಲ. ಈ ಕಾನೂನು ತಮ್ಮ ಹಿತಾಸಕ್ತಿಗಾಗಿಯೇ ಎಂದು ರೈತರಿಗೆ ಮನವರಿಕೆ ಮಾಡಲು ಸರ್ಕಾರ ಪದೇ ಪದೇ ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ನಾಳೆ ಪಿಎಂ ಮೋದಿಯವರು 6 ರಾಜ್ಯಗಳ ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ. ಇದರಲ್ಲಿ ರೈತರ ಅನುಕೂಲಕ್ಕಾಗಿ ಸರ್ಕಾರ ನಡೆಸುತ್ತಿರುವ ಯೋಜನೆಗಳ ಬಗ್ಗೆ ರೈತರು ತಮ್ಮ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.
ಇದನ್ನೂ ಓದಿ: PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ
ಈವರೆಗೆ 2 ಕೋಟಿ ರೈತರು ನೋಂದಾಯಿಸಿಕೊಂಡಿದ್ದಾರೆ:
ಪ್ರಧಾನಿ ಮೋದಿ ಮತ್ತು ರೈತರ ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಡಿಸೆಂಬರ್ 25 ರಂದು 9 ಕೋಟಿ ಕುಟುಂಬಗಳಿಗೆ ತಮ್ಮ ಖಾತೆಗಳಲ್ಲಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಭಾಗವಾಗಿ 18 ಸಾವಿರ ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗುವುದು ಎಂದು ಹೇಳಿದರು. ಈ ಆನ್‌ಲೈನ್ ಕಾರ್ಯಕ್ರಮಕ್ಕಾಗಿ ನಿನ್ನೆ ಸಂಜೆಯವರೆಗೆ 2 ಕೋಟಿ ರೈತರು ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: PM Kisan: ಪಟ್ಟಿಯಿಂದ 2 ಕೋಟಿ ರೈತರ ಹೆಸರನ್ನು ಕೈಬಿಟ್ಟ ಸರ್ಕಾರ
ರೈತರ ಖಾತೆಗೆ ಹಣ:
ರೈತರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸುತ್ತದೆ. ವಾರ್ಷಿಕವಾಗಿ ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ಸರ್ಕಾರವು ಪಿಎಂ ಕಿಸಾನ್ (PM Kisan) ಸಮ್ಮನ್ ನಿಧಿ ಯೋಜನೆಯ ಮೂರನೇ ಕಂತನ್ನು ಬಿಡುಗಡೆ ಮಾಡುತ್ತದೆ. ಸರ್ಕಾರದಿಂದ ಬಿಡುಗಡೆಯಾಗಿರುವ ಈ 7ನೇ ಕಂತನ್ನು ಪಡೆಯಲು ಕೋಟ್ಯಂತರ ರೈತರು (Farmers) ಕಾಯುತ್ತಿದ್ದಾರೆ. ಆದರೆ ಇನ್ನೂ ಕೆಲವರ ಖಾತೆಗೆ ಈ ಹಣ ಜಮಾ ಆಗಿಲ್ಲ. ಈ ಯೋಜನೆಯಡಿಯಲ್ಲಿ ಇನ್ನೂ ಸಹ ಹಣ ನಿಮ್ಮ ಬ್ಯಾಂಕ್ ಖಾತೆಗೆ ತಲುಪದಿದ್ದರೆ ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂಬುದನ್ನು ತಿಳಿಯುವುದು ಮುಖ್ಯ.
ಇದನ್ನೂ ಓದಿ: PM Kisan nidhi status: ನಿಮ್ಮ ಖಾತೆಗೆ ಹಣ ಇನ್ನೂ ಬಂದಿಲ್ಲವೇ, ತಕ್ಷಣ ಹೀಗೆ ಮಾಡಿ
ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ (PM Kisan Samman Nidhi Yojana) ಯಡಿ ರಾಜ್ಯ ಸರ್ಕಾರವು ನಿಮ್ಮ ಆದಾಯ ದಾಖಲೆ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಪರಿಶೀಲಿಸಿದ ಬಳಿಕ ನಿಮಗೆ ಹಣ ಸಿಗುತ್ತದೆ. ರಾಜ್ಯ ಸರ್ಕಾರವು ನಿಮ್ಮ ದಾಖಲೆಯನ್ನು ಪರಿಶೀಲಿಸುವವರೆಗೆ ನಿಮಗೆ ಇದರ ಲಾಭ ದೊರೆಯುವುದಿಲ್ಲ. ರಾಜ್ಯ ಸರ್ಕಾರ ನಿಮ್ಮ ದಾಖಲೆಗಳನ್ನು ಪರಿಶೀಲಿಸಿದ ನಂತರ ಎಫ್‌ಟಿಒ ಉತ್ಪತ್ತಿಯಾಗುತ್ತದೆ ಮತ್ತು ಕೇಂದ್ರ ಸರ್ಕಾರವು ಹಣವನ್ನು ಖಾತೆಗೆ ಹಾಕುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.