ನವದೆಹಲಿ : PM Kisan Samman Yojana: ವರ್ಷದ ಕೊನೆಯ ತಿಂಗಳು ಅಂದರೆ ಡಿಸೆಂಬರ್ ರೈತರಿಗೆ ಸಿಹಿ ಸುದ್ದಿಯನ್ನು ತರುತ್ತಿದೆ. ಬಹಳ ದಿನಗಳಿಂದ ಪಿಎಂ ಕಿಸಾನ್ ಯೋಜನೆಯ 10ನೇ ಕಂತಿಗಾಗಿ (PM Kisan 10th Installment) ಕಾಯುತ್ತಿರುವ ರೈತರ ಖಾತೆಗೆ ಈ ತಿಂಗಳಲ್ಲಿಯೇ 2000 ರೂಪಾಯಿ ಬಂದು ಸೇರಲಿದೆ. ಈ ಯೋಜನೆಯಡಿ ಇದುವರೆಗೆ 9 ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದೆ. ಡಿಸೆಂಬರ್ 15ರೊಳಗೆ ಸರ್ಕಾರ 10ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಡಿಸೆಂಬರ್‌ನಲ್ಲಿ ರೈತರಿಗೆ ಸಿಗಲಿದೆ ಉಡುಗೊರೆ  :
ರೈತರ ಆರ್ಥಿಕ ಸ್ಥಿತಿ ಮತ್ತು ಅವರ ಆದಾಯವನ್ನು (Farmer income) ಸುಧಾರಿಸಲು ಕೇಂದ್ರ ಸರ್ಕಾರವು ವಾರ್ಷಿಕವಾಗಿ 6000 ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ಕಳುಹಿಸುತ್ತದೆ. ಇದುವರೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ (PM Kisan Samman Yojana) 9 ಕಂತುಗಳ ಹಣ ರೈತರ ಖಾತೆಗೆ ಬಂದಿದೆ. ಈಗ ಮುಂದಿನ ಅಂದರೆ 10ನೇ ಕಂತಿನ ಹಣ ಮುಂದಿನ ತಿಂಗಳಲ್ಲಿ ರೈತರ ಖಾತೆ ಸೇರಲಿದೆ.  


ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಧಮಾಕ ಆಫರ್! ಫ್ಲೈಟ್ ಬುಕ್ಕಿಂಗ್‌ನಲ್ಲಿ 2500 ರೂ.ವರೆಗೆ ಸಿಗಲಿದೆ ರಿಯಾಯಿತಿ


ಯೋಜನೆಯ ಉದ್ದೇಶ ಏನು ?
ಈ ಯೋಜನೆಯ ಉದ್ದೇಶವು ದೇಶದ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ ನೀಡುವುದು. ಮುಂದಿನ ಕಂತಿನ ನಿರೀಕ್ಷೆಯಲ್ಲಿರುವ ರೈತರಿಗೆ ಮುಂದಿನ ತಿಂಗಳಿನಲ್ಲಿ ಮತ್ತೆ ಶುಭ ಸುದ್ದಿ ಸಿಗಲಿದೆ. ನೀವು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು. 


ನಿಮ್ಮ ಕಂತಿನ​ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ 
1. ನಿಮ್ಮ ಕಂತಿನ  ಸ್ಟೇಟಸ್ ಅನ್ನು ನೋಡಲು, ಮೊದಲು ವೆಬ್‌ಸೈಟ್‌ಗೆ ಭೇಟಿ ನೀಡಿ 
2. ಇದರ ನಂತರ ಬಲಭಾಗದಲ್ಲಿರುವ  Farmers Corner ಮೇಲೆ ಕ್ಲಿಕ್ ಮಾಡಿ.
3. ಈಗ Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ಹೊಸ ಪುಟ ತೆರೆದುಕೊಳ್ಳುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ (Aadhaar) , ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಕಂತು ಸ್ಟೇಟಸ್  ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. 


ಇದನ್ನೂ ಓದಿ : Plateform Ticket Price: ಜನರಿಗೆ ಬಿಗ್ ರಿಲೀಫ್ ನೀಡಿದ ರೈಲ್ವೆ, ಪ್ಲಾಟ್ ಫಾರಂ ಟಿಕೆಟ್ ದರ ಇಳಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.