ಯಾವಾಗ ರೈತರ ಖಾತೆಗೆ ಕ್ರೆಡಿಟ್ ಆಗಲಿದೆ ಪಿಎಂ ಕಿಸಾನ್ 10ನೇ ಕಂತಿಕನ ಹಣ? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರವು ನೋಂದಾಯಿತ ಬ್ಯಾಂಕ್ ಖಾತೆಯಲ್ಲಿ,  ನೇರವಾಗಿ DBT ಮೂಲಕ ಹಣವನ್ನು ವರ್ಗಾಯಿಸುತ್ತದೆ. ಆದರೆ ಅನೇಕ ಬಾರಿ ಕೆಲವು ಸಣ್ಣ ತಪ್ಪುಗಳಿಂದ ರೈತರ ಖಾತೆಗೆ ಹಣ ಬರುವುದಿಲ್ಲ.

Written by - Ranjitha R K | Last Updated : Nov 19, 2021, 05:40 PM IST
  • ಮುಂದಿನ ತಿಂಗಳು ರೈತರಿಗೆ ಒಳ್ಳೆಯ ಸುದ್ದಿ ಸಿಗಲಿದೆ
  • ಡಿ.15ರಂದು ರೈತರ ಖಾತೆಗೆ 10ನೇ ಕಂತಿನ ಹಣ ಸೇರಲಿದೆ
  • ಆದರೆ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ
ಯಾವಾಗ ರೈತರ ಖಾತೆಗೆ ಕ್ರೆಡಿಟ್ ಆಗಲಿದೆ ಪಿಎಂ ಕಿಸಾನ್ 10ನೇ ಕಂತಿಕನ ಹಣ? ಇಲ್ಲಿದೆ ಮಾಹಿತಿ title=
pm kisan(file photo)

ನವದೆಹಲಿ : ಮುಂದಿನ ತಿಂಗಳು ರೈತರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಅವರ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan samman Nidhi) ಯೋಜನೆಯ ಹಣವನ್ನು ವರ್ಗಾಯಿಸಲಿದೆ. ಡಿ.15ರಂದು ರೈತರ ಖಾತೆಗೆ  10ನೇ ಕಂತಿನ ಹಣ ಸೇರಲಿದೆ.  ಕೇಂದ್ರ ಸರ್ಕಾರವು ನೋಂದಾಯಿತ ಬ್ಯಾಂಕ್ ಖಾತೆಯಲ್ಲಿ (Bank account),  ನೇರವಾಗಿ DBT ಮೂಲಕ ಹಣವನ್ನು ವರ್ಗಾಯಿಸುತ್ತದೆ. ಆದರೆ ಅನೇಕ ಬಾರಿ ಕೆಲವು ಸಣ್ಣ ತಪ್ಪುಗಳಿಂದ ರೈತರ ಖಾತೆಗೆ ಹಣ ಬರುವುದಿಲ್ಲ. ಹಾಗಾಗಿ ಈ ತಪ್ಪುಗಳನ್ನು ಸಮಯಕ್ಕೆ ಸರಿಪಡಿಸಬೇಕು. 

ಕೇಂದ್ರ ಸರ್ಕಾರವು ಕಳೆದ ವರ್ಷ  ಡಿಸೆಂಬರ್ 25 2020 ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan Nidhi yojana) ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಿತ್ತು. ಇಲ್ಲಿಯವರೆಗೆ, ಸರ್ಕಾರವು ದೇಶದ 11.37 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ (Farmer bank account)1.58 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಿದೆ. 

ಇದನ್ನೂ ಓದಿ : Business Idea: ಸ್ವಂತ ವ್ಯಾಪಾರ ಆರಂಭಿಸಿ, ಸಂಪಾದಿಸಿ 15 ಲಕ್ಷಗಳವರೆಗೆ ಆದಾಯ

 ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ಮುಂದಿನ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗೆ ಬರಲಿದೆ. ರೈತರು ಹತ್ತನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಡಿಸೆಂಬರ್ 15 ರಂದು ರೈತರ ಖಾತೆ ಸೇರಲಿದೆ. 

ಪಿಎಂ ಕಿಸಾನ್ ಐಡಿ ಕಾರ್ಡ್ - ಪಿಎಂ ಕಿಸಾನ್ ಐಡಿ ಕಾರ್ಡ್ :
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ರೈತರಿಗೆ ಪಿಎಂ ಕಿಸಾನ್ ಗುರುತಿನ ಚೀಟಿ ನೀಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ . ಅರ್ಹ ರೈತರು ಮಾತ್ರ ರಾಜ್ಯದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಡ್ ಅನ್ನು ರೈತರ ಭೂ ದಾಖಲೆಗಳನ್ನು ಲಿಂಕ್ ಮಾಡಲಾಗುತ್ತದೆ.

ಇದನ್ನೂ ಓದಿ : LPG Subsidy Status: LPG ಸಬ್ಸಿಡಿಯನ್ನು ನಿಮ್ಮ ಖಾತೆಗೆವರ್ಗಾಯಿಸಲಾಗಿದೆಯೇ? ಈ ರೀತಿ ಪರಿಶೀಲಿಸಿ

ಯಾವ ರೈತರಿಗೆ 4000 ರೂಪಾಯಿ ಸಿಗುತ್ತದೆ :
ಇನ್ನು 9ನೇ ಕಂತಿನ ಹಣ ಸಿಗದ ರೈತರ ಎರಡು ಕಂತಿನ ಹಣ ಅವರ ಖಾತೆಗೆ ಸೇರುತ್ತದೆ ಅಂದರೆ 4000 ರೂಪಾಯಿ ಅವರ ಖಾತೆಗೆ ಜಮಾ ಆಗಲಿದೆ. ಆದರೆ, ಸೆಪ್ಟೆಂಬರ್ 30 ರ ಮೊದಲು ನೋಂದಾಯಿಸಿದ ರೈತರಿಗೆ ಮಾತ್ರ ಈ ಪ್ರಯೋಜನ ಲಭ್ಯವಿರುತ್ತದೆ.

ನಿಮಗೆ ಹಣ ಸಿಗುತ್ತದೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಹೇಗೆ ?
ನೀವು ಪಿಎಂ ಕಿಸಾನ್ ಯೋಜನೆಗಾಗಿ ನೋಂದಾಯಿಸಿಕೊಂಡಿದ್ದರೆ, ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ಮುಖ್ಯವಾಗಿದೆ.

ಇದನ್ನೂ ಓದಿ :World's Most Expensive Bike: ಇದುವೇ ವಿಶ್ವದ ಅತ್ಯಂತ ದುಬಾರಿ ಬೈಕ್, ಬೆಲೆ ಕೇಳಿ ನಿಮಗೂ ಶಾಕ್ ಆಗಬಹುದು

1.ಮೊದಲಿಗೆ ನೀವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಬೇಕು.
2.ಅದರ ಮುಖಪುಟದಲ್ಲಿ, Farmers Corner  ಆಯ್ಕೆಯನ್ನು ನೋಡುತ್ತೀರಿ.
3. Farmers Corner   ವಿಭಾಗದಲ್ಲಿ, Beneficiaries List ಆಯ್ಕೆಯನ್ನು ಕ್ಲಿಕ್ ಮಾಡಬೇಕು.
4. ನಂತರ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು.
5. ಇದರ ನಂತರ Get Report  ಮೇಲೆ ಕ್ಲಿಕ್ ಮಾಡಬೇಕು. ಇಷ್ಟಾದ  ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಕಂತಿನ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ :
1.ವೆಬ್‌ಸೈಟ್ ತಲುಪಿದ ನಂತರ, ಬಲಭಾಗದಲ್ಲಿರುವ Farmers Corne ಮೇಲೆ ಕ್ಲಿಕ್ ಮಾಡಿ.
2.ಅದರ ನಂತರ Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ,
3.ಅದರ ನಂತರ ಹೊಸ ಪುಟ ತೆರೆಯುತ್ತದೆ.
4.ಈಗ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ.
5. ಇದರ ನಂತರ ನಿಮ್ಮ ಸ್ಟೇಟಸ್ ಮಾಹಿತಿಯನ್ನು ಪಡೆದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News