Kisan Kalyana Yojana: ಪ್ರಧಾನ್ ಮಂತ್ರಿ ಕಿಸಾನ್ ಸಮೃದ್ಧಿ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ 6,000 ರೂಪಾಯಿಗಳನ್ನು ನೀಡಲಾಗುತ್ತದೆ. ಇದೀಗ ಮಧ್ಯ ಪ್ರದೇಶ ಸರ್ಕಾರ, ಕಿಸಾನ್-ಕಲ್ಯಾಣ ಯೋಜನೆ ಅಡಿಯಲ್ಲಿ ರೈತರಿಗೆ 6 ಸಾವಿರ ರೂಪಾಯಿಗಳ ನೆರವನ್ನು ಘೋಷಿಸಿದ್ದು ಈ ರಾಜ್ಯದ ರೈತರಿಗೆ ವಾರ್ಷಿಕವಾಗಿ 12 ಸಾವಿರ ರೂ.ಗಳು ದೊರೆಯಲಿವೆ. 


COMMERCIAL BREAK
SCROLL TO CONTINUE READING

ಮಧ್ಯ ಪ್ರದೇಶದ ರಾಜ್‌ಗಢ್ ಜಿಲ್ಲೆಯಲ್ಲಿ ನಡೆದ ಕಿಸಾನ್-ಕಲ್ಯಾಣ ಮಹಾಕುಂಭವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಇನ್ನು ಮುಂದೆ ರೈತ ಬಂಧುಗಳಿಗೆ 10 ಸಾವಿರ ರೂಪಾಯಿಗಳ ಬದಲಿಗೆ 12 ಸಾವಿರ  ರೂ.ಗಳು ಲಭ್ಯವಾಗಲಿವೆ. ಇದಕ್ಕಾಗಿ ಮುಖ್ಯಮಂತ್ರಿ ಕಿಸಾನ್-ಕಲ್ಯಾಣ ಯೋಜನೆಯಡಿ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡಲಿದೆ ಎಂದು ಘೋಷಿಸಿದರು. 


ಇದನ್ನೂ ಓದಿ- ʼಪ್ಯಾನ್ ಕಾರ್ಡ್ʼ ಫೋಟೋ ಮತ್ತು ʼಸಹಿʼಯಲ್ಲಿ ಸಮಸ್ಯೆ ಇದೆಯೇ..? ಹೀಗೆ ಅಪ್‌ಡೇಟ್‌ ಮಾಡಿ


ವಾಸ್ತವವಾಗಿ, ಮಧ್ಯ ಪ್ರದೇಶದ ರೈತರಿಗೆ ಇದುವರೆಗೆ ಮುಖ್ಯಮಂತ್ರಿ ಕಿಸಾನ್-ಕಲ್ಯಾಣ ಯೋಜನೆಯಡಿ 4 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಇದಲ್ಲದೆ, ಪಿಎಂ ಕಿಸಾನ್ ಯೋಜನೆಯಡಿ 6,000 ರೂ.ಗಳನ್ನು ನೀಡಲಾಗುತ್ತಿತ್ತು. 


ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಈ ಘೋಷಣೆಯಿಂದಾಗಿ, ಈ ರಾಜ್ಯದ ರೈತ ಬಂಧುಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ವಾರ್ಷಿಕವಾಗಿ ನೀಡುವ 6 ಸಾವಿರ ರೂ.ಗಳನ್ನು ಒಳಗೊಂಡಂತೆ ಪ್ರತಿ ವರ್ಷ 12,000 ರೂ.ಗಳ ಆರ್ಥಿಕ ನೆರವು ದೊರೆಯಲಿದೆ. 


ಇದನ್ನೂ ಓದಿ- ಇನ್ನೇನು 3 ದಿನಗಳಲ್ಲಿ ಭಾರೀ ಅಗ್ಗದ ಬೆಲೆಗೆ ಚಿನ್ನ ಮಾರಾಟ: ಒಂದಲ್ಲ ಎರಡು ಬಾರಿ ಸಿಗಲಿದೆ ವಿಶೇಷ ಅವಕಾಶ


ರೈತರ ಖಾತೆಗೆ 6 ಸಾವಿರದ 423 ಕೋಟಿ ರೂ.:
ಇಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸಿಎಂ ಶಿವರಾಜ್ ಸಿಂಗ್ ಚೌಹಾಣ್  ಒಂದೇ ಕ್ಲಿಕ್‌ನಲ್ಲಿ ಮುಖ್ಯಮಂತ್ರಿ ರೈತರ ಬಡ್ಡಿ ಮನ್ನಾ ಯೋಜನೆ-2023ರ ಅಡಿಯಲ್ಲಿ 11 ಲಕ್ಷ ರೈತರ 2 ಸಾವಿರದ 123 ಕೋಟಿ ರೂ.ಗಳ ರೈತರ ಸಾಲದ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದಲ್ಲದೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ 44 ಲಕ್ಷ 49 ಸಾವಿರ ರೈತರ ಖಾತೆಗೆ  2 ಸಾವಿರದ 900 ಕೋಟಿ ರೂ.ಗಳು, ಮುಖ್ಯಮಂತ್ರಿ ಕಿಸಾನ್-ಕಲ್ಯಾಣ ಯೋಜನೆಯಡಿ ರೈತರ ಖಾತೆಗೆ 70 ಲಕ್ಷ 61 ಸಾವಿರ ರೈತರ ಖಾತೆಗೆ 1 ಸಾವಿರದ 400 ಕೋಟಿ ರೂ.ಗಳು ಈ ರೀತಿಯಾಗಿ ಒಟ್ಟು 6 ಸಾವಿರದ 423 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಯಿತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.