PM Kisan: ನೀವು ನವೆಂಬರ್ ಕಂತನ್ನು ಪಡೆಯುವ ಮೊದಲು ಈ ಕೆಲಸ ಮಾಡಿ, ಇಲ್ಲವೇ...
ಪಿಎಂ ಕಿಸಾನ್ ಯೋಜನೆಯಲ್ಲಿ ನಿಮ್ಮ ಈ ತಿಂಗಳ ಕಂತನ್ನು ಪಡೆಯುವ ಮೊದಲು ಈ ಸಮಸ್ಯೆಗಳನ್ನು ಸರಿಪಡಿಸಿ, ಇಲ್ಲವೇ ನಿಮ್ಮ ಖಾತೆಗೆ ಹಣ ಬರದೇ ಇರಬಹುದು.
ನವದೆಹಲಿ: PM Kisan Samman Nidhi: ಆಗಸ್ಟ್ 9ರಂದು ಕೇಂದ್ರ ಸರ್ಕಾರವು ದೇಶದ 8.5 ಕೋಟಿ ರೈತರ (Farmers) ಖಾತೆಗೆ 17,000 ಕೋಟಿ ರೂ.ಗಳನ್ನು ವರ್ಗಾಯಿಸಿತು. ಆದರೆ ನಿಮ್ಮ ಖಾತೆಯಲ್ಲಿ ಹಣ ವರ್ಗಾವಣೆ ಆಗದಿದ್ದರೆ ನಿಮ್ಮ ಖಾತೆಯಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂಬುದನ್ನು ಮೊದಲು ಪರಿಶೀಲಿಸಿ. ಪಿಎಂ ಕಿಸಾನ್ (PM Kisan) ಯೋಜನೆಯಲ್ಲಿ ನವೆಂಬರ್ ಕಂತು ಬಿಡುಗಡೆಯಾಗುವ ಮೊದಲು ಈ ಸಮಸ್ಯೆಗಳನ್ನು ಸರಿಪಡಿಸಿ, ಇದರಿಂದ ನೀವು ಈ ಯೋಜನೆಯ ಲಾಭ ಪಡೆಯಬಹುದು.
ನಿಮ್ಮ ತಪ್ಪುಗಳನ್ನು ಸರಿಪಡಿಸಿ:
ನಿಮ್ಮ ಯಾವುದೇ ಒಂದು ಡಾಕ್ಯುಮೆಂಟ್‌ನಲ್ಲಿ ಕೊರತೆಯಿದ್ದರೆ ಅಥವಾ ನಿಮ್ಮ ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಲ್ಲಿನ ವ್ಯತ್ಯಾಸದಿಂದಾಗಿ ಖಾತೆಯಲ್ಲಿ ಹಲವು ಬಾರಿ ಹಣವನ್ನು ವರ್ಗಾಯಿಸಲಾಗುವುದಿಲ್ಲ. ಆದ್ದರಿಂದ ನೀವು ಅಂತಹ ಅಡಚಣೆಯನ್ನು ಸರಿಪಡಿಸಬೇಕು. ನಂತರವಷ್ಟೇ ನೀವು ನವೆಂಬರ್ ಕಂತು ಪಡೆಯಬಹುದು.
PM Kisan: ಯಾವುದೇ ಕಾರಣದಿಂದ ರೈತರ ಖಾತೆಗೆ ರೂ.2000 ಬರದಿದ್ದರೆ ಚಿಂತೆ ಬಿಟ್ಟು ಈ ಕೆಲಸ ಮಾಡಿ..
ಡೀಟೇಲ್ಸ್ ನವೀಕರಿಸಿ :
ಪಿಎಂ-ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ (https://pmkisan.gov.in/). ಅದರ ಫಾರ್ಮರ್ ಕಾರ್ನರ್‌ಗೆ ಹೋಗಿ ಮತ್ತು ಎಡಿಟ್ ಮಾಡಿ ಆಧಾರ್ ವಿವರಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ನೀವು ಇಲ್ಲಿ ನಮೂದಿಸಿ. ಇದರ ನಂತರ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸಲ್ಲಿಸಿ.
ಆನ್‌ಲೈನ್‌ನಲ್ಲಿ ಹೆಸರನ್ನು ಸರಿಪಡಿಸಿ:
ನಿಮ್ಮ ಹೆಸರು ಮಾತ್ರ ತಪ್ಪಾಗಿದ್ದರೆ ಅಂದರೆ ಅಪ್ಲಿಕೇಶನ್ ಮತ್ತು ಆಧಾರ್‌ನಲ್ಲಿ ನಿಮ್ಮ ಹೆಸರು ವಿಭಿನ್ನವಾಗಿರುತ್ತದೆ, ನಂತರ ನೀವು ಅದನ್ನು ಆನ್‌ಲೈನ್‌ನಲ್ಲಿ ಸರಿಪಡಿಸಬಹುದು. ಬೇರೆ ಏನಾದರೂ ತಪ್ಪು ಇದ್ದರೆ ಅದನ್ನು ನಿಮ್ಮ ಕೃಷಿ (Agriculture) ಇಲಾಖೆ ಕಚೇರಿಯಲ್ಲಿ ಸಂಪರ್ಕಿಸಿ.
ಪಿಎಂ ಕಿಸಾನ್ ಯೋಜನೆಯಲ್ಲಿ 6000 ರೂ.ಗಳ ಹೊರತಾಗಿ ರೈತರಿಗೆ ಸಿಗಲಿದೆ 3 ದೊಡ್ಡ ಪ್ರಯೋಜನ
ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು :
ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೆ, ನೀವು ನಿಮ್ಮ ಅಕೌಂಟೆಂಟ್, ಕನುಂಗೊ ಮತ್ತು ಜಿಲ್ಲಾ ಕೃಷಿ ಅಧಿಕಾರಿಗಳೊಂದಿಗೆ ಮಾತನಾಡಬಹುದು. ಅಲ್ಲಿ ನಿಮಗೆ ಯಾವುದೇ ಮಾಹಿತಿ ಸಿಗದಿದ್ದರೆ ನೀವು ಕೇಂದ್ರ ಕೃಷಿ ಸಚಿವಾಲಯದ ಸಹಾಯವಾಣಿ ಸಂಖ್ಯೆಯ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು. ನೀವು ಪಿಎಂ-ಕಿಸಾನ್ ಸಹಾಯವಾಣಿ 155261 ಅಥವಾ ಟೋಲ್ ಫ್ರೀ 1800115526 ಅನ್ನು ಸಂಪರ್ಕಿಸಬಹುದು. ಇದಲ್ಲದೆ ನೀವು ಸಚಿವಾಲಯದ ಈ ಸಂಖ್ಯೆಯನ್ನು (011-23381092) ಸಹ ಸಂಪರ್ಕಿಸಬಹುದು.
ಅಧಿಕೃತ ಸೈಟ್ :
ಪಿಎಂ-ಕಿಸಾನ್ ಸಮ್ಮನ್ ನಿಧಿ (PM KISAN SAMMAN NIDHI) ಯೋಜನೆ ನಿಧಿಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು www.yojanagyan.in ಕ್ಲಿಕ್ ಮಾಡಿ ನಿಮಗೆ ಅಗತ್ಯವಾದ ಮಾಹಿತಿ ಪಡೆಯಬಹುದು.