ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿ ಲಾಕ್ ಡೌನ್ ಅವಧಿಯಲ್ಲಿ ಅಂದರೆ ಮಾರ್ಚ್ 24 ರಿಂದ ಇದಿವರೆಗೆ ಸುಮಾರು 19,350.84 ಕೋಟಿ ರೂ. ಸಹಾಯ ಒದಗಿಸಲಾಗಿದೆ. ಯೋಜನೆ ಆರಂಭವಾದಾಗಿನಿಂದ ಇದುವರೆಗೆ ರೈತರಿಗೆ ಒಟ್ಟು ಐದು ಕಂತುಗಳ ಹಣ ಪಾವತಿಸಲಾಗಿದೆ. ಆದರೆ, ಹೆಸರು ನೊಂದಾಯಿಸಿದರೂ ಕೂಡ ಹಲವು ರೈತರ ಖಾತೆಗೆ ಹಣ ಬಂದಿಲ್ಲ. ರಿಜಿಸ್ಟ್ರೇಶನ್ ಮಾಡುವಾಗ ನೀಡುವ ಮಾಹಿತಿಯಲ್ಲಿ ಸಣ್ಣ-ಪುಟ್ಟ ತಪ್ಪುಗಳಿದ್ದರೆ ಈ ರೀತಿ ಆಗಿರುತ್ತದೆ. ಹೀಗಾಗಿ ಸರ್ಕಾರ ನೊಂದಣಿಯ ವೇಳೆ ಆಗುವ ಈ ಸಣ್ಣ-ಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡುತ್ತದೆ. ಆದರೆ, ತಪ್ಪುಗಳನ್ನು ತಿದ್ದಿದ ಬಳಿಕ ಹಳೆ ಕಂತುಗಳ ಹಣ ವಾಪಸ್ ಬರಲಿದೆಯೇ? ಎಂಬ ಪ್ರಶ್ನೆ ಹಲವು ರೈತರನ್ನು ಕಾಡುತ್ತದೆ. ಇದೀಗ ಈ ಕುರಿತು ಚಿಂತಿಸುವ ಅವಶ್ಯಕತೆ ಇಲ್ಲ. ಏಕೆಂದರೆ ತಪ್ಪುಗಳನ್ನು ತಿದ್ದುಪಡಿ ಮಾಡಿದ ಬಳಿಕ ನಿಮ್ಮ ಮುಂದಿನ ಕಂತಿನ ಜೊತೆಗೆ ಹಳೆ ಕಂತುಗಳ ಹಣ ಕೂಡ ನಿಮ್ಮ ಖಾತೆಗೆ ಪಾವತಿಯಾಗುತ್ತದೆ.
ಖುದ್ದು ಸರ್ಕಾರವೇ ಈ ಕುರಿತು ಮಾಹಿತಿ ನೀಡಿದೆ
ಹೌದು, ಈ ಕುರಿತು ಸರ್ಕಾರವೇ ಒಂದು ಪ್ರಕಟಣೆಯನ್ನು ಹೊರಡಿಸಿ ನಿಮ್ಮ ಹಳೆ ಕಂತುಗಳ ಹಣ ನಿಮ್ಮ ಖಾತೆಗೆ ಪಾವತಿಯಾಗಲಿದೆ ಎಂದು ಹೇಳಿದ್ದು, ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ ನೀವು ಇದನ್ನು ಪರಿಶೀಲಿಸಬಹುದು.
https://pmkisan.gov.in/Documents/RevisedFAQ.pdf
ಇದರರ್ಥ ಒಂದು ವೇಳೆ ಯಾವುದೇ ಲಾಭಾರ್ಥಿಗಳ ಹೆಸರು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ವತಿಯಿಂದ PM ಕಿಸಾನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಲಾಗಿದ್ದು, ಅವರಿಗೆ ಕಾರಣಾಂತರದಿಂದ ಕಳೆದ ನಾಲ್ಕು ಕಂತುಗಳ ಸಹಾಯಧನ ತಲುಪದೇ ಇದ್ದಲ್ಲಿ, ಕಾರಣಗಳ ಸಮಾಧಾನ ಮಾಡುವ ಮೂಲಕ ಅವರು ತಮ್ಮ ಹಳೆ ನಾಲ್ಕು ಕಂತುಗಳ ಹಣವನ್ನು ಪಡೆಯಬಹುದಾಗಿದೆ. ಆದರೆ, ಯಾವುದೇ ಓರ್ವ ರೈತನ ಹೆಸರನ್ನು ರಾಜ್ಯ ಸರ್ಕಾರಗಳು ತಿರಸ್ಕರಿಸಿದ್ದರೆ, ಆ ರೈತರು ಈ ಯೋಜನೆಗೆ ಅರ್ಹರಾಗಿಲ್ಲ ಎಂಬುದೆ ಅದರ ಅರ್ಥ. ನಿಮಗೆ ಸಲ್ಲಬೇಕಾದ ಹಣದಲ್ಲಿ ವಿಳಂಬ ಉಂಟಾಗುತ್ತಿದ್ದರೆ ನೀವು ನೀಡಿರುವ ಮಾಹಿತಿಯನ್ನು ಒಮ್ಮೆ ಪುನಃ ಪರಿಶೀಲಿಸಿ. ತಪ್ಪುಗಳಿದ್ದರೆ ಅವುಗಳನ್ನು ಕೂಡಲೇ ಸರಿಪಡಿಸಿ. ಮುಂದಿನ ಕಂತಿನ ಜೊತೆಗೆ ಹಳೆ ಕಂತಿನ ಹಣ ಕೂಡ ನಿಮ್ಮ ಖಾತೆಗೆ ಬರಲಿದೆ.